Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಏಕರೂಪತೆಯೊ, ಲಿಂಗನ್ಯಾಯವೋ: ಎಲ್ಲಿದೆ...

ಏಕರೂಪತೆಯೊ, ಲಿಂಗನ್ಯಾಯವೋ: ಎಲ್ಲಿದೆ ಯುಸಿಸಿ ಕರಡು?

ಡಾ. ರಾಮ್ ಪುನಿಯಾನಿಡಾ. ರಾಮ್ ಪುನಿಯಾನಿ10 July 2023 2:57 PM IST
share
ಏಕರೂಪತೆಯೊ, ಲಿಂಗನ್ಯಾಯವೋ: ಎಲ್ಲಿದೆ ಯುಸಿಸಿ ಕರಡು?

ಗೀತಾ ಪ್ರೆಸ್ನಂತಹ ಸಂಘಟನೆಗಳಿಗೆ ಗಾಂಧಿ ಪ್ರಶಸ್ತಿ ನೀಡಬಲ್ಲ ಬಿಜೆಪಿಗೆ ಮಹಿಳಾ ಸಬಲೀಕರಣದಲ್ಲಿ ಆಸಕ್ತಿ ಇಲ್ಲ. ಯುಸಿಸಿ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಬಿಜೆಪಿಯ ಹೇಳಿಕೆ ಗಳು ಪೊಳ್ಳಾಗಿವೆ. ಧಾರ್ಮಿಕ ನೆಲೆಯಲ್ಲಿ ಸಮುದಾಯ ಗಳನ್ನು ಧ್ರುವೀಕರಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ಆದ್ದರಿಂದಲೇ ಯುಸಿಸಿಯನ್ನು ತರುವ ಮಾತಾಡುತ್ತಿದೆ. ಯುಸಿಸಿಗೆ ವಿರೋಧ ವ್ಯಕ್ತವಾಗು ವುದು ಮುಂಬರುವ ಚುನಾವಣೆಯಲ್ಲಿ ತನಗೆ ಲಾಭ ತರುವ ಸಮುದಾಯಗಳ ಧ್ರುವೀಕರಣಕ್ಕೆ ಸಹಾಯವಾಗುತ್ತದೆ ಎಂಬುದು ಅದಕ್ಕೆ ಚೆನ್ನಾಗಿ ತಿಳಿದಿದೆ. ಇಂಥ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಶಕ್ತಿಗಳು ಒಟ್ಟಾಗಿ ನಿಂತು, ಯುಸಿಸಿಯ ಕರಡು ಪ್ರತಿಯನ್ನು ಕೇಳಬೇಕಾಗಿದೆ.

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಬಹಳ ಕಾಲದಿಂದ ಇದು ಬಿಜೆಪಿ ಚುನಾವಣಾ ಪ್ರಣಾಳಿಕೆಯ ಭಾಗವೇ ಆಗಿದೆ. ೧೯೯೬ರ ಪ್ರಣಾಳಿಕೆಯಲ್ಲಿ ನಾರಿ ಶಕ್ತಿ ಅಡಿಯಲ್ಲಿ ಅದು ಯುಸಿಸಿ ವಿಚಾರವನ್ನು ಉಲ್ಲೇಖಿಸಿತ್ತು. ಅಷ್ಟಾಗಿಯೂ ಕರಡು ಸಿದ್ಧಪಡಿಸುವ ನಿಟ್ಟಿನಲ್ಲಿ ಅದು ಎಂದಿಗೂ ಪ್ರಯತ್ನಿಸಿಲ್ಲ. ವಿಚ್ಛೇದನ, ಜೀವನಾಂಶ, ಪಿತ್ರಾರ್ಜಿತ ಹಕ್ಕುಗಳು ಮತ್ತು

ಮಕ್ಕಳ ಪಾಲನೆಯ ಕಾನೂನುಗಳು ಏನೆಂದು ವಿವರಿಸಿಲ್ಲ. ಇಲ್ಲಿಯ ವರೆಗೆ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಮತ್ತು ಇತರ ಮುಸ್ಲಿಮ್ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಈ ಬಾರಿ ಯುಸಿಸಿ ಪ್ರಸ್ತಾವನೆಗೆ ಆದಿವಾಸಿ ಗುಂಪುಗಳು, ಸಿಖ್ ಗುಂಪುಗಳಿಂದ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ.

ಕೇಂದ್ರೀಯ ಸರ್ಣಾ ಸಮಿತಿಯ ಪದಾಧಿಕಾರಿ ಸಂತೋಷ್ ಟಿರ್ಕೆ, ‘‘ಇದು ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಭೂಮಿಯ ವರ್ಗಾವಣೆಯ ನಮ್ಮ ಸಾಂಪ್ರದಾಯಿಕ ಕಾನೂನುಗಳನ್ನು ಅತಿಕ್ರಮಿ ಸುತ್ತದೆ ಎನ್ನುತ್ತಾರೆ. ಜಾರ್ಖಂಡ್ನ ಇನ್ನೊಬ್ಬ ಆದಿವಾಸಿ ಗುಂಪಿನ ನಾಯಕ ರತನ್ ಟಿರ್ಕೆ, ಯುಸಿಸಿ ಸಂವಿಧಾನದ ಐದನೇ ಮತ್ತು ಆರನೇ ಶೆಡ್ಯೂಲ್ನ ನಿಬಂಧನೆಗಳನ್ನು ದುರ್ಬಲಗೊಳಿಸುತ್ತದೆ’’ ಎನ್ನುತ್ತಾರೆ. ಎನ್ಡಿಎ ಘಟಕದ ಒಬ್ಬರು ಮತ್ತು ಈಶಾನ್ಯದ ಕೆಲವು ಬಿಜೆಪಿ ನಾಯಕರು ಕೂಡ ಇದನ್ನು ವಿರೋಧಿಸತೊಡಗಿದ್ದಾರೆ.

ಸಿಖ್ಖರಿಂದಲೂ ಯುಸಿಸಿಗೆ ವಿರೋಧ ವ್ಯಕ್ತವಾಗುತ್ತಿದೆ. ಶಿರೋಮಣಿ

ಅಕಾಲಿ ದಳ (ಎಸ್ಎಡಿ) ತನ್ನ ವಿರೋಧ ವ್ಯಕ್ತಪಡಿಸಿದೆ. ಆದರೆ ಸಾರಾಸಗಟಾಗಿ ವಿರೋಧ ತೋರಿಲ್ಲ. ಅಕಾಲಿ ನಾಯಕ ಗುರ್ಜಿತ್ ಸಿಂಗ್ ತಲ್ವಾಂಡಿ, ಒಮ್ಮೆಲೆ ತಳ್ಳಿಹಾಕದಿರುವುಂತೆ ಶಿರೋಮಣಿ ಗುರುದ್ವಾರ್ ಪರ್ಬಂಧಕ್ ಸಮಿತಿಗೆ (ಎಸ್ಜಿಪಿಸಿ) ಸೂಚಿಸಿದ್ದಾರೆ. ಕಾನೂನು ಆಯೋಗದೊಂದಿಗಿನ ಸಂವಾದದ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಮುಸ್ಲಿಮ್ ಫಾರ್ ಸೆಕ್ಯೂಲರ್ ಡೆಮಾಕ್ರಸಿಯಂಥ ಪ್ರಗತಿಪರ ಮುಸ್ಲಿಮ್ ಗುಂಪುಗಳು ಧರ್ಮ ತಟಸ್ಥ ವೈಯಕ್ತಿಕ ಕಾನೂನುಗಳಿಗೆ ಕರೆ ನೀಡಿವೆ.

ವೈಯಕ್ತಿಕ ಕಾನೂನುಗಳು ಮತ್ತು ಕೌಟುಂಬಿಕ ಕಾನೂನುಗಳು, ಏಕರೂಪವಾಗಿರುವ ಸಿವಿಲ್ ಮತ್ತು ಕ್ರಿಮಿನಲ್ ಕಾನೂನುಗಳಿಗಿಂತ ವಿಭಿನ್ನ. ವೈಯಕ್ತಿಕ ಕಾನೂನುಗಳನ್ನು ಬ್ರಿಟಿಷರು ಆ ಧರ್ಮಗಳ ನಾಯಕರೊಡನೆ ಸಮಾಲೋಚಿಸಿ ರೂಪಿಸಿದರು. ಮಿತಾಕ್ಷರ ಮತ್ತು ದಯಾಭಾಗ್ ಕಾನೂನುಗಳು ಪ್ರಚಲಿತದಲ್ಲಿದ್ದುದರಿಂದ ಹಿಂದೂಗಳಲ್ಲಿಯೂ ಏಕರೂಪತೆ ಇರಲಿಲ್ಲ. ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ವೈಯಕ್ತಿಕ ಕಾನೂನುಗಳಲ್ಲಿ ಅಂತರ್ಗತವಾ ಗಿರುವ ಲಿಂಗ ಅನ್ಯಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಲ್ಲದೆ, ಸಂಹಿತೆ

ಸುಧಾರಣೆಯ ಅಗತ್ಯವನ್ನು ಅಂಬೇಡ್ಕರ್ ಅವರೊಡನೆ ಪ್ರತಿಪಾದಿ ಸಿದ್ದರು.

ತಮ್ಮ ಎಲ್ಲಾ ನ್ಯಾಯಸಮ್ಮತತೆ ಮತ್ತು ಸಮಾನತೆಯ ಹಂಬಲದಲ್ಲಿ ಅಂಬೇಡ್ಕರ್ ಹಿಂದೂ ವೈಯಕ್ತಿಕ ಕಾನೂನುಗಳು ಮಹಿಳೆಯರನ್ನು ಸಂಪೂರ್ಣ ಹಿಡಿತದಲ್ಲಿರಿಸಿವೆ ಎಂಬುದನ್ನು ಕಂಡರು. ಅಂಬೇಡ್ಕರ್ ಅವರು ಲಿಂಗ ಸಮಾನತೆಯ ಆಧಾರದ ಮೇಲೆ ಹಿಂದೂ ಕೋಡ್ ಬಿಲ್ನಲ್ಲಿ ರೂಪಿಸಿದ ಕಾನೂನುಗಳಿಗೆ ವಿರೋಧ ಎಷ್ಟು ದೊಡ್ಡದಾಗಿ ತ್ತೆಂದರೆ ಮಸೂದೆಯನ್ನು ದುರ್ಬಲಗೊಳಿಸಲಾಯಿತು ಮತ್ತು ಹಂತ ಹಂತವಾಗಿ ಪರಿಚಯಿಸಲಾಯಿತು. ಹಿಂದೂ ರಾಷ್ಟ್ರೀಯವಾದಿ ಶಕ್ತಿ ಗಳಿಂದ ಬೆಂಬಲಿತವಾದ ಹಿಂದೂ ಸಂಪ್ರದಾಯ ಸ್ಥರು ಅಂಬೇಡ್ಕರ್ ಅವರ ರಾಜೀನಾಮೆಗೆ ಒತ್ತಾಯಿಸಿದರು. ಇದರಿಂದ ನೊಂದ ಅವರು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು. ಮೊನ್ನೆ ಗಾಂಧಿ ಶಾಂತಿ ಪ್ರಶಸ್ತಿಯನ್ನು ಪಡೆದಿರುವ ಗೀತಾ ಪ್ರೆಸ್ನ ಕಲ್ಯಾಣ ಮ್ಯಾಗಝಿನ್ ಹಿಂದೂ ಕೋಡ್ ಬಿಲ್ನ ಮೂಲ ರೂಪಕ್ಕೆ ಆಗ ವಿರೋಧ ವ್ಯಕ್ತಪಡಿಸಿ ಹೀಗೆ ಬರೆದಿತ್ತು: ‘‘ಇಲ್ಲಿಯವರೆಗೆ ಹಿಂದೂಗಳು ಅವರ ಮಾತು ಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು. ಆದರೆ ಈಗ ಅಂಬೇಡ್ಕರ್ ಅವರು ಪರಿಚಯಿಸಿದ ಹಿಂದೂ ಕೋಡ್ ಬಿಲ್ ಹಿಂದೂ ಧರ್ಮವನ್ನು ನಾಶಮಾಡುವ ಅವರ ಪಿತೂರಿಯ ಪ್ರಮುಖ ಭಾಗ ವಾಗಿದೆ ಎಂಬುದು ಸ್ಪಷ್ಟ. ಅವರು ಕಾನೂನು ಸಚಿವರಾಗಿ ಉಳಿದರೆ ಅದು ಹಿಂದೂಗಳಿಗೆ ಅತ್ಯಂತ ಅವಮಾನಕರ ಮತ್ತು ಹಿಂದೂ ಧರ್ಮಕ್ಕೆ ಕಳಂಕದ ವಿಷಯ.’’

ಯುಸಿಸಿ ಕುರಿತ ಬೇಡಿಕೆ ಆನಂತರದ ಮಹಿಳಾ ಚಳವಳಿಯಿಂದ ಬಂತು. ವಿಶೇಷವಾಗಿ ಎಪ್ಪತ್ತರ ದಶಕದ ಆರಂಭದಲ್ಲಿ ಮಥುರಾ ಅತ್ಯಾಚಾರ ಪ್ರಕರಣದ ನಂತರ ಈ ಬೇಡಿಕೆ ಪ್ರಬಲವಾಯಿತು. ಏಕ ರೂಪತೆ ನ್ಯಾಯವನ್ನು ತರುತ್ತದೆ ಎಂದುಕೊಳ್ಳಲಾಯಿತು. ಆರೆಸ್ಸೆಸ್ನ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಅವರು ‘ಆರ್ಗನೈಸರ್’ ನ ಕೆ.ಆರ್. ಮಲ್ಕಾನಿಗೆ ನೀಡಿದ ಸಂದರ್ಶನದಲ್ಲಿ, ದೇಶದ ವೈವಿಧ್ಯತೆಯ ಕಾರಣಕ್ಕೆ ಯುಸಿಸಿ ಪರಿಕಲ್ಪನೆಯನ್ನು ವಿರೋಧಿಸಿದ್ದರು. ಯುಸಿಸಿ ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ ಎಂಬ ವಾದ ದೃಢವಾದು ದಲ್ಲ. ಅಮೆರಿಕವನ್ನೇ ನೋಡಿದರೆ, ವೈವಿಧ್ಯಮಯ ಕಾನೂನುಗಳನ್ನು ಹೊಂದಿರುವ ಐವತ್ತು ರಾಜ್ಯಗಳಿವೆ. ಹೆಚ್ಚಿನ ಮಹಿಳಾ ಗುಂಪುಗಳು ಯುಸಿಸಿಗಿಂತ ಲಿಂಗನ್ಯಾಯದ ಬಗ್ಗೆ ಕ್ರಮೇಣ ಮಾತನಾಡಲು ಪ್ರಾರಂಭಿಸಿದವು. ವಿಚ್ಛೇದನ, ಉತ್ತರಾಧಿಕಾರ, ಮಕ್ಕಳ ಪಾಲನೆ ವಿಷಯಗಳಲ್ಲಿ ಅಸ್ತಿತ್ವದಲ್ಲಿರುವ ವೈವಿಧ್ಯಮಯ ಸಂಹಿತೆಗಳಿಂದ ಹೊರತಾದ ಯಾವುದೇ ಕಾನೂನನ್ನು ಹೇರುವ ಮೂಲಕ ಲಿಂಗ ನ್ಯಾಯ ಸಾಧ್ಯವೆ?

ಯುಸಿಸಿಯನ್ನು ಕೇವಲ ಬಲವಂತದಿಂದ ವಿಧಿಸಬಹುದೇ? ಯುಸಿಸಿ ಹೇರುವ ಮೂಲಕ ರೂಢಿಗತವಾದದ್ದನ್ನು ತೊಡೆದು ಹಾಕಬಹುದೆ? ಇದು ಬಹು ದೊಡ್ಡ ಪ್ರಶ್ನೆ. ಸಮುದಾಯಗಳಲ್ಲಿ ಸುಧಾರಣೆಗಾಗಿ ಕೆಲಸ ಮಾಡುವುದು ಮತ್ತು ಲಿಂಗ ನ್ಯಾಯಕ್ಕಾಗಿ ಶ್ರಮಿಸು ವುದು ಅಗತ್ಯವಾಗಿದೆ. ವೈವಿಧ್ಯಮಯ ಸಮುದಾಯಗಳ ವಕ್ತಾರರು ಎಂದು ಕರೆಯಲ್ಪಡುವವರು ಒಟ್ಟಾರೆಯಾಗಿ ಸಮುದಾಯದ ಅಭಿ ಪ್ರಾಯವನ್ನು ಮತ್ತು ನಿರ್ದಿಷ್ಟವಾಗಿ ಸಮುದಾಯಗಳ ಮಹಿಳೆಯರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂಬುದು ನಿಜ. ಸಮುದಾ ಯದ ನಾಯಕತ್ವದ ಪಾತ್ರವನ್ನು ತಾವೇ ವಹಿಸಿಕೊಂಡವರು ಪುರುಷರು. ಇದನ್ನು ಸಹ ಪ್ರಶ್ನಿಸಬೇಕಾಗಿದೆ. ವಿಭಿನ್ನ ಸಮುದಾಯ ಗಳಲ್ಲಿ ಮಹಿಳೆಯರ ತಳಮಳವನ್ನು ಎತ್ತಿಹಿಡಿಯಬೇಕು ಮತ್ತು ಮೌಲ್ಯೀಕರಿಸಬೇಕು. ಅಲ್ಲದೆ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಮಾರ್ಪಡಿಸುವ ಮತ್ತು ಬದಲಾಯಿಸುವಲ್ಲಿ ಇದು ಪ್ರಧಾನ ನಿರ್ಣಾಯಕ ಅಂಶವಾಗಿರಬೇಕು.

ಯುಸಿಸಿ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಬಿಜೆಪಿಯ ಹೇಳಿಕೆಗಳು ಪೊಳ್ಳಾಗಿವೆ. ತನ್ನ ಒಂಭತ್ತು ವರ್ಷಗಳ ಆಡಳಿತದಲ್ಲಿ ಅದು ವಿಭಿನ್ನ ಸಮುದಾಯಗಳಲ್ಲಿ ಇಂತಹ ಸುಧಾರಣೆಗಳಿಗಾಗಿ ಬಹಳ ಉತ್ತಮ ಮಟ್ಟದ ಕೆಲಸಗಳನ್ನು ಪ್ರಾರಂಭಿಸಬಹುದಿತ್ತು. ಸಮುದಾಯದೊಳಗಿನ ಅನೇಕ ಮಹಿಳೆಯರು ಇದನ್ನು ಅಷ್ಟಾಗಿ ಒತ್ತು ನೀಡಿ ಹೇಳುತ್ತಿಲ್ಲ.

ಧಾರ್ಮಿಕ ನೆಲೆಯಲ್ಲಿ ಸಮುದಾಯಗಳನ್ನು ಧ್ರುವೀಕರಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ಆದ್ದರಿಂದಲೇ ಯುಸಿಸಿಯನ್ನು ತರುವ ಮಾತಾಡುತ್ತಿದೆ. ಸುಧಾರಣೆಯ ಜೊತೆಗೆ ಲಿಂಗನ್ಯಾಯದ ಖಚಿತತೆ ಯೊಂದಿಗೆ ಸಮುದಾಯವನ್ನು ಕೊಂಡೊಯ್ಯುವ ಪ್ರಯತ್ನವು ಚರ್ಚೆಯ ಕೇಂದ್ರದಲ್ಲಿ ಬರಬೇಕಿದೆ.

ಗೀತಾ ಪ್ರೆಸ್ನಂತಹ ಸಂಘಟನೆಗಳಿಗೆ ಗಾಂಧಿ ಪ್ರಶಸ್ತಿ ನೀಡಬಲ್ಲ ಬಿಜೆಪಿಗೆ ಮಹಿಳಾ ಸಬಲೀಕರಣದಲ್ಲಿ ಆಸಕ್ತಿ ಇಲ್ಲ. ಆದರೆ, ಯುಸಿಸಿಗೆ ವಿರೋಧ ವ್ಯಕ್ತವಾಗುವುದು ಮುಂಬರುವ ಚುನಾವಣೆಯಲ್ಲಿ ತನಗೆ ಲಾಭ ತರುವ ಸಮುದಾಯಗಳ ಧ್ರುವೀಕರಣಕ್ಕೆ ಸಹಾಯವಾಗುತ್ತದೆ ಎಂಬುದು ಅದಕ್ಕೆ ಚೆನ್ನಾಗಿ ತಿಳಿದಿದೆ. ಇಂಥ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಶಕ್ತಿಗಳು ಒಟ್ಟಾಗಿ ನಿಂತು, ಯುಸಿಸಿಯ ಕರಡು ಪ್ರತಿ ಯನ್ನು ಕೇಳಬೇಕಾಗಿದೆ. ಅದರ ಬಗ್ಗೆ ಅಭಿಪ್ರಾಯವನ್ನು ನೀಡುವ ಮೊದಲು ಅದೇನು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವುದು ಅಗತ್ಯ.

(ಕೃಪೆ: newsclick)

share
ಡಾ. ರಾಮ್ ಪುನಿಯಾನಿ
ಡಾ. ರಾಮ್ ಪುನಿಯಾನಿ
Next Story
X