Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕಳೆದೈದು ವರ್ಷಗಳಲ್ಲಿ ಕೇಂದ್ರೀಯ...

ಕಳೆದೈದು ವರ್ಷಗಳಲ್ಲಿ ಕೇಂದ್ರೀಯ ವಿವಿಗಳು, ಐಐಟಿಗಳಿಂದ 25 ಸಾವಿರ SC, ST, OBC ವಿದ್ಯಾರ್ಥಿಗಳು ಡ್ರಾಪ್ ಔಟ್

ದಲಿತ ವಿದ್ಯಾರ್ಥಿಗಳನ್ನು ಕಾಡುವ ಜಾತಿ ತಾರತಮ್ಯವನ್ನು ಮುಚ್ಚಿಡುವ ಹುನ್ನಾರ

ವಾರ್ತಾಭಾರತಿವಾರ್ತಾಭಾರತಿ30 July 2023 7:29 PM IST
share
ಕಳೆದೈದು ವರ್ಷಗಳಲ್ಲಿ ಕೇಂದ್ರೀಯ ವಿವಿಗಳು, ಐಐಟಿಗಳಿಂದ 25 ಸಾವಿರ SC, ST, OBC ವಿದ್ಯಾರ್ಥಿಗಳು ಡ್ರಾಪ್ ಔಟ್

ಕಳೆದೈದು ವರ್ಷಗಳಲ್ಲಿ ಕೇಂದ್ರೀಯ ವಿವಿಗಳು ಮತ್ತು ಐಐಟಿಗಳಿಂದ ಡ್ರಾಪ್ ಔಟ್ ಆದ ಪರಿಶಿಷ್ಟ ಜಾತಿ ​ಅಂದ್ರೆ ಎಸ್‌ಸಿ​ , ಪರಿಶಿಷ್ಟ ಪಂಗಡ ​ಅಂದ್ರೆ ಎಸ್‌ಟಿ​ , ಇತರ ಹಿಂದುಳಿದ ವರ್ಗಗಳು​ ಅಂದ್ರೆ ಒಬಿಸಿ​ ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ಒಟ್ಟು ವಿದ್ಯಾರ್ಥಿಗಳು 25,593. ಕೇಂದ್ರ ಸರ್ಕಾರ ರಾಜ್ಯಸಭೆಗೆ ಬುಧವಾರ ಕೊಟ್ಟಿರೋ ಮಾಹಿತಿ ಇದು. ಹೆಚ್ಚಿನ ಪ್ರಮಾಣದಲ್ಲಿ ಡ್ರಾಪ್ ಔಟ್ ಆದವರು ಸ್ನಾತಕೋತ್ತರ ಮತ್ತು ಪಿಎಚ್ಡಿ ವಿದ್ಯಾರ್ಥಿಗಳಾಗಿದ್ದಾರೆ ಎಂಬ ಅಂಶ ಕೂಡ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಕೊಟ್ಟಿರುವ ಮಾಹಿತಿಯಿಂದ ಗೊತ್ತಾಗುತ್ತದೆ.

ಆದರೂ ಇದು ನಿಖರವಾದ ಅಂಕಿಅಂಶವಲ್ಲ ಎಂಬುದನ್ನು ಕೂಡ ವರದಿಗಳು ಹೇಳುತ್ತಿವೆ. ​ಇಷ್ಟು ದೊಡ್ಡ ಪ್ರಮಾಣದಲ್ಲಿ ಡ್ರಾಪ್ ಔಟ್ಗೆ ಕಾರಣಗಳೇನು?. ಈ ಕಠೋರ ಸತ್ಯ ಎಲ್ಲರಿಗೂ ಗೊತ್ತಿದ್ದರೂ, ಸರ್ಕಾರ ಎಷ್ಟು ಚಂದದ ಕತೆ ಹೇಳುತ್ತದೆ ನೋಡಿ. ಸರ್ಕಾರಿ ಉದ್ಯೋಗದ ಕಾರಣಕ್ಕೆ ಸ್ನಾತಕೋತ್ತರ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳು ಇಲ್ಲಿಂದ ಬಿಟ್ಟುಹೋಗುತ್ತಾರೆ ಎಂಬುದು ಅದು ಹೇಳುವ ಕಾರಣಗಳಲ್ಲಿ ಒಂದು. ಇನ್ನು ಪದವಿಪೂರ್ವ ವಿದ್ಯಾರ್ಥಿಗಳು ತಪ್ಪು ಆಯ್ಕೆ, ಓದಿನಲ್ಲಿ ಹಿಂದಿರುವುದು ಮತ್ತು ವೈಯಕ್ತಿಕ, ವೈದ್ಯಕೀಯ ಕಾರಣಗಳು ಡ್ರಾಪ್ ಔಟ್ ಆಗುವುದಕ್ಕೆ ಕಾರಣ ಎನ್ನಲಾಗುತ್ತದೆ.

ಡ್ರಾಪ್‌ಔಟ್‌ಗಳನ್ನು ಕಡಿಮೆ ಮಾಡುವ ಪ್ರಯತ್ನಗಳು ವಿವಿಗಳು ಮತ್ತು ಐಐಟಿಗಳಲ್ಲಿ ನಡೆಯುತ್ತಿವೆ ಎಂದೂ ಸರ್ಕಾರ ಹೇಳುತ್ತದೆ. ಹೆಚ್ಚುಕಡಿಮೆ ಇದೇ ರೀತಿಯಲ್ಲಿಯೇ ವಿವಿಗಳು ಮತ್ತು ಐಐಟಿಗಳಲ್ಲಿನ ತಜ್ಞರು ಮಾತನಾಡುತ್ತಾರೆ.

ಐಐಟಿಗಳಲ್ಲಿ ಮೀಸಲು ವರ್ಗದ ವಿದ್ಯಾರ್ಥಿಗಳ ಡ್ರಾಪ್​ ಔಟ್ ಸಂಖ್ಯೆ

2019ರಲ್ಲಿ 1,510

2020ರಲ್ಲಿ 2,152

2021ರಲ್ಲಿ 2,411

2022ರಲ್ಲಿ 1,746

2023ರಲ್ಲಿ ಈವರೆಗೆ 320

ಕೌಟುಂಬಿಕ ಸಮಸ್ಯೆಗಳು, ಐಐಟಿಗಳಲ್ಲಿನ ಅಧಿಕ ಒತ್ತಡದ ವಾತಾವರಣಕ್ಕೆ ಹೊಂದಿಕೊಳ್ಳಲು ಆಗದೇ ಇರುವುದು, ಗೆಳೆಯರ ಬೆಂಬಲ ಇಲ್ಲದಿರುವುದು ಇಂಥ ಕಾರಣಗಳ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಧ್ಯಕ್ಷತೆಯಲ್ಲಿ ನಡೆದ ಐಐಟಿ ಕೌನ್ಸಿಲ್‌ ಸಭೆಯಲ್ಲಿ ಚರ್ಚೆಯಾಗಿತ್ತೆಂಬುದೇನೋ ನಿಜ. ಆದರೆ, ಸರ್ಕಾರಿ ಉದ್ಯೋಗಗಳನ್ನು ಹಲವರು ಆರಿಸಿಕೊಳ್ಳುವುದನ್ನೇ ಡ್ರಾಪ್ ಔಟ್ಗೆ ಕಾರಣವೆಂದು ಸಾಮಾನ್ಯೀಕರಿಸಲಾಗುತ್ತದೆ. ಕೇಂದ್ರೀಯ ವಿವಿಗಳ ವಿಚಾರದಲ್ಲಿಯೂ ಸರ್ಕಾರವೇ ಪಟ್ಟಿಮಾಡಿಕೊಂಡಿರುವ ಕೆಲವು ಕಾರಣಗಳಿವೆ.

ಕೇಂದ್ರೀಯ ವಿವಿಗಳಿಂದ ಡ್ರಾಪ್ ಔಟ್ ಆದ ಮೀಸಲಾತಿ ವರ್ಗದ ವಿದ್ಯಾರ್ಥಿಗಳ ಸಂಖ್ಯೆ

2019ರಲ್ಲಿ 4,926

2020ರಲ್ಲಿ 5,410

2021ರಲ್ಲಿ 4,156

2022ರಲ್ಲಿ 2,962

2023ರಲ್ಲಿ ಈವರೆಗೆ ಆಗಿಲ್ಲ

ಮೀಸಲಾತಿ ವರ್ಗದ ವಿದ್ಯಾರ್ಥಿಗಳು ಡ್ರಾಪ್ಔಟ್ ಆಗುವುದಕ್ಕೆ ಆರ್ಥಿಕ ತೊಂದರೆ, ಕುಟುಂಬಕ್ಕಾಗಿ ದುಡಿಯಬೇಕಾದ ಹೊಣೆ, ಇನ್ನು ವಿದ್ಯಾರ್ಥಿನಿಯರಿಗೆ ಮದುವೆಯಾಗಲು ಕುಟುಂಬದಲ್ಲಿನ ಒತ್ತಡ ಕಾರಣವೆಂದು ಪ್ರಾಧ್ಯಾಪಕರು ಹೇಳುತ್ತಾರೆ. ದಲಿತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಡ್ರಾಪ್ ಔಟ್ಗೆ ಇವರು ಗುರುತಿಸುವ ಕಾರಣಗಳು ನಿಜವೇ ಇರಬಹುದು. ಆದರೆ ಅಷ್ಟು ಮಾತ್ರವೇ ಅಲ್ಲ ಮತ್ತು ಅದಕ್ಕಿಂತ ಹೆಚ್ಚಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಸಿನೊಳಗೂ ದಲಿತ ವಿದ್ಯಾರ್ಥಿಗಳನ್ನು ಕಾಡುವ ಜಾತಿ ಭೂತ ಅವರನ್ನು ಎಲ್ಲ ದಿಕ್ಕುಗಳಿಂದ ಹರಿದು ತಿನ್ನುತ್ತದೆ ಎಂಬ ಸತ್ಯವೂ ಇದೆ.

ಮಹಿಳೆಯರಿಗೆ, ದಲಿತರಿಗೆ, ಹಿಂದುಳಿದವರಿಗೆ ತಾನು ಬಹಳ ದೊಡ್ಡ ಉಪಕಾರ ಮಾಡುತ್ತಿದ್ದೇನೆ ಎಂದು ಕೊಚ್ಚಿಕೊಳ್ಳುವ ಸರ್ಕಾರ, ತನ್ನ ನದರಿನಡಿಯಲ್ಲಿಯೇ ನಡೆಯುವ ಈ ಜಾತಿ ತಾರತಮ್ಯದ ವಿಚಾರ ಎತ್ತುವುದಕ್ಕೆ ತಯಾರಿಲ್ಲ. ದೇಶದಲ್ಲಿ ದಲಿತರ ಮಕ್ಕಳನ್ನು ಮೇಲ್ಜಾತಿಯ ಗೆಳೆಯರು ಮತ್ತು ಶಿಕ್ಷಕರು ಪ್ರೀತಿಯಿಂದ ಕಾಣುವ ವಾತಾವರಣ, ಯಾವ ಕೀಳರಿಮೆಯೂ ಇಲ್ಲದೆ ಅವರು ಓದುವುದು, ಮುಕ್ತವಾಗಿ ಬೆರೆಯುವುದು, ಮಾತನಾಡುವುದು, ತಮ್ಮೊಳಗಿನ ಪ್ರತಿಭೆಯನ್ನು ತೋರಿಸಿಕೊಳ್ಳುವುದಕ್ಕೆ ಪೂರಕವಾದ ವಾತಾವರಣ ಈ ದೇಶದಲ್ಲಿ ಇಷ್ಟು ಕಾಲದ ನಂತರವಾದರೂ ಸಾಧ್ಯವಾಗಿದೆಯೆ ಎಂದು ​ಮೊದಲು ಪ್ರಾಮಾಣಿಕವಾಗಿ ಪ್ರಶ್ನಿಸಿಕೊಳ್ಳಬೇಕಾಗಿದೆ.

ಸುಮಾರು ಒಂದು ವರ್ಷದ ಕೆಳಗೆ ಪ್ರೇಮ್ ಕುಮಾರ್ ಎಂಬ 17 ವರ್ಷದ ದಲಿತ ಬಾಲಕನೊಬ್ಬ ಅಮೆರಿಕದ ಅತ್ಯಂತ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಿಂದ 2.5 ಕೋಟಿ ರೂ. ಮೌಲ್ಯದ ಸ್ಕಾಲರ್ಷಿಪ್ ಪಡೆಯುತ್ತಾನೆ. ವಿಶ್ವಾದ್ಯಂತ ಡೈಯರ್ ಫೆಲೋಶಿಪ್‌ಗೆ ಆಯ್ಕೆಯಾದ ಆರು ವಿದ್ಯಾರ್ಥಿಗಳಲ್ಲಿ ಆತ ಕೂಡ ಒಬ್ಬ. ಅವನು ದಿನಗೂಲಿ ಕೆಲಸಗಾರನ ಮಗ. ತನ್ನ ಕುಟುಂಬದಲ್ಲಿ ಮೊದಲ ಕಾಲೇಜು ವಿದ್ಯಾರ್ಥಿ ಮತ್ತು ಶಾಲೆಗೆ ಹೋದ ಮೊದಲ ತಲೆಮಾರಿನವನು.

ಹಾಗಾದರೆ, ದಲಿತ ವಿದ್ಯಾರ್ಥಿಯೊಬ್ಬ ತನ್ನ ದೇಶದಲ್ಲಾಗಿದ್ದರೆ ಅಂಥದೊಂದು ಪ್ರತಿಷ್ಠಿತ ಸ್ಕಾಲರ್ಷಿಪ್ ಪಡೆಯುವ ಮಟ್ಟಕ್ಕೆ ಮುಕ್ತ ವಾತಾವರಣದಲ್ಲಿ ಓದಿ, ತನಗಿದ್ದ ಅರ್ಹತೆ ಸಾಬೀತುಪಡಿಸಿಕೊಳ್ಳುವುದು ಸಾಧ್ಯವಿತ್ತೆ?. ದೇಶದ ಜನಸಂಖ್ಯೆಯ ಕಾಲುಭಾಗದಷ್ಟು ದಲಿತರೇ ಇದ್ದರೂ ಅವರು ಇಲ್ಲಿನ ಸರ್ಕಾರಗಳ ಪಾಲಿಗೆ ಮತದಾರರು ಮಾತ್ರ. ಸಾಮಾಜಿಕ ಸಮಾನತೆ ಅವರ ಪಾಲಿಗಿನ್ನೂ ಮರೀಚಿಕೆ. ಜಾತಿ ತಾರತಮ್ಯ ಅವರನ್ನು ನಿರಂತರವಾಗಿ ಕಾಡುತ್ತಲೇ ಇದೆ.

​ಶಿಕ್ಷಣ ಕ್ಷೇತ್ರದಲ್ಲೂ ಇದು ಮುಂದುವರಿಯುವುದು​ ದುರಂತ​. ಮೀಸಲಾತಿ ಇದೆಯೆಂಬುದೇನೋ ನಿಜ. ಆದರೆ ಅಂಥ ಸವಲತ್ತು ಇದೆಯೆಂಬ ಕಾರಣಕ್ಕೇ ದಲಿತ ವಿದ್ಯಾರ್ಥಿಗಳನ್ನು ಇನ್ನಷ್ಟು ಅಸಹನೆಯಿಂದ ನೋಡುವ ಪರಿಪಾಠವೂ ಈ ಸಮಾಜದ ಭಾಗವೇ ಆಗಿದೆ. ಮೀಸಲಾತಿಗೆ ವಿರೋಧ ತೋರುವ ಉನ್ನತ ಜಾತಿಗಳು ದಲಿತರ ವಿರುದ್ಧ ತಾರತಮ್ಯ ಮತ್ತು ಅಪಪ್ರಚಾರ ನಡೆಸುವುದು, ಅವರ ಸ್ಥೈರ್ಯನ್ನು ಕುಗ್ಗಿಸುವುದು ನಡೆದೇ ಬಂದಿದೆ ಎಂಬುದನ್ನು ಅಧ್ಯಯನಗಳು ಹೇಳುತ್ತವೆ. ಕಡೆಗೆ ಉನ್ನತ ಜಾತಿಯವರ ಇಂಥ ವರ್ತನೆಗಳು ದಲಿತ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿಪಡೆಯುವ ಮಟ್ಟಕ್ಕೆ ಹೋಗುತ್ತದೆ.

ಉನ್ನತ ಜಾತಿಗಳ ವಿದ್ಯಾರ್ಥಿಗಳಿಗೆ ಹೋಲಿಸಿದಲ್ಲಿ ಐಐಟಿಯಂಥ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಡ್ರಾಪ್ ಔಟ್ ಆಗುವ ದಲಿತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. ಇತ್ತೀಚೆಗಂತೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇವೆ.

ದೇಶ ಸ್ವಾತಂತ್ರ್ಯ ಕಂಡು 75 ವರ್ಷಗಳ ಬಳಿಕವೂ, ಈ ಸರ್ಕಾರ ಅಮೃತ ಕಾಲ, ಕರ್ತವ್ಯ ಕಾಲ ಎಂದು ಹೆಸರಿಡುತ್ತ, ಹೆಸರು ಬದಲಿಸುತ್ತ ಕೂತಿದೆಯೆ ಹೊರತು ಈ ಸಮಾಜದ ದಮನಿತರ ಕಡೆಗೆ ಕಣ್ಣು ಹಾಯಿಸಿಲ್ಲ. ಅವರ ಬದುಕಿನ ಉನ್ನತಿ ಈ ಸರ್ಕಾರದ ಚಿಂತೆಯಲ್ಲವೇ ಅಲ್ಲ. ಶಿಕ್ಷಣ ಸಂಸ್ಥೆಗಳಲ್ಲಿನ ತಾರತಮ್ಯ, ದಬ್ಬಾಳಿಕೆಯ ಪರಿಣಾಮವಾಗಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿ ಬದುಕು ಮುಗಿಸಿಕೊಳ್ಳುತ್ತಿರುವುದು ಇವರ ಮನಸ್ಸನ್ನು ಕಲಕುವುದೇ ಇಲ್ಲ.

ಕಳೆದ ವರ್ಷ ಜೆಎನ್‌ಯು ಅಧ್ಯಾಪಕರೊಬ್ಬರು ಪಿಎಚ್‌ಡಿ ಪ್ರವೇಶ ವೈವಾ ಪರೀಕ್ಷೆಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳನ್ನು ನೀಡಿ ಅವರು ಅನುತ್ತೀರ್ಣರಾಗುವಂತೆ ಮಾಡಿದ ಪ್ರಕರಣ ಸಂಸತ್ತಿನಲ್ಲಿ ಪ್ರಸ್ತಾಪವಾಗಿತ್ತು. ಈ ಪ್ರಕರಣ ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿನ ತಾರತಮ್ಯದ ಒಂದು ಉದಾಹರಣೆ ಅಷ್ಟೆ.

ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ಕಟು ವಾಸ್ತವವಾಗಿದೆ. ಇದೇ ವರ್ಷದ ಆರಂಭದಲ್ಲಿ ಮೇಲ್ಜಾತಿಯವರ ದಬ್ಬಾಳಿಕೆ ಎದುರಿಸಲಾರದೆ ಒಂದೇ ತಿಂಗಳಲ್ಲಿ ಮೂವರು ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಚ್ಚಿ ಬೀಳಿಸಿದ ಸತ್ಯ.

ಐಐಟಿ ಬಾಂಬೆಯಲ್ಲಿ ಬಿಟೆಕ್ ವಿದ್ಯಾರ್ಥಿ ದರ್ಶನ್ ಸೋಲಂಕಿ ಆತ್ಕಹತ್ಯೆಗೆ ಶರಣಾದರೆ, ತೆಲಂಗಾಣದ ವಾರಂಗಲ್ ನ ಕಾಕತೀಯ ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಧಾರವತ್ ಪ್ರೀತಿ ರ್ಯಾಗಿಂಗ್ ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರು. ಮತ್ತೊಂದು ಪ್ರಕರಣದಲ್ಲಿಯೂ ಬಲಿಯಾದದ್ದು ವೈದ್ಯಕೀಯ ವಿದ್ಯಾರ್ಥಿಯೇ. ಪಂಜಾಬ್‌ನ ಅಮೃತಸರದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕೊಠಡಿಯಲ್ಲಿ ಪರಿಶಿಷ್ಟ ಜಾತಿಯ ಎಂಬಿಬಿಎಸ್ ವಿದ್ಯಾರ್ಥಿ ಪಂಪೋಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಗಳು ದೇಶಾದ್ಯಂತ ಕ್ಯಾಂಪಸ್‌ಗಳಲ್ಲಿ ಬೃಹದಾಕಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಜಾತಿ ತಾರತಮ್ಯದ ಸಂಕೇತಗಳಾಗಿವೆ.

ಐಐಟಿಗಳಲ್ಲಿ ಸಾಮಾನ್ಯವಾಗಿ ಗ್ರಾಮೀಣ ಪರಿಸರದಿಂದ ಬಂದವರಾಗಿರುವ ದಲಿತ ಹಿನ್ನೆಲೆಯ ವಿದ್ಯಾರ್ಥಿಗಳ ಆತ್ಮವಿಶ್ವಾಸವೇ ಕುಗ್ಗಿಹೋಗುವಂತೆ ಮಾಡುವ ಸನ್ನಿವೇಶವಿದೆ ಎಂಬುದು ಮತ್ತೆ ಮತ್ತೆ ಬಯಲಾಗುತ್ತಲೇ ಇರುತ್ತದೆ. ಈ ತಾರತಮ್ಯ ಎಲ್ಲಿಯವರೆಗೆಂದರೆ, ಮೇಲ್ಜಾತಿಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ಆಗ ಆ ವಿದ್ಯಾರ್ಥಿಯ ಮಾನಸಿಕ ಸ್ಥಿತಿ ಬಗ್ಗೆ ಮಾತನಾಡಲಾಗುತ್ತದೆ. ಅದೇ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ಶೈಕ್ಷಣಿಕ ಒತ್ತಡ ಎದುರಿಸುವ ಸಾಮರ್ಥ್ಯ ಇರಲಿಲ್ಲ ಎಂದುಬಿಡಲಾಗುತ್ತದೆ. ಇಂಥ ತಾರತಮ್ಯಗಳಿಗೆ ಕೊನೆಯೇ ಇಲ್ಲವೆನ್ನುತ್ತವೆ ವರದಿಗಳು.

ಇಷ್ಟೆಲ್ಲ ಇದ್ದೂ ತಾರತಮ್ಯವಿಲ್ಲ ಎಂದು ಸಾರಾಸಗಟಾಗಿ ಅಲ್ಲಗಳೆಯುವ ಅಧಿಕಾರಸ್ಥರು, ಪರಿಣತರು ಈ ವ್ಯವಸ್ಥೆಯ ಭಾಗವೇ ಆಗಿದ್ದಾರೆ. ದರ್ಶನ್ ಸೋಲಂಕಿ ಆತ್ಮಹತ್ಯೆ ಸಂದರ್ಭದಲ್ಲಿ ಒಂದು ವಿಚಾರ ವರದಿಯಾಗಿತ್ತು. ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಸೇವೆ ಒದಗಿಸಲು ಇರುವ ವಿದ್ಯಾರ್ಥಿಗಳ ಸ್ವಾಸ್ಥ್ಯ ಕೇಂದ್ರ ನಡೆಸುತ್ತಿದ್ದಾಕೆ ಸ್ವತಃ ಮೀಸಲಾತಿ ವಿರೋಧಿಯಾಗಿದ್ದರಂತೆ.

​ಅಂಥ ಜಾತಿವಾದಿ ಮನಃಸ್ಥಿತಿಯ ಕೌನ್ಸೆಲರ್ ಜಾತಿ ತಾರತಮ್ಯದ ಕಾರಣಕ್ಕೆ ನೊಂದ ದಲಿತ ವಿದ್ಯಾರ್ಥಿಗೆ ಎಂಥ ಸಾಂತ್ವನ ಹೇಳಲು ಸಾಧ್ಯ?.

ಇದಾವುದರ ಬಗ್ಗೆಯೂ ಒಮ್ಮೆಯೂ ಗಂಭೀರವಾಗಿ ಯೋಚಿಸದೆ, ಕಡೆಗೆ ಸರ್ಕಾರಿ ಉದ್ಯೋಗ ಸಿಕ್ಕಿದ್ದಕ್ಕೆ ದಲಿತ ವಿದ್ಯಾರ್ಥಿಗಳು ವಿವಿಗಳಿಂದ, ಐಐಟಿಗಳಿಂದ ಡ್ರಾಪ್ ಔಟ್ ಆಗುತ್ತಿದ್ದಾರೆ, ತನಗೆ ಅವರನ್ನು ಆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಪಾರ ಕಳಕಳಿ ಇದೆ ಎಂದು ನಟಿಸುವುದು ಮಾತ್ರ ನಿಲ್ಲುವುದಿಲ್ಲ.

ಇವರದೊಂದು ಥರ ರೋಲ್, ಕ್ಯಾಮೆರಾ, ಆಕ್ಷನ್. ಅದರ ಹಿಂದೆ ಎಂಥದೂ ಇಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X