Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಆ 13 ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳು...

ಆ 13 ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳು ಎಲ್ಲಿದ್ದಾರೆ ?

ಮೂರೇ ವರ್ಷಗಳಲ್ಲಿ ದೇಶದಲ್ಲಿ 13.13 ಲಕ್ಷಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ : ಕೇಂದ್ರ ಸರಕಾರ

ಆರ್. ಜೀವಿಆರ್. ಜೀವಿ2 Aug 2023 10:51 PM IST
share
ಆ 13 ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳು ಎಲ್ಲಿದ್ದಾರೆ ?

- ಆರ್. ಜೀವಿ

ದಿ ಕೇರಳ ಸ್ಟೋರಿ ಎಂಬ ಸಿನಿಮಾ ಬಂತು. ಕೇರಳದಿಂದ ನಾಪತ್ತೆಯಾದ ಮೂರು ಮಹಿಳೆಯರ ವಿಚಾರವನ್ನು 32 ಸಾವಿರ ಎಂದು ಸುಳ್ಳುಕಥೆ ಕಟ್ಟಿ ಹುಯಿಲೆಬ್ಬಿಸಲಾಯಿತು. ಮಹಿಳೆಯರ ವಿಷಯದಲ್ಲಿ ಕೇರಳದಿಂದ ದೊಡ್ಡ ಅನ್ಯಾಯವೊಂದು ನಡೆದು ಹೋಗಿದೆ ಎಂದು ಆ ಸಿನಿಮಾ ಮೂಲಕ ಕೇರಳವನ್ನು ದೂಷಿಸುವುದಕ್ಕೆ ಬಿಜೆಪಿಯ ಪಡೆಯೇ ನಿಂತುಬಿಟ್ಟಿತ್ತು. ಅದೇ ಬಿಜೆಪಿ ಸರ್ಕಾರ ಈಗ ಒಂದು ಲೆಕ್ಕ ಕೊಟ್ಟಿದೆ.

ಮೂರೇ ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು 13.13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ ಎಂಬುದು ಆ ವಿಚಾರ.

ಮತ್ತು ಈ ಮೂರು ವರ್ಷಗಳು 2019ರಿಂದ 2021ರವರೆಗಿನ ವರ್ಷಗಳು. ಇಂಥ ಬೆಚ್ಚಿಬೀಳಿಸುವ ಅಂಕಿಅಂಶಗಳನ್ನು ಮುಂದಿಡುವ ಸರ್ಕಾರ, ದೇಶಾದ್ಯಂತ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತನ್ನ ಬೆನ್ನು ತಾನು ತಟ್ಟಿಕೊಳ್ಳುತ್ತದೆಯೆ ಹೊರತು ಈ ಕಾಣೆಯಾದ ಮಹಿಳೆಯರ ಕಥೆಯೇನು, ಅವರೆಲ್ಲಿ ಹೋದರು ಎಂಬುದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ.

ಕೇರಳದ ಮೂರು ಮಹಿಳೆಯರ ವಿಚಾರವನ್ನು 32 ಸಾವಿರ ಎಂದು ತಿರುಚಿ, ಕೇರಳ ಮತ್ತು ಅಲ್ಪಸಂಖ್ಯಾತರ ವಿರುದ್ಧ ಅಪಪ್ರಚಾರದ ಅಸ್ತ್ರವಾಗಿ ಬಳಸಲು ಪ್ರಯತ್ನಿಸಿದ್ದ ಬಿಜೆಪಿ, ಮೂರೇ ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಕಾಣೆಯಾದ 13 ಲಕ್ಷದಷ್ಟು ಮಹಿಳೆಯರ ವಿಚಾರವನ್ನು ಎಷ್ಟು ನಿರ್ಲಿಪ್ತವಾಗಿ ಮಂಡಿಸಿ ಮೌನವಾಗಿದೆಯಲ್ಲವೆ?.

13 ಲಕ್ಷ ಮಹಿಳೆಯರು ದೇಶದಿಂದ ನಾಪತ್ತೆಯಾಗಿದ್ದಾರೆ ಎಂಬುದು ಸರ್ಕಾರವನ್ನು ಸ್ವಲ್ಪವೂ ವಿಚಲಿತಗೊಳಿಸಲಿಲ್ಲವೆ? . ಅವರೆಲ್ಲ ಎಲ್ಲಿ ಹೋದರು ಎಂಬುದನ್ನು ಕಂಡುಕೊಳ್ಳುವ, ಪರಿಶೀಲಿಸುವ ಯಾವುದೇ ವ್ಯವಸ್ಥೆಯೂ ಸರ್ಕಾರದ ಬಳಿ ಇಲ್ಲವೆ?. ಅಥವಾ ಅದರ ಬಗ್ಗೆ ಸರ್ಕಾರಕ್ಕೆ ಆಸಕ್ತಿಯಾಗಲೀ, ಕಳವಳವಾಗಲೀ, ನಾಪತ್ತೆಯಾದವರ ಕಥೆಯೇನಾಯಿತು ಎಂದು ಶೋಧಿಸುವ ಇಚ್ಛಾ ಶಕ್ತಿಯಾಗಲೀ ಇಲ್ಲವೆ?. ಸರಕಾರವೇ ಹೇಳಿದ ಹಾಗೆ, ದೇಶಾದ್ಯಂತ ಅದು ಮಹಿಳೆಯರ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಂಡಿದ್ದರೆ, ಆ ಯಾವ ಕ್ರಮಗಳೂ ಈ ಮಹಿಳೆಯರು ನಾಪತ್ತೆಯಾಗುವುದನ್ನು ತಡೆಯಲಿಲ್ಲವೆ?

ನಿಜಕ್ಕೂ ಇವೆಲ್ಲವೂ ದಿಗ್ಭ್ರಮೆ ಹುಟ್ಟಿಸುವ ವಿಚಾರಗಳು.

ಕೇಂದ್ರ ಗೃಹ ಸಚಿವಾಲಯ ಸಂಸತ್ತಿನಲ್ಲಿ ಬಹಿರಂಗಪಡಿಸಿರುವ ಅಂಕಿಅಂಶವನ್ನು ಸ್ವಲ್ಪ ವಿವರವಾಗಿ ಗಮನಿಸುವುದಾದರೆ, 2019ರಿಂದ 2021ರವರೆಗಿನ ಮೂರು ವರ್ಷಗಳಲ್ಲಿ ದೇಶದಲ್ಲಿ ನಾಪತ್ತೆಯಾದ ಒಟ್ಟು ಮಹಿಳೆಯರು 13.13 ಲಕ್ಷಕ್ಕೂ ಹೆಚ್ಚು.ಇವರಲ್ಲಿ 18 ವರ್ಷ ಮೇಲ್ಪಟ್ಟವರು 1061648 ಮಹಿಳೆಯರು. 18ಕ್ಕಿಂತ ಕಡಿಮೆ ವಯಸ್ಸಿನವರು 251430.

ಇನ್ನು, ಮಹಿಳೆಯರ ನಾಪತ್ತೆ ಪ್ರಕರಣಗಳು ಬಿಜೆಪಿಯೇ ಅಧಿಕಾರದಲ್ಲಿರುವ ಮಧ್ಯಪ್ರದೇಶದಲ್ಲಿಯೇ ಹೆಚ್ಚು. ಅಂದರೆ ಸುಮಾರು ಎರಡು ಲಕ್ಷ ಮಹಿಳೆಯರು ಅಲ್ಲಿ ನಾಪತ್ತೆಯಾಗಿದ್ದಾರೆ. ಮಣಿಪುರದಲ್ಲಿ ಮೊನ್ನೆ ಮಹಿಳೆಯರ ಮೇಲೆ ನಡೆದ ಹೇಯ ಕೃತ್ಯದ ವಿಚಾರವಾಗಿ ಪ್ರಶ್ನಿಸಿದರೆ, ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳಾಗಿಲ್ಲವೆ ಎಂದು ಕಿಂಚಿತ್ ವೇದನೆಯಾಗಲೀ ನಾಚಿಕೆಯಾಗಲೀ ಇಲ್ಲದಂತೆ ಪ್ರಶ್ನಿಸುವ ಬಿಜೆಪಿಯ ಮಂದಿಗೆ, ತಮ್ಮದೇ ಆಡಳಿತದ ರಾಜ್ಯವೊಂದರಲ್ಲಿ ಮೂರು ವರ್ಷಗಳಲ್ಲಿ 2 ಲಕ್ಷದಷ್ಟು ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂಬುದು ದೊಡ್ಡ ಸುದ್ದಿಯಲ್ಲ.

ಕೇಂದ್ರ ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಮಧ್ಯಪ್ರದೇಶದಲ್ಲಿ ನಾಪತ್ತೆಯಾದ ಮಹಿಳೆಯರು 198 414. ನಂತರದ ಸ್ಥಾನದಲ್ಲಿ ಬರುವ ಪಶ್ಚಿಮ ಬಂಗಾಳದಲ್ಲಿ 193511. ಮಹಾರಾಷ್ಟ್ರದಲ್ಲಿ 191433. ಒಡಿಶಾದಲ್ಲಿ 86871. ಛತ್ತೀಸ್‌ಘಡದಲ್ಲಿ 59933 ಮಹಿಳೆಯರು ಕಾಣೆಯಾಗಿದ್ದಾರೆ.

ಇನ್ನು ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚು, ಅಂದರೆ 83973, ಜಮ್ಮು ಕಾಶ್ಮೀರದಲ್ಲಿ 9,765 ಮಹಿಳೆಯರು ನಾಪತ್ತೆಯಾಗಿದ್ದಾರೆ. ಇನ್ನು ಕರ್ನಾಟಕದಲ್ಲಿಯೇ ಸುಮಾರು 40 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ. ಎಲ್ಲದಕ್ಕೂ ಇನ್ನಾರದೋ ವಿರುದ್ಧ ಬೆರಳು ತೋರುವ ಬಿಜೆಪಿ, ತನ್ನ ಆಡಳಿತದ ಕಾಲದಲ್ಲಿಯೇ ಈ ನಾಪತ್ತೆ ಪ್ರಕರಣಗಳು ಆಗಿರುವುದು ಎಂಬುದನ್ನು ಒಪ್ಪಿಕೊಳ್ಳಲೇಬೇಕಲ್ಲವೆ?

ಸರ್ಕಾರ ಕೊಟ್ಟಿರುವ ಮಾಹಿತಿಯಂತೆ, ಕರ್ನಾಟಕದಲ್ಲಿ 2019ರಲ್ಲಿ 18 ವರ್ಷಕ್ಕಿಂತ ಕೆಳಗಿನ 703 ಬಾಲಕಿಯರು ನಾಪತ್ತೆಯಾಗಿದ್ದಾರೆ.

18 ವರ್ಷ ಮೇಲ್ಪಟ್ಟ 12,247 ಮಹಿಳೆಯರು ನಾಪತ್ತೆಯಾಗಿದ್ದಾರೆ. 2020ರಲ್ಲಿ 834 ಬಾಲಕಿಯರು ಹಾಗೂ 11,950 ಮಹಿಳೆಯರು ನಾಪತ್ತೆಯಾಗಿದ್ದಾರೆ. 2021ರಲ್ಲಿ 1,237 ಬಾಲಕಿಯರು ಹಾಗೂ 12,964 ಮಹಿಳೆಯರು ನಾಪತ್ತೆಯಾಗಿದ್ದಾರೆ.

ಆತಂಕದ ವಿಷಯವೆಂದರೆ ಈ 3 ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ನಾಪತ್ತೆಯಾಗಿರುವ ಬಾಲಕಿಯರ ಸಂಖ್ಯೆ ಏರುಮುಖವಾಗಿದೆ. ಮಹಿಳೆಯರ ನಾಪತ್ತೆ ಪ್ರಕರಣಗಳು ಏರಿಳಿತ ಕಂಡಿವೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿ ಈ 3 ವರ್ಷಗಳಲ್ಲಿ 2,774 ಬಾಲಕಿಯರು ಹಾಗೂ 36,891 ಮಹಿಳೆಯರು ನಾಪತ್ತೆಯಾಗಿದ್ದಾರೆ.

ಹೀಗೆ ನಾಪತ್ತೆಯಾದ ಮಹಿಳೆಯರು ಎಲ್ಲಿ ಹೋದರು?. ರಾಷ್ಟ್ರೀಯ ಅಪರಾಧ ದಳದ ದಾಖಲೆ ಆಧರಿಸಿ ಗೃಹ ಸಚಿವಾಲಯ ಸಂಸತ್ತಿಗೆ ಈ ಮಾಹಿತಿ ಕೊಟ್ಟಿದೆ. ಆದರೆ, ಕಾಣೆಯಾದ ಅವರೆಲ್ಲ ಎಲ್ಲಿ ಹೋದರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಇದೆಷ್ಟು ಗಂಭೀರ ವಿಚಾರ ಎಂಬುದನ್ನು ಬೇಟಿ ಬಚಾವೊ ಎಂದು ಪ್ರಚಾರದಲ್ಲಿ ಮಿಂಚುವ ಸರ್ಕಾರ ಕೊಂಚವಾದರೂ ಯೋಚಿಸಿದೆಯೆ?. ಹೀಗೆ ಲಕ್ಷಾಂತರ ಮಹಿಳೆಯರು ನಾಪತ್ತೆಯಾಗುತ್ತಿರುವುದರ ಹಿಂದಿನ ಕಾರಣಗಳೇನು? ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಕಳವಳವಿಲ್ಲವೆ ?

ಯಾವ ಷಡ್ಯಂತ್ರ ಈ ರೀತಿ ಲಕ್ಷಾಂತರ ಮಹಿಳೆಯರನ್ನು, ಬಾಲಕಿಯರನ್ನು ನಾಪತ್ತೆ ಮಾಡಿಸುತ್ತಿದೆ ? ಅದಕ್ಕೆ ಏನೇನು ನಂಟುಗಳಿವೆ ? ಯಾಕೆ ಅದನ್ನು ಬಯಲು ಮಾಡಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ? . ಸರ್ವಶಕ್ತಿಶಾಲಿ ಸರಕಾರ ಹಾಗು ನರೇಂದ್ರ ಮೋದಿಯಂತಹ ಅತ್ಯಂತ ಪವರ್ ಫುಲ್ ಪ್ರಧಾನಿ ಇರುವಾಗ ದೇಶದ ಇಷ್ಟೊಂದು ಲಕ್ಷಾಂತರ ಮಹಿಳೆಯರು ಅದೇಗೆ ನಾಪತ್ತೆಯಾಗುತ್ತಿದ್ದಾರೆ ? ಅವರೆಲ್ಲಿಗೆ ಹೋಗಿ ತಲುಪುತ್ತಿದ್ದಾರೆ ?

ಲೆಕ್ಕವಿಟ್ಟು ಕೈತೊಳೆದುಕೊಳ್ಳುವ ಸರ್ಕಾರಕ್ಕೆ, ಇದು ತನ್ನ ವೈಫಲ್ಯವೂ ಹೌದು ಎಂಬ ತಪ್ಪಿತಸ್ಥ ಭಾವನೆಯಾದರೂ ಕಾಡುತ್ತಿಲ್ಲವೆ?. ಬಹುಶಃ ಇಲ್ಲ. ಯಾಕೆಂದರೆ ಬೇಟಿ ಬಚಾವೊ ಎಂಬುದು ಅದಕ್ಕೆ ಬ್ಯಾನರ್ ಮಾತ್ರ; ಮ್ಯಾನರ್ ಅಲ್ಲ.

share
ಆರ್. ಜೀವಿ
ಆರ್. ಜೀವಿ
Next Story
X