Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪ್ರತಿಪಕ್ಷಗಳು ಒಂದಾದರೆ ಭಾರತದ ಜನತಂತ್ರ...

ಪ್ರತಿಪಕ್ಷಗಳು ಒಂದಾದರೆ ಭಾರತದ ಜನತಂತ್ರ ಸುರಕ್ಷಿತ

ಸನತಕುಮಾರ ಬೆಳಗಲಿಸನತಕುಮಾರ ಬೆಳಗಲಿ26 Jun 2023 12:00 AM IST
share
ಪ್ರತಿಪಕ್ಷಗಳು ಒಂದಾದರೆ ಭಾರತದ ಜನತಂತ್ರ ಸುರಕ್ಷಿತ
ಇದು ಬರೀ ಚುನಾವಣೆಯ ಸೋಲು, ಗೆಲುವಿನ ಪ್ರಶ್ನೆಯಲ್ಲ. ಯಾರನ್ನೋ ಪ್ರಧಾನಿಯನ್ನಾಗಿ ಮಾಡುವ ಇಲ್ಲವೇ ಕೆಳಗಿಳಿಸುವ ಪ್ರಶ್ನೆಯಲ್ಲ. ಬಹುತ್ವ ಭಾರತದ ಅಡಿಪಾಯಕ್ಕೆ ಮತ್ತು ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿರುವಾಗ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಪ್ರತಿಪಕ್ಷಗಳು, ಜನಪರ ಸಂಘಟನೆಗಳು ಮತ್ತು ಪ್ರಜ್ಞಾವಂತ ನಾಗರಿಕರು ಒಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪಟ್ನಾದಲ್ಲಿ ನಡೆದ ಸಭೆ ತುಂಬಾ ಮಹತ್ವದ್ದಾಗಿದೆ.

ಬರೀ ಕೋಮುವಾದಿ, ಜನದ್ವೇಷಿ ಕಾರ್ಯಸೂಚಿಗಳನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲುವುದು ಸಾಧ್ಯವಿಲ್ಲ ಎಂಬುದು ಕರ್ನಾಟಕದ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಖಚಿತವಾಗಿದೆ. ಲವ್ ಜಿಹಾದ್, ಹಿಜಾಬ್, ಗೋವು ಮಾರಾಟ, ಮತಾಂತರದಂಥ ಪ್ರಚೋದನಕಾರಿ ವಿಷಯಗಳು ಜನಸಾಮಾನ್ಯರನ್ನು ಕೋಮು ಆಧಾರದಲ್ಲಿ ವಿಭಜಿಸಲು, ಬಹುಸಂಖ್ಯಾತರನ್ನು ದಾರಿ ತಪ್ಪಿಸಿ ವೋಟು ಬಾಚಿಕೊಳ್ಳಲು ಕೆಲವು ಸಮಯ ನೆರವಾಗಬಹುದು. ಆದರೆ, ಆರ್ಥಿಕ, ಸಾಮಾಜಿಕ ಸಮಸ್ಯೆಗಳಲ್ಲಿ ಬೆಂದು ಹೋಗುತ್ತಿರುವ ಜನರು ಕೊನೆಗೆ ಕೂಡಿ ಬಾಳುವುದನ್ನು ವಿರೋಧಿಸುವ ಶಕ್ತಿಗಳನ್ನು ಸೋಲಿಸಲೇಬೇಕಾಗುತ್ತದೆ. ಭಾವನಾತ್ಮಕ ವಿಷಯಗಳು ಬಹಳ ಕಾಲ ಕೆಲಸಕ್ಕೆ ಬರುವುದಿಲ್ಲ.

ಹೀಗಾಗಿ ಕರ್ನಾಟಕದ ಚುನಾವಣಾ ಫಲಿತಾಂಶದಿಂದ ಸ್ಫೂರ್ತಿ ಮತ್ತು ಉತ್ಸಾಹ ಪಡೆದುಕೊಂಡ ದೇಶದ ಹಲವು ಪ್ರಮುಖ ಪ್ರತಿಪಕ್ಷಗಳು ಒಗ್ಗೂಡಿ ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿವೆ.

ಬಿಹಾರ ರಾಜಧಾನಿ ಪಟ್ನಾದಿಂದ ಪ್ರಾರಂಭವಾಗುವ ಯಾವುದೇ ಹೋರಾಟವು ಭಾರತದ ದಿಕ್ಕನ್ನು ಬದಲಿಸಿದ ಉದಾಹರಣೆಗಳಿವೆ. 1974ರಲ್ಲಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಆಡಳಿತದ ವಿರುದ್ಧ ಐತಿಹಾಸಿಕ ಜೆಪಿ ಚಳವಳಿ ಆರಂಭವಾಗಿದ್ದು ಪಟ್ನಾದಿಂದ. ಕೊನೆಗೆ ಇದು ಕಾಂಗ್ರೆಸ್ ಏಕ ಚಕ್ರಾಧಿಪತ್ಯಕ್ಕೆ ಕೊನೆ ಹಾಡಿತು. ಅದರ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕಕಾರಿಯಾದ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳು ಬಲಗೊಂಡು ಕೇಂದ್ರದ ಅಧಿಕಾರ ಸೂತ್ರ ಹಿಡಿಯಲು ಕಾರಣವಾಯಿತೆಂಬುದು ನಿಜ.

ಅದರ ಬಗ್ಗೆ ಸಾಕಷ್ಟು ವಿಮರ್ಶೆಗಳು ನಡೆದಿವೆ. ಈಗ ಪ್ರತಿಪಕ್ಷಗಳು ಒಂದು ಗೂಡುತ್ತಿರುವುದು ಜೆಪಿ ಚಳವಳಿಯಿಂದ ಬಲಗೊಂಡು ಭಾರತದ ಅಧಿಕಾರ ಸೂತ್ರ ಹಿಡಿದಿರುವ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಲು.

ಆದರೆ, ಪ್ರತಿಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯ ಬದಿಗೊತ್ತಿ ಒಂದಾಗುವುದು ಸುಲಭವಲ್ಲ. ಪಟ್ನಾದಲ್ಲಿ ನಡೆದ ಮೊದಲ ಸಭೆಯ ನಂತರ ಕಾಂಗ್ರೆಸ್ ಬಗ್ಗೆ ಆಮ್ ಆದ್ಮಿ ಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಸೇವಾವಲಯದ ಮೇಲಿನ ನಿಯಂತ್ರಣವನ್ನು ಕುರಿತು ಸುಗ್ರೀವಾಜ್ಞೆ ತಂದಿರುವ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್ ಬೆಂಬಲಿಸಬೇಕೆಂದು ಪಟ್ನಾ ಸಭೆಯಲ್ಲಿ ಭಾಗವಹಿಸಿದ್ದ ಎಎಪಿ ಸಂಸ್ಥಾಪಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್‌ಮಾನ್ ಪಟ್ಟು ಹಿಡಿದರು. ಈ ಬಗ್ಗೆ ಸಮಯ ಬಂದಾಗ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ ಕಾಂಗ್ರೆಸ್ ನಾಯಕರ ಮಾತಿನಿಂದ ಅರವಿಂದ ಕೇಜ್ರಿವಾಲ್ ಮುನಿಸಿಕೊಂಡರು. ವಿಭಿನ್ನ ವಿಚಾರಧಾರೆಯ ಪಕ್ಷಗಳು ಒಂದೇ ವೇದಿಕೆಗೆ ಬರುವಾಗ ಇವೆಲ್ಲ ಸಾಮಾನ್ಯ. ಕ್ರಮೇಣ ಬಿಕ್ಕಟ್ಟು ಬಗೆಹರಿದು ಒಂದು ಗೂಡಿದ ಹಲವಾರು ಉದಾಹರಣೆಗಳಿವೆ.

ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಮುಸ್ಲಿಮ್ ಮತ್ತು ಕ್ರೈಸ್ತ ವಿರೋಧಿ ಉನ್ಮಾದ ಕೆರಳಿಸಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದ್ದರೂ ಈಗ ಮೊದಲಿನ ಪ್ರಭಾವ ಕೋಮುವಾದಿ ಪಕ್ಷಕ್ಕಿಲ್ಲ. ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ಅದು ಹೇಗೆ ಅಧಿಕಾರಕ್ಕೆ ಬಂತೆಂಬುದನ್ನು ವಿವರಿಸಬೇಕಾಗಿಲ್ಲ. ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಸೂತ್ರ ಹಿಡಿದಿರುವುದು ಆಪರೇಶನ್ ಕಮಲ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು. ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ನಡುವಿನ ಒಡಕು ಬಿಜೆಪಿಗೆ ನೆರವಾಯಿತು.

ಇದು ಬರೀ ಚುನಾವಣೆಯ ಸೋಲು, ಗೆಲುವಿನ ಪ್ರಶ್ನೆಯಲ್ಲ. ಯಾರನ್ನೋ ಪ್ರಧಾನಿಯನ್ನಾಗಿ ಮಾಡುವ ಇಲ್ಲವೇ ಕೆಳಗಿಳಿಸುವ ಪ್ರಶ್ನೆಯಲ್ಲ. ಬಹುತ್ವ ಭಾರತದ ಅಡಿಪಾಯಕ್ಕೆ ಮತ್ತು ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿರುವಾಗ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಪ್ರತಿಪಕ್ಷಗಳು, ಜನಪರ ಸಂಘಟನೆಗಳು ಮತ್ತು ಪ್ರಜ್ಞಾವಂತ ನಾಗರಿಕರು ಒಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪಟ್ನಾದಲ್ಲಿ ನಡೆದ ಸಭೆ ತುಂಬಾ ಮಹತ್ವದ್ದಾಗಿದೆ.

ಔರಂಗಜೇಬ್ ಮತ್ತು ಶಿವಾಜಿ ಕತೆಗಳನ್ನು ಹೇಳಿಕೊಂಡು ಬಹಳ ಕಾಲ ಪ್ರಚಲಿತ ರಾಜಕೀಯದಲ್ಲಿ ಗೆಲುವು ಸಾಧಿಸಲು ಆಗುವುದಿಲ್ಲ. ಒಂದು ನಂಬಲರ್ಹವಾದ ಸಮರ್ಥ ಪರ್ಯಾಯ ರೂಪುಗೊಂಡರೆ ಕರ್ನಾಟಕದ ಗ್ಯಾರಂಟಿಯಂಥ ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡಿದರೆ ಮತದಾರರು ಕೋಮುವಾದಿಗಳನ್ನು ತಿರಸ್ಕರಿಸುತ್ತಾರೆ ಎಂಬುದಕ್ಕೆ ಕರ್ನಾಟಕ ಒಂದು ತಾಜಾ ಉದಾಹರಣೆಯಾಗಿದೆ. ಕರ್ನಾಟಕದ ಪ್ರಯೋಗ ಎಷ್ಟು ಪರಿಣಾಮಕಾರಿಯಾಗಿದೆಯೆಂದರೆ ಬಿಜೆಪಿಯೇ ತನ್ನ ಹಿಂದುತ್ವ ಅಜೆಂಡಾವನ್ನು ಬದಿಗೊತ್ತಿ ಗ್ಯಾರಂಟಿ ಯೋಜನೆಯನ್ನು ನಕಲು ಮಾಡಲು ಮುಂದಾಗಿದೆ. ಇದನ್ನೇ ನಕಲು ಮಾಡಿದ ಮಧ್ಯಪ್ರದೇಶದ ಬಿಜೆಪಿ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ತಮ್ಮ ರಾಜ್ಯದಲ್ಲಿ ಗೃಹ ಲಕ್ಷ್ಮೀ ಮಾದರಿಯಲ್ಲಿ ಮಹಿಳೆಯರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ನೀಡಲು ಮುಂದಾಗಿದ್ದಾರೆ. ಇವರು ಮುಂಚೆ ಎಷ್ಟು ಅತಿರೇಕದ ಹಿಂದುತ್ವವಾದಿಯಾಗಿದ್ದರು ಎಂದರೆ ಬಾಯಿ ಬಿಟ್ಟರೆ ಮುಸಲ್ಮಾನರ ವಿರುದ್ಧ ಬೆಂಕಿ ಕಾರುತ್ತಿದ್ದರು.

ರಾಜ್ಯಗಳಲ್ಲಿ ಬಿಜೆಪಿ ಸೋತಿದ್ದರೂ ಕೇಂದ್ರದಲ್ಲಿ ಅದು ಅಧಿಕಾರದಲ್ಲಿ ಇರುವವರೆಗೆ ಅಪಾಯ ತಪ್ಪಿದ್ದಲ್ಲ. ಶೈಕ್ಷಣಿಕ ರಂಗವನ್ನು ಕೋಮುವಾದೀಕರಣಗೊಳಿಸಿ ಹದಗೆಡಿಸಿದಂತೆ ಕ್ರಮೇಣ ಬಾಬಾಸಾಹೇಬರ ಸಂವಿಧಾನವನ್ನು ಮೂಲೆಗುಂಪು ಮಾಡಿ ಮನುವಾದಿ ಹಿಂದುರಾಷ್ಟ್ರ ನಿರ್ಮಿಸುವುದು ಇವರ ಅಂತಿಮ ಗುರಿಯಾಗಿದೆ. 1925 ಆರೆಸ್ಸೆಸ್ ಸ್ಥಾಪನೆಯಾದ ವರ್ಷ, ಇನ್ನೆರಡು ವರ್ಷ ಗತಿಸಿದರೆ ಅಂದರೆ 2025ರಲ್ಲಿ ಅದರ ಶತಮಾನೋತ್ಸವ ವರ್ಷ. ಈ ನೂರನೇ ವರ್ಷದ ಸಂದರ್ಭದಲ್ಲಿ ಹಿಂದೂ ರಾಷ್ಟ್ರದ ಗುರಿ ಸಾಧಿಸಲು ಭಾರೀ ಷಡ್ಯಂತ್ರ ನಡೆದಿದೆ. 2024ರ ಲೋಕಸಭಾ ಚುನಾವಣೆ ಈ ದೃಷ್ಟಿಯಿಂದ ನಿರ್ಣಾಯಕ. ಸದರಿ ಚುನಾವಣೆಯಲ್ಲಿ ಬಿಜೆಪಿ ಸೋತರೆ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳು ಸುರಕ್ಷಿತವಾಗಿ ಉಳಿಯುತ್ತವೆ. ಹಾಗಾಗಿಯೇ ಪಟ್ನಾದ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ಶರದ್ ಪವಾರ್, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ಶಿವಸೇನೆಯ ಉದ್ಧವ ಠಾಕ್ರೆ, ಆಪ್ ಮುಖಂಡ ಅರವಿಂದ ಕೇಜ್ರಿವಾಲ್, ಕಮ್ಯುನಿಸ್ಟ್ ಪಕ್ಷದ ನಾಯಕ ಡಿ. ರಾಜಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಮೊದಲಾದವರು ಪಾಲ್ಗೊಂಡಿದ್ದರು.

ಬಿಜೆಪಿಯಂಥ ಕೋಮುವಾದಿ ಪಕ್ಷವನ್ನು ಬರೀ ಚಳವಳಿಯಿಂದ ಮಣಿಸಲು ಸಾಧ್ಯವಿಲ್ಲ. ದಿಲ್ಲಿಯಲ್ಲಿ ಅತ್ಯಂತ ಚಾರಿತ್ರಿಕ ವಾದ ರೈತ ಚಳವಳಿ ನಂತರವೂ ಉತ್ತರ ಪ್ರದೇಶದಂಥ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬಂತು.

ಹಾಗೆಂದು ಚಳವಳಿ ಮಾಡಬಾರದೆಂದಲ್ಲ. ಚಳವಳಿಯ ಜೊತೆಗೆ ಚುನಾವಣಾ ಗೆಲುವು ಮುಖ್ಯ. ಒಮ್ಮೆ ಪ್ರಜಾಪ್ರಭುತ್ವ ಮತ್ತು ಚುನಾವಣಾ ಪದ್ಧತಿಯನ್ನು ಒಪ್ಪಿಕೊಂಡ ನಂತರ ಅದರ ಮೂಲಕವೇ ಅಪಾಯಕಾರಿ ಶಕ್ತಿಗಳನ್ನು ಸೋಲಿಸಬೇಕಾಗುತ್ತದೆ. ಈ ಸೋಲು ಕೂಡ ಅವುಗಳ ಸಂಪೂರ್ಣ ಸೋಲಲ್ಲ. ಅದಕ್ಕಾಗಿ ಸುದೀರ್ಘವಾದ ಸೈದ್ಧಾಂತಿಕ ಸಮರವನ್ನು ನಡೆಸಬೇಕಾಗುತ್ತದೆ. ಅದನ್ನು ನಡೆಸಬೇಕೆಂದರೆ ಪ್ರಭುತ್ವದ ಆಡಳಿತ ಯಂತ್ರದ ಮೇಲಿನ ಫ್ಯಾಶಿಸ್ಟ್ ಶಕ್ತಿಗಳ ಹಿಡಿತವನ್ನು ತಪ್ಪಿಸಬೇಕಾಗುತ್ತದೆ.

ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳನ್ನು ರಾಜಕೀಯ ಅಧಿಕಾರದಿಂದ ದೂರವಿಟ್ಟರೆ ಮಾತ್ರ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಉಳಿಯುತ್ತದೆ ಎಂದು ಹೇಳುತ್ತಿದ್ದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕರಾಗಿದ್ದ ಹರ್‌ಕಿಷನ್ ಸಿಂಗ್ ಸುರ್ಜಿತ್ ಜೀವಂತ ಇರುವವರೆಗೆ ಬಿಜೆಪಿಯನ್ನು ಅಧಿಕಾರಕ್ಕೆ ಬರಲು ಬಿಡಲಿಲ್ಲ. ಎಲ್ಲ ರಾಜಕೀಯ ನಾಯಕರನ್ನು ತಮ್ಮತ್ತ ಸೆಳೆಯುವ ಲೋಹ ಚುಂಬಕ ವ್ಯಕ್ತಿತ್ವ ಅವರದ್ದು. ಎಂಭತ್ತು, ತೊಂಭತ್ತರ ದಶಕದಲ್ಲಿ ಸುರ್ಜಿತ್‌ರನ್ನು ರಾಜಕೀಯ ವಲಯದಲ್ಲಿ ಮಾತ್ರವಲ್ಲ ಮಾಧ್ಯಮಗಳಲ್ಲಿ ಚಾಣಕ್ಯ ಎಂದು ಕರೆಯುತ್ತಿದ್ದರು. ಯುಪಿಎ ಮೊದಲಿನ ಸರಕಾರ ಅಸ್ತಿತ್ವಕ್ಕೆ ಬರಲು ಸುರ್ಜಿತ್ ಮತ್ತು ಜ್ಯೋತಿ ಬಸು ಅವರ ಕೊಡುಗೆ ಅಪಾರ. ಮುಲಾಯಂ ಸಿಂಗ್ ಯಾದವ್, ಲಾಲು ಪ್ರಸಾದ್ ಯಾದವ್, ಶರದ್ ಪವಾರ್, ದೇವೇಗೌಡ, ಸೋನಿಯಾ ಗಾಂಧಿ ಹೀಗೆ ಘಟಾನುಘಟಿಗಳು ಸುರ್ಜಿತ್ ಅವರ ಸಲಹೆಗೆ ತಲೆ ಬಾಗುತ್ತಿದ್ದರು. ಆದರೆ ಇವರಿಬ್ಬರ (ಸುರ್ಜಿತ್ + ಜ್ಯೋತಿ ಬಸು) ನಿರ್ಗಮನದ ನಂತರ ಪ್ರತಿಪಕ್ಷ ಗಳಲ್ಲಿ ಒಂದು ವಿಧದ ಶೂನ್ಯ ಉಂಟಾಯಿತು.

ಈ ನಿಟ್ಟಿನಲ್ಲಿ ಪಟ್ನಾದಲ್ಲಿ ನಡೆದ ಪ್ರತಿಪಕ್ಷ ಗಳ ಸಭೆ ಮಹತ್ವದ್ದಾಗಿದೆ. ಈಗ ನಮ್ಮ ಮುಂದೆ ಇರುವ ಆಯ್ಕೆ ಎರಡೇ ಎರಡು. ಒಂದು ಫ್ಯಾಶಿಸ್ಟ್ , ಕೋಮುವಾದ ಮತ್ತು ಎರಡನೆಯದ್ದು ಸಮಾನ ಮನಸ್ಕ ಪ್ರತಿಪಕ್ಷಗಳ ಏಕತೆ. ಜನರ ಮುಂದೆ ಇವೆರಡರ ಆಯ್ಕೆ ಇಟ್ಟಾಗ ಮಾತ್ರ ಗೆಲುವು ಸಾಧಿಸಲು ಸಾಧ್ಯ. ಕೆಲವರು ಇನ್ನೂ ಮೂರನೇ ರಂಗದ ಭ್ರಮಾಲೋಕದಲ್ಲಿದ್ದಾರೆ. ಈಗ ಅದು ಅವಾಸ್ತವಿಕ. ಮೂರನೇ ರಂಗ ಎಂದು ಮಾಡಲು ಹೊರಟರೆ ಮತ್ತೆ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳ ಪ್ರತಿಪಕ್ಷಗಳ ಒಡಕನ್ನು ಉಪಯೋಗಿಸಿಕೊಂಡು ಅಧಿಕಾರಕ್ಕೆ ಬರುತ್ತವೆ. ಈ ಅಪಾಯದಿಂದ ಬಹುತ್ವ ಭಾರತವನ್ನು ಪಾರು ಮಾಡಲು ಪ್ರತಿಪಕ್ಷ ಏಕತೆ ಅಗತ್ಯ ಮತ್ತು ಅನಿವಾರ್ಯ.

ಈ ನಿಟ್ಟಿನಲ್ಲಿ ಪಟ್ನಾದಲ್ಲಿ ಜೂನ್ 23ರಂದು ನಡೆದ ಪ್ರತಿಪಕ್ಷ ಸಭೆ ಚಾರಿತ್ರಿಕವಾಗಿದೆ. ಮೊದಲ ಸಭೆಯಲ್ಲೇ ಒಮ್ಮತ ವೂಡುವುದಿಲ್ಲ. ಇನ್ನೂ ಇಂಥ ಹಲವಾರು ಸಭೆಗಳು ನಡೆದ ನಂತರ ಒಂದು ಸ್ಪಷ್ಟ ಪರ್ಯಾಯ ರೂಪುಗೊಳ್ಳುತ್ತದೆ. ಒಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಏಕತೆ ಮೂಡಿ ಬರಬೇಕಾಗಿದೆ. 553 ಸದಸ್ಯ ಬಲದ ಲೋಕಸಭೆಯಲ್ಲಿ ಕನಿಷ್ಠ 300 ಸ್ಥಾನಗಳನ್ನಾದರೂ ಪ್ರತಿಪಕ್ಷಗಳು ಗೆಲ್ಲಬೇಕು.

ಪ್ರತಿಪಕ್ಷಗಳು ಒಂದಾದರೆ ಇದೇನು ಅಸಾಧ್ಯವಲ್ಲ. ಪ್ರತಿಪಕ್ಷಗಳು ಒಂದಾಗದಂತೆ ನೋಡಿಕೊಳ್ಳಲು ಸಂಘಪರಿವಾರ ನಾನಾ ಕಸರತ್ತುಗಳನ್ನು ಮಾಡುತ್ತದೆ. ಸಿಬಿಐ, ಐಟಿಯಂಥ ಅಸ್ತ್ರಗಳನ್ನು ಬಳಸುತ್ತದೆ. ಇಂಥ ಎಲ್ಲಾ ಕುತಂತ್ರಗಳನ್ನು ಎದುರಿಸಿ ವಿಫಲಗೊಳಿಸಿ ಫ್ಯಾಶಿಸ್ಟ್ ಶಕ್ತಿಗಳನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದರೆ ಮಾತ್ರ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳು ಸುರಕ್ಷಿತವಾಗಿ ಉಳಿಯುತ್ತವೆ.

ಪ್ರತಿಪಕ್ಷಗಳ ವೋಟುಗಳು ವಿಭಜನೆಯಾಗಬಾರದು. ಕರ್ನಾಟಕದ ಮಾದರಿಯ ಗ್ಯಾರಂಟಿ ಕಾರ್ಯಕ್ರಮವನ್ನು ರಾಷ್ಟ್ರ ಮಟ್ಟದಲ್ಲಿ ರೂಪಿಸಬೇಕು. ಪ್ರತಿಯೊಂದು ರಾಜ್ಯಕ್ಕೂ ಆಯಾ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಬೇಕು. ಕಮ್ಯುನಿಸ್ಟ್ ನಾಯಕ ಸೀತಾರಾಮ ಯೆಚೂರಿ, ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ಶರದ್ ಪವಾರ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಥ ಅನುಭವಿಗಳು ಒಂದೆಡೆ ಕುಳಿತು ಸರಿಯಾದ ಕಾರ್ಯಕ್ರಮ ಆಧರಿತ ಪರ್ಯಾಯವನ್ನು ರೂಪಿಸಿದರೆ ಬಹುತ್ವ ಭಾರತದ ಆಧಾರ ಸ್ತಂಭವಾದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಗಳನ್ನು ಕಾಪಾಡಿಕೊಳ್ಳಬಹುದು

share
ಸನತಕುಮಾರ ಬೆಳಗಲಿ
ಸನತಕುಮಾರ ಬೆಳಗಲಿ
Next Story
X