Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸುಳ್ಳಿನ ಫ್ಯಾಕ್ಟರಿಗಳ ಮೇಲೆ ಯಾಕಿಲ್ಲ...

ಸುಳ್ಳಿನ ಫ್ಯಾಕ್ಟರಿಗಳ ಮೇಲೆ ಯಾಕಿಲ್ಲ ರೇಡ್ ?

► ಪತ್ರಕರ್ತರ ಮನೆಗೆ ಪೊಲೀಸ್ ದಾಳಿ, ಮೊಬೈಲ್, ಲ್ಯಾಪ್ ಟಾಪ್ ವಶಕ್ಕೆ ►ಸುದ್ದಿ ಸಂಸ್ಥೆ ಮೇಲೆ ಭಯೋತ್ಪಾದನೆ ಕೇಸು ಹಾಕುವ ಅಗತ್ಯವಿತ್ತೇ ? ► ಅದಾನಿ ಮೇಲೆ ಇಷ್ಟೆಲ್ಲಾ ಆರೋಪ ಬಂದ್ರೂ ಒಂದೇ ಒಂದು ರೇಡ್ ಆಗಿಲ್ಲ ಯಾಕೆ ?

ಆರ್. ಜೀವಿಆರ್. ಜೀವಿ15 Oct 2023 4:10 PM IST
share
ಸುಳ್ಳಿನ ಫ್ಯಾಕ್ಟರಿಗಳ ಮೇಲೆ ಯಾಕಿಲ್ಲ ರೇಡ್ ?

ಪ್ರಧಾನಿಯವರೇ ಹೇಳಿರುವ ಹಾಗೆ ​ಇದು ದೇಶಕ್ಕೆ ಅಮೃತಕಾಲ​. ಇಂತಹ ಅಮೃತ ಕಾಲದಲ್ಲಿ ಪ್ರಜಾಪ್ರಭುತ್ವದ 4ನೇ ಸ್ತಂಭ​ವನ್ನು ಆಳುವವರೇ ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಇರುವ ಪತ್ರಕರ್ತರಲ್ಲಿ ಬಹುತೇಕರು ಸ್ವತಃ ತಾವೇ ಮುಂದಾಗಿ ಆಳುವವರ ತುತ್ತೂರಿಯಾಗುವ ಮೂಲಕ ಈಗಾಗಲೇ ಪತ್ರಿಕೋದ್ಯಮದ ಸಮಾಧಿ ಕಟ್ಟಿದ್ದಾರೆ. ಅವರೀಗ ಪತ್ರಕರ್ತರ, ಸಂಪಾದಕರ ಹೆಸರಲ್ಲಿರುವ ಸರಕಾರದ ಮುಖವಾಣಿಗಳಾಗಿಬಿಟ್ಟಿದ್ದಾರೆ.

ಇನ್ನುಳಿದ, ಸತ್ಯ ಹೇಳುವ, ಬೆನ್ನು ಮೂಳೆಯನ್ನು ಇನ್ನೂ ನೆಟ್ಟಗೆ ಉಳಿಸಿಕೊಂಡಿರುವ ಪತ್ರಕರ್ತರನ್ನು ಭಯಗ್ರಸ್ಥರನ್ನಾಗಿಸುವ​, ಬಾಯಿ ಮುಚ್ಚಿಸುವ ಕೆಲಸ ಮತ್ತೊಮ್ಮೆ ನಡೆದಿದೆ. ​ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ​180 ದೇಶಗಳ ಪಟ್ಟಿಯಲ್ಲಿ ​ಕೊನೆಯ 20 ದೇಶಗಳಲ್ಲಿ ಸೇರಿರುವ ಭಾರತದಲ್ಲಿ ಪತ್ರಕರ್ತರ ಎದುರು​ ಎಂತಹ ಅಪಾಯಕಾರಿ ಸ್ಥಿತಿಯಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ದೇಶದಲ್ಲಿ ಪೊಲೀಸರು ​ಬೆಳ್ಳಂಬೆಳಗ್ಗೆ ಆರು ಗಂಟೆಗೇ ಪತ್ರಕರ್ತರ ಮನೆಗಳ ಮೇಲೆ ರೇಡ್ ಮಾಡುತ್ತಾರೆ,​ ಅವರ ವಸ್ತುಗಳನ್ನು ಸೀಜ್ಹ್ ಮಾಡುತ್ತಾರೆ, ಅಪರಾಧಿಗಳನ್ನು ಕರೆದೊಯ್ಯುವ ಹಾಗೆ ಕರೆದೊಯ್ಯುತ್ತಾರೆ ಎಂದರೆ, ​ಇದು ಪ್ರಜಾಪ್ರಭುತ್ವದ ತಾಯಿ​ ಮಾಡುವ ಕೆಲಸವೇ ? ಈ ಮೂಲಕ ಸರ್ಕಾರ ಏನನ್ನು ಸಾಬೀತುಪಡಿಸಲು ಬಯಸುತ್ತದೆ?

ಸರ್ಕಾರದ ಎದುರು ಮಣಿಯದ ಮಾಧ್ಯಮ ಸಂಸ್ಥೆಗಳು ಮಾತ್ರವಲ್ಲದೆ, ನೇರವಾಗಿ ಪತ್ರಕರ್ತರನ್ನೇ ಗುರಿಯಾಗಿಸಿ, ಸತ್ಯವನ್ನು ಪ್ರತಿಪಾದಿಸುವ ದಿಟ್ಟತನವನ್ನೇ ಹಣಿದುಹಾಕುವ ಹುನ್ನಾರವೊಂದು ತನಿಖೆಯ ಹೆಸರಲ್ಲಿ​ ಈ ದೇಶದಲ್ಲಿ ನಡೆಯುತ್ತಿದೆ​ ಎಂಬುದೇ ಸತ್ಯವಲ್ಲವೇ ​ ?. ರೈತರ ಹೋರಾಟದ ​ಬಗ್ಗೆ ವರದಿ ಮಾಡಿದ , ಕೋವಿಡ್ ಕಾಲದಲ್ಲಿನ ಜನಸಾಮಾನ್ಯರ ನೋವುಗಳ ಬಗ್ಗೆ ಬರೆದವರ ಮೇಲೆ ಕಣ್ಣಿಟ್ಟ ಸರ್ಕಾರ ಈಗ ವರದಿಯೊಂದನ್ನು ನೆಪವಾಗಿಟ್ಟುಕೊಂಡು, ತನಗೆ ಅಪಥ್ಯವಾಗಿರುವ ಒಂದಿಡೀ ವರ್ಗದ ಪತ್ರಕರ್ತರನ್ನೇ ಸಾಮೂಹಿಕವಾಗಿ ಗುರಿಯಾಗಿಸಿದೆಯೆ?

ಮಂಗಳವಾರ ಬೆಳಬೆಳಗ್ಗೆಯೇ ದೆಹಲಿ ಪೊಲೀಸರು ​ಹಲವು ಪತ್ರಕರ್ತರ ಮನೆಗಳ ಮೇಲೆ ದಾಳಿ ಮಾಡಿದ್ದು, ಅವರ ಲ್ಯಾಪ್ಟಾಪ್, ಮೊಬೈಲ್ ಫೋನ್ ಇತ್ಯಾದಿಗಳನ್ನೆಲ್ಲ ಸೀಜ್ ಮಾಡಿದ್ದು, ವಿಚಾರಣೆಗೆಂದು ಕರೆದೊಯ್ದದ್ದು, ಗಂಟೆಗಟ್ಟಲೆ ಅವರನ್ನು ವಿಚಾರಣೆಯ ನೆಪದಲ್ಲಿ ಇರಿಸಿಕೊಂಡಿದ್ದು, ಅವರ ವಕೀಲರು ಭೇಟಿಯಾಗುವುದಕ್ಕೂ ಅವಕಾಶ ಕೊಡದೇ ಇದ್ದದ್ದು ಇವೆಲ್ಲವೂ ಮತ್ತೊಮ್ಮೆ ದೇಶದ ಪತ್ರಕರ್ತರ ಎದುರು ಭಯಾನಕ ಸನ್ನಿವೇಶವನ್ನು ಸೃಷ್ಟಿಸುವ ವ್ಯವಸ್ಥಿತ ಉದ್ದೇಶದ ಭಾಗದಂತೆ ಕಾಣಿಸಿದೆ.

ನ್ಯೂಸ್ ಕ್ಲಿಕ್ ವೆಬ್ ಪೋರ್ಟಲ್ ​ಗೆ ಬರೆಯುವ, ವೀಡಿಯೊ ಮಾಡುವ ​ಹಲವು ಪತ್ರಕರ್ತರ ಮನೆಗಳ ಮೇಲೆ ದಾಳಿ ನಡೆಯಿತು. ಕೆಲವು ಪತ್ರಕರ್ತರನ್ನು ಗಂಟೆಗಳ ಕಾಲ ಕಸ್ಟಡಿಯಲ್ಲಿ ಇರಿಸಲಾಯಿತು. ಹಲವಾರು ಗಂಟೆಗಳ ವಿಚಾರಣೆಯ ನಂತರ ಸಂಜೆ ಅವರನ್ನು ಬಿಡುಗಡೆ ಮಾಡಲಾಯಿತು.​ ಆದರೆ ನ್ಯೂಸ್ ಕ್ಲಿಕ್ ನ ಸ್ಥಾಪಕ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಹಾಗು ಸಂಸ್ಥೆಯ ಎಚ್ ಆರ್ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಗಿದೆ.

​ನ್ಯೂಸ್‌​ ಕ್ಲಿಕ್ ವಿರುದ್ಧ ​ಆಗಸ್ಟ್ ನಲ್ಲಿ ಯುಎಪಿಎ ಅಡಿ ದಾಖಲಿಸಲಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ಈ ರೇಡ್ ಮತ್ತು ವಿಚಾರಣೆ ನಡೆದಿದೆ ಎಂದು ಹೇಳಲಾಗಿದೆ. ​ನ್ಯೂಸ್‌​ ಕ್ಲಿಕ್ ಪೋರ್ಟಲ್ ಚೀನಿ ವಿಚಾರಧಾರೆಗಳನ್ನು ಹರಡಲು​ ಅಮೇರಿಕದ ಉದ್ಯಮಿಯೊಬ್ಬರಿಂದ ಭಾರೀ ಹಣ ಪಡೆದಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ಆಗಸ್ಟ್ನಲ್ಲಿ ವರದಿ ಮಾಡಿತ್ತು.

ಪತ್ರಕರ್ತ ಅಭಿಸಾರ್ ಶರ್ಮಾ, ಹಿರಿಯ ಪತ್ರಕ​ರ್ತೆ ಭಾಷಾ ಸಿಂಗ್, ಹಿರಿಯ ಪತ್ರಕರ್ತ ಊರ್ಮಿಳೇಶ್, ​ನ್ಯೂಸ್‌​ ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ಥ​,​ ಪತ್ರಕರ್ತ ಪರಂಜೋಯ್ ಗುಹಾ ಠಾಕೂರ್ಥ, ಲೇಖಕಿ ಗೀತಾ ಹರಿಹರನ್,​ ಪತ್ರಕರ್ತ ಔನಿಂದ್ಯೋ ಚಕ್ರವರ್ತಿ, ಹೋರಾಟಗಾರ ಮತ್ತು ಇತಿಹಾಸಕಾರ ಸೊಹೈಲ್ ಹಶ್ಮಿ ​, ವಿಡಂಬನಕಾರ ಸಂಜಯ್ ರಾಜೌರಾ​, ಪತ್ರಕರ್ತೆ ಆರಿತ್ರಿ ಮೊದಲಾದವರ ಮನೆಗಳ ಮೇಲೆ ರೇಡ್ ನಡೆಯಿತು.

ದಾಳಿಗೊಳಗಾದವರಲ್ಲಿ ಊರ್ಮಿಳೇಶ್, ಪರಂಜೊಯ್ ಗುಹಾ ಠಾಕುರ್ತಾ, ಅಭಿಸಾರ್ ಶರ್ಮಾ, ​ಪ್ರಬೀರ್ ಪುರ್ಕಾಯಸ್ಥ, ಔನಿಂದ್ಯೋ ಚಕ್ರವರ್ತಿ ಮತ್ತು ಸತ್ಯಂ ತಿವಾರಿ ಅವರನ್ನು ವಿಚಾರಣೆಗಾಗಿ ವಿಶೇಷ ಸೆಲ್ ಪ್ರಧಾನ ಕಚೇರಿಗೆ ಕರೆದೊಯ್ಯಲಾಯಿತು ಮತ್ತು ಹಲವು ಗಂಟೆಗಳ ವಿಚಾರಣೆ ಬಳಿಕ​ ಪ್ರಬೀರ್ ಪುರ್ಕಾಯಸ್ಥ​ರನ್ನು ಹೊರತುಪಡಿಸಿ ಉಳಿದವರನ್ನು ​ ಸಂಜೆ ಬಿಡುಗಡೆ ಮಾಡಲಾಯಿತು ಎಂದು ವರದಿಯಾಗಿದೆ.

ಅಮೆರಿಕದಲ್ಲಿನ ಸಂಬಂಧಿಯ ಫೋನ್ ಸಂಖ್ಯೆಗೆ ಕರೆ ಮಾಡಿದ್ದರಾ, ಸಿಗ್ನಲ್ ಮೆಸೇಜಿಂಗ್ ಅಪ್ಲಿಕೇಶನ್ ಬಳಸುತ್ತಾರಾ ಇತ್ಯಾದಿ ವಿಲಕ್ಷಣ ಪ್ರಶ್ನೆಗಳನ್ನು ​ಕೇಳಿದರೆಂದೂ ವರದಿಗಳಾಗಿವೆ. ಪುರ್ಕಾಯಸ್ಥ ಅವರನ್ನು ಅವರ ಮನೆಯಿಂದ ನ್ಯೂಸ್‌ಕ್ಲಿಕ್ ಕಚೇರಿಗೆ ಕರೆದೊಯ್ಯಲಾಯಿತು, ಮತ್ತು ನಂತರ ವಿಶೇಷ ಸೆಲ್ ಪ್ರಧಾನ ಕಚೇರಿಗೆ ಕರೆದೊಯ್ಯಲಾಯಿತು. ಸುಮಾರು 15 ಜನರಿದ್ದ ಪೊಲೀಸರು ಬೆಳಿಗ್ಗೆ 6:30 ರಿಂದ 7ರ ನಡುವೆ ಅವರ ನಿವಾಸವನ್ನು ತಲುಪಿದ್ದರು ಎನ್ನಲಾಗಿದೆ. ಲೇಖಕಿ ಗೀತಾ ಹರಿಹರನ್ ಅವರಿಗೆ ಸಂಬಂಧಪಟ್ಟಿದ್ದು ಸೇರಿದಂತೆ ಮನೆಯಲ್ಲಿದ್ದ ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಯಿತು. ಮಾತ್ರವಲ್ಲ, ವಶಪಡಿಸಿಕೊಂಡ ಬಗ್ಗೆ ಯಾವುದೇ ಸ್ವೀಕೃತಿ ಪತ್ರವನ್ನು ನೀಡಲಿಲ್ಲ ಎಂದೂ ವರದಿಯಾಗಿದೆ.

ಹಿಂದಿನ ಮತ್ತು ಪ್ರಸ್ತುತ ನ್ಯೂಸ್‌ಕ್ಲಿಕ್ ಪತ್ರಕರ್ತರು, ಅದಕ್ಕೆ ಬರೆಯುವವರು ಮತ್ತು ಉದ್ಯೋಗಿಗಳ ಮನೆಗಳ ಮೇಲೆ ರೇಡ್ ನಡೆಯಿತು. ಅವರಲ್ಲಿ ಮಾಜಿ ಹಿಂದೂ ಪತ್ರಕರ್ತೆ ಮತ್ತು ಈಗ ನ್ಯೂಸ್‌ಕ್ಲಿಕ್​ ಗೆ ಬರೆಯುತ್ತಿರುವ ಅನುರಾಧಾ ರಾಮನ್, ಸತ್ಯಂ ತಿವಾರಿ, ಅದಿತಿ ನಿಗಮ್ ಮತ್ತು ಸುಮೇಧಾ ಪಾಲ್ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಮನೆ ಮೇಲೂ ದಾಳಿ ನಡೆಸಲಾಗಿದೆ.​ ಮುಂಬೈನಲ್ಲಿ ನೆಲೆಸಿರುವ ಸೆಟಲ್ವಾಡ್ ಅವರನ್ನು ದೆಹಲಿ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆ​ಸಿದ್ದಾರೆ ಎಂಬ ಮಾಹಿತಿಗಳಿವೆ.

​ದಿಲ್ಲಿಯಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ನಿವಾಸದ ಮೇಲೂ ರೇಡ್ ಆಗಿದೆ. ಯೆಚೂರಿ ಅವರ ಜೊತೆ ವಾಸವಿದ್ದ ಅವರ ಮಿತ್ರನ ಪುತ್ರನೊಬ್ಬ ನ್ಯೂಸ್ ಕ್ಲಿಕ್ ನಲ್ಲಿ ಉದ್ಯೋಗಿಯಾಗಿದ್ದುದು ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಆತನ ಮೊಬೈಲ್ ಹಾಗು ಲ್ಯಾಪ್ ಟಾಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಹಿಂದೆ ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮತ್ತು ಈಗ ನ್ಯೂಸ್‌ಕ್ಲಿಕ್‌ನೊಂದಿಗೆ ಸಂಬಂಧ ಹೊಂದಿರುವ ಪತ್ರಕರ್ತ ಸುಬೋಧ್ ವರ್ಮಾ ಅವರ ಮನೆ ಮೇಲೂ ದಾಳಿ ನಡೆಸಲಾಗಿದ್ದು, ವಿಚಾರಣೆಗೆ ಒಳಪಡಿಸಿದ್ದು ವರದಿಯಾಗಿದೆ. ವಶಪಡಿಸಿಕೊಳ್ಳಲಾದ ಯಾವುದೇ ಸಾಧನಗಳನ್ನು ವಶಪಡಿಸಿಕೊಳ್ಳುವ ಸಮಯದಲ್ಲಿ, ಅದರೊಳಗೆ ಎಷ್ಟು ಡೇಟಾ ಇದೆ ಎಂಬುದನ್ನು ಹೇಳುವ ಹ್ಯಾಶ್ ​ವ್ಯಾಲ್ಯೂ ಒದಗಿಸಿಲ್ಲ ಎನ್ನಲಾಗಿದೆ. ವಶಪಡಿಸಿಕೊಂಡ ಬಳಿಕ ಅದನ್ನು ಟ್ಯಾಂಪರ್ ಮಾಡಲಾಗಿದೆಯೇ ಎಂಬುದನ್ನು ತಿಳಿಯಲು ಅದರಿಂದ ಸಾಧ್ಯ.

ಇದೇ ವೇಳೆ ನ್ಯೂಸ್ ಕ್ಲಿಕ್ ಕಚೇರಿಗೆ ಪೊಲೀಸರು ಬೀಗಮುದ್ರೆ ಹಾಕಿ​ದ್ದಾರೆ. ಊರ್ಮಿಳೇಶ್ ಅವರ ಪರ ವಕೀಲ ಗೌರವ್ ಯಾದವ್ ಅವರು ಪಿಟಿಐಗೆ ತಿಳಿಸಿದ ಪ್ರಕಾರ, ಬೆಳಿಗ್ಗೆಯಿಂದ ತಮ್ಮ ಕಕ್ಷಿದಾರರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಸಂಜೆ ಒಬ್ಬೊಬ್ಬರನ್ನೇ ಬಿಡುಗಡೆ ಮಾಡಲಾಯಿತು. ಮೊದಲು ಊರ್ಮಿಳೇಶ್ ಮತ್ತು ಚಕ್ರವರ್ತಿ, ನಂತರ ಅಭಿಸಾರ್ ಶರ್ಮಾ, ಬಳಿಕ ಪರಂಜೊಯ್ ಗುಹಾ ಠಾಕುರ್ತಾ ಅವರನ್ನು ಬಿಡುಗಡೆ ಮಾಡಲಾಯಿತು.

ರೈತರ ಪ್ರತಿಭಟನೆ ಮತ್ತು ಕೋವಿಡ್ ಸಾಂಕ್ರಾಮಿಕದಂತಹ ಘಟನೆಗಳ ಕುರಿತು ವರದಿ ಮಾಡಿದ್ದರೇ ಎಂಬ ಪ್ರಶ್ನೆಯನ್ನೂ ಪತ್ರಕರ್ತರಿಗೆ ಕೇಳಲಾಯಿತು ಎನ್ನಲಾಗಿದೆ. ದೆಹಲಿ ಸೈನ್ಸ್ ಫೋರಂಗೆ ಸಂಬಂಧಿಸಿದ ವಿಜ್ಞಾನಿ ಮತ್ತು ಬರಹಗಾರ ಡಿ. ರಘುನಂದನ್ ಅವರನ್ನೂ ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದರು ಎಂದು ಮೂಲಗಳು ಹೇಳುತ್ತವೆ. ಒಟ್ಟಿಗೆ 37 ಪುರುಷರು ಹಾಗು 9 ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರ ಎಲೆಕ್ಟ್ರಾನಿಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದಿಲ್ಲಿ ಪೊಲೀಸ್ ಪ್ರಕಟಣೆ ಹೇಳಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರನ್ನು ದಾಳಿಯ ಕುರಿತು ಕೇಳಿದಾಗ, ತನಿಖಾ ಸಂಸ್ಥೆಗಳು ಸ್ವತಂತ್ರವಾಗಿವೆ ಮತ್ತು ಅವು ನಿಯಮಾನುಸಾರ ತಮ್ಮ ಕೆಲಸವನ್ನು ಮಾಡುತ್ತಿವೆ. ಯಾರಾದರೂ ತಪ್ಪು ಮಾಡಿದ್ದರೆ, ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡುತ್ತವೆ. ತಪ್ಪು ಮೂಲಗಳಿಂದ ನಿಮಗೆ ಹಣ ಬಂದಿದ್ದರೆ ಅಥವಾ ಆಕ್ಷೇಪಾರ್ಹ ಏನಾದರೂ ನಡೆದಿದ್ದರೆ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಎಲ್ಲಿಯೂ ಬರೆದಿಲ್ಲ ಎಂದು ಪ್ರತಿಕ್ರಿಯಿಸಿರುವುದು ವರದಿಯಾಗಿದೆ.

ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಪತ್ರಕರ್ತರ ಮೇಲಿನ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ಕೂಡ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.​ ಆನ್ ಲೈನ್ ಪತ್ರಕರ್ತರ ಸಂಘ ಡಿಜಿಪಬ್ ಕೂಡ ದಾಳಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸತ್ಯ ಮಾತನಾಡುವವರ ವಿರುದ್ಧ ಬಿಜೆಪಿ ಸರ್ಕಾರ ಬಲವಂತದ ಕ್ರಮ ಕೈಗೊಳ್ಳುತ್ತಿದೆ. ಆದರೆ ದೇಶದಲ್ಲಿ ದ್ವೇಷ ಹರಡುವವರ ಹಾಗೂ ಒಡೆಯುವ ನೀತಿ ಅನುಸರಿಸುತ್ತಿರುವವರ ವಿರುದ್ಧ ಯಾವುದೇ ​ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಪ್ರತಿಪಕ್ಷ ಮೈತ್ರಿಕೂಟ ಟೀಕಿಸಿದೆ.

​ಇಲ್ಲಿ ಕೆಲವು ಪ್ರಮುಖ ಪ್ರಶ್ನೆಗಳಿವೆ. ನ್ಯೂಸ್ ಕ್ಲಿಕ್ ಚೀನಾ ಸರಕಾರದೊಂದಿಗೆ ನಂಟಿರುವ ಅಮೇರಿಕನ್ ಉದ್ಯಮಿಯೊಬ್ಬರಿಂದ 38 ಕೋಟಿ ರೂಪಾಯಿ ಪಡೆದಿದೆ ಎಂದು ನ್ಯೂ ಯಾರ್ಕ್ ಟೈಮ್ಸ್ ಆಗಸ್ಟ್ ನಲ್ಲಿ ವರದಿ ಮಾಡಿತ್ತು. ಅದರ ಬೆನ್ನಲ್ಲೇ ನ್ಯೂಸ್ ಕ್ಲಿಕ್ ವಿರುದ್ಧ ಪ್ರಕರಣ ದಾಖಲಾಯಿತು. ಆದರೆ ಅದರ ವಿರುದ್ಧ ದಾಖಲಾಗಿದ್ದು ಭಯೋತ್ಪಾದಕರ ವಿರುದ್ಧ ದಾಖಲಿಸುವ ಯು ಎ ಪಿ ಎ ಕಾಯ್ದೆಯಡಿ. ಅಮೇರಿಕನ್ ಉದ್ಯಮಿಯಿಂದ ಹಣಕಾಸು ಪಡೆದಿದ್ದರೂ ಅದು ಯು ಎ ಪಿ ಎ ಅಡಿ ಕೇಸು ದಾಖಲಿಸುವ ಪ್ರಕರಣವೇ ?

ಇನ್ನೊಂದು ವಿಷಯ. ಆರೋಪ ಕೇಳಿ ಬಂದಿರುವುದು ನ್ಯೂಸ್ ಕ್ಲಿಕ್ ಸಂಸ್ಥೆಯ ಮೇಲೆ. ಅದರ ಮೇಲೆ ಯುಎಪಿಎ ಅಡಿ ಕೇಸನ್ನೂ ದಾಖಲಿಸಲಾಯಿತು. ಆದರೆ ಆ ಸಂಸ್ಥೆಗಾಗಿ ವರದಿ ಮಾಡುವ, ಬರೆಯುವ, ವೀಡಿಯೊ ಮಾಡುವವರನ್ನು ಏಕೆ ಅಪರಾಧಿಗಳಂತೆ ನಡೆಸಿಕೊಳ್ಳಲಾಯಿತು. ಅವರು ಆ ಸಂಸ್ಥೆಯ ಉದ್ಯೋಗಿಗಳೂ ಅಲ್ಲ. ಕೇವಲ ನಿರ್ದಿಷ್ಟ ವರದಿ, ವೀಡಿಯೊ ಮಾಡಿಕೊಟ್ಟು ಅದಕ್ಕಾಗಿ ಸಂಭಾವನೆ ಪಡೆಯುವವರು. ಅವರ ಮನೆಗೆ ಬೆಳ್ಳಂಬೆಳಗ್ಗೆ ದಾಳಿ ಮಾಡಬೇಕಿತ್ತಾ ?

ನ್ಯೂಸ್ ಕ್ಲಿಕ್ ಬಗ್ಗೆ ನ್ಯೂ ಯಾರ್ಕ್ ಟೈಮ್ಸ್ ವರದಿಯಲ್ಲಿ ಎರಡು ಸಾಲುಗಳಿವೆ. ಎರಡೇ ಸಾಲುಗಳು. ಅದಕ್ಕಾಗಿ ಅದರ ವಿರುದ್ಧ ಇಷ್ಟೆಲ್ಲಾ ಕ್ರಮ ಕೈಗೊಳ್ಳಲಾಯಿತು. ಅದೇ ನ್ಯೂ ಯಾರ್ಕ್ ಟೈಮ್ಸ್ ನಲ್ಲಿ ಭಾರತ ಸರಕಾರದ ಬಗ್ಗೆ, ಬಿಜೆಪಿ ಬಗ್ಗೆ, ಸಂಘ ಪರಿವಾರದ ಬಗ್ಗೆ ವರದಿ, ಲೇಖನಗಳು ಬಂದರೆ ಇಡೀ ಸಂಘ ಪರಿವಾರ ಹಾಗು ಬಿಜೆಪಿ ಐಟಿ ಸೆಲ್ ನ್ಯೂ ಯಾರ್ಕ್ ಟೈಮ್ಸ್ ಎಡಪಂಥೀಯರು, ಪಾಶ್ಚಿಮಾತ್ಯರ ಇಶಾರೆಯಂತೆ ಬರೆಯುವ ಪೂರ್ವಗ್ರಹ ಪೀಡಿತ ಪತ್ರಿಕೆ ಎಂದು ಜರೆಯಲು ಒಂದು ಕ್ಷಣವೂ ತಡ ಮಾಡುವುದಿಲ್ಲ. ಅದಿರಲಿ.

ಅದಾನಿ ಸಮೂಹ ಸಂಸ್ಥೆಗಳ ಬಗ್ಗೆ ಅದೆಷ್ಟು ಪುಟಗಳ ತನಿಖಾ ವರದಿಗಳು ಸಾಲು ಸಾಲಾಗಿ ಬಂದವು. ಅದೆಷ್ಟು ಗಂಭೀರ ಆರೋಪಗಳು ಕೇಳಿ ಬಂದವು ? ಅದೆಷ್ಟು ದಾಖಲೆಗಳು ಬಹಿರಂಗವಾದವು ? ಚೀನೀ ಮೂಲದ ವ್ಯಕ್ತಿಯೇ ಅದಾನಿಯಲ್ಲಿ ಶೆಲ್ ಕಂಪೆನಿಗಳ ಮೂಲಕ ಹೂಡಿಕೆ ಮಾಡಿದ ಅತ್ಯಂತ ಗಂಭೀರ ಆರೋಪಗಳೂ ದಾಖಲೆ ಸಮೇತ ಬಹಿರಂಗವಾದವು ? ಭಾರತದ ರಕ್ಷಣಾ ವ್ಯವಸ್ಥೆಯಲ್ಲೂ ಕೆಲಸ ಮಾಡುವ ಅದಾನಿ ಸಂಸ್ಥೆಯಲ್ಲಿ ಚೀನೀ ಮೂಲದ ವ್ಯಕ್ತಿಯ ಹೂಡಿಕೆ ಬಗ್ಗೆ ಗಂಭೀರ ಪ್ರಶ್ನೆಗಳೆದ್ದವು. ಒಬ್ಬ ವಿದೇಶಿ ಪ್ರಜೆ ನಮ್ಮ ದೇಶದ ಷೇರು ಮಾರುಕಟ್ಟೆಯನ್ನು ಹೇಗೆ ನಿಯಂತ್ರಿಸುತ್ತಿದ್ದಾನೆ ಎಂಬ ಬಗ್ಗೆ ಪ್ರಧಾನಿ ಮೋದಿ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಮಾಡಿಸಬೇಕು ಎಂದು ರಾಹುಲ್ ಗಾಂಧಿ ಸಹಿತ ವಿಪಕ್ಷ ನಾಯಕರು ಆಗ್ರಹಿಸಿದ್ದರು.

ಆದ್ರೆ ಆ ಬಗ್ಗೆ ಏನಾದರೂ ಆಯ್ತಾ ? ಅದಾನಿ ಸಂಸ್ಥೆಗಳ ಮೇಲೆ ರೇಡ್ ಆಯ್ತಾ ? ಅವರ ಎಲೆಕ್ಟ್ರಾನಿಕ್ ಉಪಕರಣಗಳು, ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಯಿತಾ ? ಅದಾನಿಯವರನ್ನು ಬಿಡಿ, ಅವರ ಸಂಸ್ಥೆಯ ಯಾರನ್ನಾದರೂ ಗಂಟೆಗಟ್ಟಲೆ ವಿಚಾರಣೆ ನಡೆಸಲಾಯಿತಾ ?. ಚೀನಾ ದೇಶದ ಗಡಿಯೊಳಗೆ ನುಗ್ಗಿ ಹಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ ಎಂಬ ವರದಿಗಳು ಬಂದವು. ಮತ್ತೆ ಮತ್ತೆ ಚೀನಾ ಗಡಿಯಲ್ಲಿ ಸಮಸ್ಯೆ ಮಾಡುತ್ತಲೇ ಇದೆ. ಆದರೆ ನಮ್ಮ ವಿಶ್ವಗುರು 'ಚೀನಾ' ಎಂದು ಹೆಸರು ಹೇಳಲೂ ಸಿದ್ಧವಿಲ್ಲ.

ಈಗ ನೋಡಿದರೆ ಚೀನಾದ ಹೆಸರಲ್ಲಿ ಒಂದಿಡೀ ಸುದ್ದಿ ಸಂಸ್ಥೆಯನ್ನು ಮಾತ್ರವಲ್ಲ ಡಝನ್ ಗಟ್ಟಲೆ ಪತ್ರಕರ್ತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ​ಈ ದೇಶದಲ್ಲಿ ಇಲ್ಲಿನ ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡುವಂತಹ ಅತ್ಯಂತ ಅಪಾಯಕಾರಿ ಸುಳ್ಳು ಸುದ್ದಿಗಳ, ದ್ವೇಷ ಪ್ರಸಾರದ ಫ್ಯಾಕ್ಟರಿಗಳೇ ಕಳೆದ ಹತ್ತು ವರ್ಷಗಳಿಂದ ಆರಾಮವಾಗಿ ಕಾರ್ಯಾಚರಿಸುತ್ತಿವೆ. ಅವುಗಳಲ್ಲಿ ಲಕ್ಷಾಂತರ ಜನರನ್ನು ನಿಯೋಜಿಸಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆ ಮೂಲಕ ನಮ್ಮ ಸಮಾಜದಲ್ಲಿ, ಜನರ ಮನಸ್ಸುಗಳಲ್ಲಿ ದ್ವೇಷದ ವಿಷ ತುಂಬಲಾಗುತ್ತಿದೆ. ಈ ಬಗ್ಗೆ ಅದೆಷ್ಟು ಅಂತರ್ ರಾಷ್ಟ್ರೀಯ , ರಾಷ್ಟ್ರೀಯ ಮಾಧ್ಯಮಗಳು, ಪತ್ರಕರ್ತರು ವರದಿ ಪ್ರಕಟಿಸಿಲ್ಲ ? ಸುಳ್ಳಿನ ಫ್ಯಾಕ್ಟರಿಗಳಿಗೆ ಎಲ್ಲಿಂದ ಇಷ್ಟೊಂದು ಕೋಟಿ ಹಣ ನಿರಂತರ ಹರಿದು ಬರುತ್ತಿದೆ ? ಅದರ ಹಿಂದಿರುವ ಶಕ್ತಿಗಳು ಯಾರು ? ಆ ದುಡ್ಡಿನ ಮೂಲ ಯಾವುದು ? ಅದರಿಂದ ಲಾಭ ಪಡೀತಿರೋರು ಯಾರು ? ಇದೆಲ್ಲ ಯಾವತ್ತಾದರೂ ಇಲ್ಲಿ ತನಿಖೆಯಾಗಿದೆಯೇ ? ಈ ಸುಳ್ಳಿನ ಫ್ಯಾಕ್ಟರಿಗಳ ಮೇಲೆ ರೇಡ್ ಆಗಿದೆಯೇ ? ಅವರು ಸುಳ್ಳು ಹರಡಲು ಬಳಸುವ ಕಂಪ್ಯೂಟರ್ ಗಳು, ಮೊಬೈಲ್ ಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗಿದೆಯೇ ?

ಪತ್ರಕರ್ತರನ್ನು ಹೀಗೆ ಕಾಡುತ್ತಿರುವಾಗ ಅದನ್ನು ಬೆಂಬಲಿಸುವ, ಸಂಭ್ರಮಿಸುವ ಆಂಕರ್ ಗಳು ಇಲ್ಲಿ ಬೇಕಾದಷ್ಟಿದ್ದಾರೆ. ಇದಕ್ಕಿಂತ ವಿಪರ್ಯಾಸ ಬೇಕೇ ?. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ತೀವ್ರವಾಗಿ ಕುಸಿಯುತ್ತಿದೆ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಇದು G20 ರಾಷ್ಟ್ರಗಳಲ್ಲಿಯೂ ಅತ್ಯಂತ ​ಕೊನೆಯ ಶ್ರೇಯಾಂಕದಲ್ಲಿದೆ. 2015ರಿಂದ ನಿಯಮಿತವಾಗಿ ಎಲ್ಲಾ ಜಾಗತಿಕ ಸೂಚ್ಯಂಕಗಳು, ಫ್ರೀಡಮ್ ಹೌಸ್, ವಿ-ಡೆಮ್, ಎಕನಾಮಿಸ್ಟ್ ಇಂಡೆಕ್ಸ್ ಎಲ್ಲವೂ​ ದೇಶದಲ್ಲಿ ಪ್ರಜಾಸತ್ತಾತ್ಮಕ ಹಿನ್ನಡೆಯನ್ನು ದಾಖಲಿಸಿವೆ.

ಇಷ್ಟೆಲ್ಲ ವಾಸ್ತವದ ನಡುವೆಯೇ ಸರ್ಕಾರದ ಮೊಂಡುತನ ಮಾತ್ರ ಕಡಿಮೆಯಿಲ್ಲ. ​​ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಮೀಪಿಸ್ತಾ ಇದೆ. ಅದಾದ ಬೆನ್ನಿಗೇ ಲೋಕಸಭಾ ಚುನಾವಣೆ ಬರಲಿದೆ. ಹಾಗಾಗಿ ತನ್ನ ವಿರುದ್ಧ ಸತ್ಯ ಹೇಳುವವರ ಮೇಲೆ ಪ್ರತೀಕಾರ ತೀರಿಸುವುದಕ್ಕೆಂಬಂತೆ ಇಂಥ ದಾಳಿಗಳನ್ನು ನಡೆಸುತ್ತಿರುವ ಹಾಗೆ ಕಾಣಿಸುತ್ತದೆ. ರೈತರ ಹೋರಾಟದ ಬಗ್ಗೆ ಬರೆದವರು, ಕೋವಿಡ್ ಹೊತ್ತಿನ ಜನಸಾಮಾನ್ಯರ ಕಷ್ಟಗಳ ಬಗ್ಗೆ ಬರೆದವರು ಹೀಗೆಲ್ಲ ಅಪಾಯವನ್ನು ಎದುರಿಸಬೇಕಾದ ಸ್ಥಿತಿ ಭಾರತದಲ್ಲಿ ಬಂದೊದಗಿದೆ ಎಂಬುದೇ ತೀರಾ ಆತಂಕಕಾರಿ ಸಂಗತಿಯಾಗಿದೆ.​

share
ಆರ್. ಜೀವಿ
ಆರ್. ಜೀವಿ
Next Story
X