Message to reader
ಆತ್ಮೀಯರೇ,
2023
⚡⚡ವಾರ್ತಾಭಾರತಿ ಡಿಜಿಟಲ್ ಚಾನಲ್ ನ ವೀಕ್ಷಕರು ತಮ್ಮ ನೆಚ್ಚಿನ ಚಾನಲ್ ಬಗ್ಗೆ ತುಂಬಾ ಹೆಮ್ಮೆ ಪಟ್ಟುಕೊಳ್ಳುವಂತಹ ವರ್ಷ.⚡⚡
2023
ಇದು ನಿಮ್ಮ ವಾರ್ತಾಭಾರತಿ ಚಾನಲ್ ಇನ್ನಷ್ಟು ವಿಶಾಲವಾಗಿ ಬೆಳೆದ, ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡ, ಹೊಸ ಪ್ರದೇಶಗಳಿಗೆ ತಲುಪಿದ, ಅಪಾರ ಸಂಖ್ಯೆಯ ಹೊಸ ವೀಕ್ಷಕರನ್ನು ಸಂಪಾದಿಸಿದ ವರ್ಷ.
ಹಾಗೆಯೇ, ನೂರಾರು ವಿನೂತನ, ಸೃಜನಶೀಲ, ಜನೋಪಯೋಗಿ ಕಾರ್ಯಕ್ರಮಗಳನ್ನು ನಿಮಗೆ ನೀಡಿದ ವರ್ಷ.
ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಕನ್ನಡದ ಅತ್ಯಂತ ಜನಪ್ರಿಯ, ವಿಶ್ವಾಸಾರ್ಹ, ವಿಶಿಷ್ಟ, ಹಾಗು ವೇಗವಾಗಿ ಬೆಳೆದ ಪರ್ಯಾಯ ಚಾನಲ್ ಆಗಿ ರೂಪುಗೊಂಡ ವರ್ಷ.
🛑 ರಾಜ್ಯದ ವಿವಿಧೆಡೆ ತಳಮಟ್ಟಕ್ಕೆ ತಲುಪಿ, ಮಾತ್ರವಲ್ಲದೆ ರಾಜ್ಯದ ಹೊರಗೂ ಹೋಗಿ, ಕನ್ನಡದಲ್ಲಿ ಬೇರೆಲ್ಲೂ ಸಿಗದ ಎಕ್ಸ್ ಕ್ಲೂಸಿವ್ ಗ್ರೌಂಡ್ ರಿಪೋರ್ಟ್ ಗಳನ್ನು2023 ರಲ್ಲಿ ವಾರ್ತಾಭಾರತಿ ಚಾನೆಲ್ ನಿಮ್ಮ ಬಳಿಗೆ ತಂದಿದೆ.
🛑 ವಾರ್ತಾಭಾರತಿ ಚಾನಲ್ ಈ ನಾಡಿನ ರೈತರು, ಕಾರ್ಮಿಕರು, ಮಹಿಳೆಯರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಮುಂತಾದ ವಿವಿಧ ಜನವರ್ಗಗಳ ಜೀವನದ ಮೇಲೆ ಪರಿಣಾಮ ಬೀರುವ ವಿವಿಧ ಘಟನೆ ಹಾಗೂ ಬೆಳವಣಿಗೆಗಳನ್ನು ಗುರುತಿಸಿ ಅವುಗಳ ವಿಭಿನ್ನ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಹಲವಾರು ವಿಶೇಷ ವರದಿ ಮತ್ತು ವಿಶ್ಲೇಷಣೆಗಳನ್ನು ಪ್ರಕಟಿಸಿದ ವರ್ಷ. ಈ ಮೂಲಕ, ಅನ್ಯತಃ ಮರೆತು ಹೋಗಬಹುದಾಗಿದ್ದ ಅನೇಕ ಕಟು ವಾಸ್ತವಗಳನ್ನು ಸಮಾಜದ ಮುಂದಿಟ್ಟು, ಜನತೆಯ ಕಣ್ತೆರೆಸಿದ ಮತ್ತು ಆಳುವವರನ್ನು ಬಡಿದೆಚ್ಚರಿಸಿದ ವರ್ಷ.
🛑 ಸ್ಥಳೀಯ, ಪ್ರಾಂತೀಯ, ರಾಷ್ಟ್ರೀಯ ಹಾಗೂ ಜಾಗತಿಕ ಸ್ತರದ ಎಲ್ಲ ಮಹತ್ವದ ವಿದ್ಯಮಾನಗಳ ಬಗ್ಗೆ ಸಮಗ್ರ ಮಾಹಿತಿ ಮತ್ತು ಆ ಕುರಿತಾದ ನೇರ, ನಿಷ್ಠುರ ವಿಶ್ಲೇಷಣೆಯನ್ನೊಳಗೊಂಡ ನೂರಾರು ಕಾರ್ಯಕ್ರಮಗಳನ್ನು ಈ ವರ್ಷ ವಾರ್ತಾಭಾರತಿ ಚಾನಲ್ ನೀಡಿದ್ದು ಅವು ವ್ಯಾಪಕ ಜನಮನ್ನಣೆ ಗಳಿಸಿವೆ. ಈ ಕಾರ್ಯಕ್ರಮಗಳು ಆರೋಗ್ಯಕರ ಚರ್ಚೆಗಳಿಗೆ ಪ್ರೇರಣೆ ನೀಡಿದ್ದು ಮಾತ್ರವಲ್ಲ, ಅದಕ್ಕೆ ವೇದಿಕೆಯನ್ನೂ ಒದಗಿಸಿವೆ. ಜೊತೆಗೆ ಚರ್ಚೆಗಳಿಗೆ ಜನಪರ ದಿಕ್ಕನ್ನೂ ನೀಡಿವೆ.
🛑 2023 ರಲ್ಲಿ ವಾರ್ತಾಭಾರತಿ ಚಾನಲ್ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ದಾಖಲೆ ಸಂಖ್ಯೆಯಲ್ಲಿ ವಿಶೇಷ ಮಾನವಾಸಕ್ತಿಯ ವರದಿಗಳನ್ನು ಮಂದಿಟ್ಟಿತು. ರಾಜ್ಯದ ಉದ್ದಗಲಗಳಿಂದ ನಮ್ಮ ತಂಡವು ಸಂಗ್ರಹಿಸಿದ ಬಹುತೇಕ ಎಲ್ಲ ವಿಶೇಷ ಸ್ಟೋರಿಗಳು ಲಕ್ಷಾಂತರ ವೀಕ್ಷಕರನ್ನು ತಲುಪಿದವು. ತೆರೆಮರೆಯ ಪ್ರತಿಭಾವಂತರು, ಸಮಾಜ ಸೇವಕರು, ಸೌಹಾರ್ದ - ಸಹಬಾಳ್ವೆಯ ಜೀವನ, ವೃತ್ತಿ ಬದುಕಿನ ಅನುಭವ, ಸವಾಲುಗಳನ್ನು ಮೆಟ್ಟಿ ನಿಂತ ಸಾಧಕರು - ಹೀಗೆ ವೈವಿಧ್ಯಮಯ ಥೀಮ್ ಗಳಲ್ಲಿ ರಾಜ್ಯದ ವಿವಿಧೆಡೆಗಳಿಗೆ ಸಂಬಂಧಿಸಿದ ಪ್ರತಿಯೊಂದು ಸ್ಟೋರಿಯನ್ನು ಲಕ್ಷಾಂತರ ಮಂದಿ ಉತ್ಸಾಹದಿಂದ ವೀಕ್ಷಿಸಿದರು. ಪ್ರೋತ್ಸಾಹಕ ಸಂದೇಶಗಳನ್ನು ಕಳಿಸಿದರು. ಹೀಗೆ, ಆ ಸಾಧಕರು, ಸೇವಕರನ್ನು ಎಲ್ಲೆಡೆಯ ಕನ್ನಡಿಗರು ಗುರುತಿಸುವಂತಾಯಿತು. ಸರಕಾರ, ಸಂಘ ಸಂಸ್ಥೆಗಳು, ಗ್ರಾಹಕರು ತಾವಾಗಿ ಅಂಥವರ ಮನೆಬಾಗಿಲಿಗೇ ತಲುಪುವಂತಾಯಿತು. ಅವರಿಗೆ ನೆರವು , ಪ್ರೋತ್ಸಾಹ, ಸಮ್ಮಾನ ಸಿಗುವಂತಾಯಿತು. ರಾಜ್ಯದ ಹಲವೆಡೆ ಹಲವು ಸಮಸ್ಯೆಗಳು ಬಗೆಹರಿಯುವುದಕ್ಕೆ ವಾರ್ತಾಭಾರತೀಯ ವರದಿಗಳು ಕಾರಣವಾದವು.
🛑 ಮಂಡ್ಯದಲ್ಲಿ ಪತ್ತೆಯಾದ ಭ್ರೂಣ ಹತ್ಯೆ ಹಗರಣ
🛑 ಈ ವರ್ಷ ಫೇಸ್ ಬುಕ್ ನಲ್ಲಿ ವಾರ್ತಾಭಾರತಿಯ 43 ವಿಶೇಷ ವೀಡಿಯೊ ಸ್ಟೋರಿಗಳು 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿವೆ
🛑 ಕರ್ನಾಟಕ ವಿಧಾನಸಭಾ ಚುನಾವಣೆಯ ಕುರಿತಂತೆ ಸುಮಾರು ಆರು ತಿಂಗಳ ಕಾಲ ವಾರ್ತಾಭಾರತಿ ಚಾನಲ್ ನೀಡಿರುವ ವಿಶೇಷ ಸರಣಿ ಕಾರ್ಯಕ್ರಮಗಳು ಚಾನಲ್ ಗೆ ವ್ಯಾಪಕ ಜನಮನ್ನಣೆ ತಂದು ಕೊಟ್ಟಿವೆ. ರಾಜ್ಯಾದ್ಯಂತ ಜನರಲ್ಲಿ ಧನಾತ್ಮಕ ಚರ್ಚೆಗೆ, ಆರೋಗ್ಯಕರ ಸಂವಾದಕ್ಕೆ, ಜನಪರ ಜನಾದೇಶ ರೂಪುಗೊಳ್ಳುವುದಕ್ಕೆ ವಾರ್ತಾಭಾರತಿಯ ಚುನಾವಣಾ ಕಾರ್ಯಕ್ರಮಗಳು ವಿಶೇಷ ಕೊಡುಗೆ ನೀಡಿದವು ಎಂದು ವಿಶ್ಲೇಷಕರು, ಚಿಂತಕರು, ಬುದ್ದಿಜೀವಿಗಳು ಕೊಂಡಾಡಿದ್ದಾರೆ. *ಮತದಾರರ ಮನದಾಳ
🛑 ಸಮಾಜದಲ್ಲಿ ಅಸಹನೆ, ಅಸಹಿಷ್ಣುತೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಸಂಯಮ, ಸೌಹಾರ್ದ ಹಾಗು ಸಹಬಾಳ್ವೆಗೆ ವಿಶೇಷ ಒತ್ತು ನೀಡಿದ ವಾರ್ತಾಭಾರತಿ ಚಾನಲ್ ಈ ನಿಟ್ಟಿನಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು, ವರದಿಗಳನ್ನು ಪ್ರಸಾರ ಮಾಡಿತು.
🛑 ಕಳೆದ ವರ್ಷ ದಿಲ್ಲಿ ಗಡಿಭಾಗಕ್ಕೆ ಹೋಗಿ ರೈತರ ಆಂದೋಲನವನ್ನು ವಿವರವಾಗಿ ವರದಿ ಮಾಡಿದ್ದ ವಾರ್ತಾಭಾರತಿ 2023 ರಲ್ಲೂ ಕರ್ನಾಟಕದ ಹೊರಗೆ ವಿವಿಧೆಡೆಗಳಿಗೆ ತನ್ನ ವರದಿಗಾರರ ತಂಡವನ್ನು ಕಳಿಸಿ ವಿಶೇಷ ವರದಿಗಳನ್ನು ವೀಕ್ಷಕರಿಗೆ ನೀಡಿತು. ವಾರ್ತಾಭಾರತಿ ಚಾನಲ್ *ಹರ್ಯಾಣ ನೂಹ್ ನಲ್ಲಿ ನಡೆದ ಕೋಮು ಹಿಂಸಾಚಾರದ ಹಿಂದಿನ ಸಂಚು
🛑 ವಾರ್ತಾಭಾರತಿ ಚಾನಲ್ ನಲ್ಲಿ ಮಂಜುಳಾ ಮಾಸ್ತಿಕಟ್ಟೆ ಅವರು ನಡೆಸಿಕೊಡುವ 'ದಿ ಬಿಗ್ ಡಿಬೇಟ್' ಕನ್ನಡದ ಟಿವಿ ಚಾನಲ್ ಗಳ ಚರ್ಚಾ ಕಾರ್ಯಕ್ರಮಗಳಲ್ಲೇ ಅತ್ಯಂತ ರಚನಾತ್ಮಕ, ಆರೋಗ್ಯಕರ ಹಾಗೂ ಎಲ್ಲರೂ ನೋಡಲೇಬೇಕಾದ ಚರ್ಚಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿವಿಧ ಪಕ್ಷಗಳ ಮುಖಂಡರು, ವಕ್ತಾರರು, ವಿಷಯ ತಜ್ಞರು, ವಿಶ್ಲೇಷಕರು, ಚಿಂತಕರು ಭಾಗವಹಿಸುವ ಈ ಚರ್ಚಾ ಕಾರ್ಯಕ್ರಮಕ್ಕೆ ನಾಡಿನ ಉದ್ದಗಲಗಳಲ್ಲಿ ಅದರದ್ದೇ ಆದ ವೀಕ್ಷಕರ ದೊಡ್ಡ ಬಳಗವೊಂದು ನಿರ್ಮಾಣವಾಗಿದೆ
🛑 ಶಿವಸುಂದರ್ ಅವರು ನಡೆಸಿಕೊಡುವ 'ಸಮಕಾಲೀನ' ವಾರ್ತಾಭಾರತಿ ಚಾನಲ್ ನ ಅತ್ಯಂತ ಚರ್ಚಿತ, ಅಷ್ಟೇ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಸಮಕಾಲೀನ ವಿದ್ಯಮಾನಗಳ ಕುರಿತ ಧಾರಾಳ ಮಾಹಿತಿ, ಸಮಗ್ರ ಚಿತ್ರಣ ಹಾಗು ಅತ್ಯಂತ ಕರಾರುವಾಕ್ ವಿಶ್ಲೇಷಣೆ ನೀಡುವ ಕನ್ನಡದ ಏಕೈಕ ಕಾರ್ಯಕ್ರಮ ಎಂಬ ಕೀರ್ತಿಗೆ ಅದು ಪಾತ್ರವಾಗಿದೆ. ಈ ವರ್ಷ ಅದು ಮುನ್ನೂರನೇ ಸಂಚಿಕೆಯನ್ನು ಪೂರ್ಣಗೊಳಿಸಿ ಮುಂದುವರೆದಿದೆ. ಯಾವುದೇ ವಿಷಯದ ಬಗ್ಗೆ ಸ್ಪಷ್ಟ ಗ್ರಹಿಕೆಗಾಗಿ ರಾಜ್ಯದ ಬುದ್ದಿಜೀವಿಗಳು, ಪತ್ರಕರ್ತರು, ವಿದ್ವಾಂಸರು, ರಾಜಕಾರಣಿಗಳು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಕಾರ್ಯಕ್ರಮವನ್ನು ತಪ್ಪದೇ ನೋಡುತ್ತಾರೆ
🛑 ಈ ವರ್ಷ ವಾರ್ತಾಭಾರತಿ ಚಾನಲ್ ಕೆಲವು ಹೊಸ ಡಾಕ್ಯುಮೆಂಟರಿಗಳನ್ನುಮತ್ತು ಕಿರು ಚಿತ್ರಗಳನ್ನೂ ನಿರ್ಮಿಸಿತು. *ಕೇರಳದಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಬರುವವರಿಗೆ ಮನೆ ಮನೆಯಿಂದ ಉಚಿತ ಆಹಾರ ತಲುಪಿಸುವ ಪೊದಿಚೋರು ಕುರಿತ ಡಾಕ್ಯುಮೆಂಟರಿ
🛑 ವಿಧಾನ ಸಭಾ ಚುನಾವಣೆಗೆ ವಾರ್ತಾಭಾರತಿಯಲ್ಲಿ ನೀಡಲಾದ ಕವರೇಜ್ ಗೆ ವೀಕ್ಷಕರಿಂದ ಬಂದ ಪ್ರತಿಕ್ರಿಯೆ ಎಷ್ಟೊಂದು ಉತ್ಸಾಹಭರಿತವಾಗಿತ್ತೆಂದರೆ, ಮುಂಬರುವ ಲೋಕಸಭಾ ಚುನಾವಣೆ ಕುರಿತು 'ಲೋಕಸಮರಕ್ಕೆ ಮುನ್ನುಡಿ' ಎಂಬೊಂದು ವಿಶೇಷ ಸರಣಿಯನ್ನು ಡಿಸೆಂಬರ್ ನಲ್ಲೇ ಆರಂಭಿಸಲಾಗಿದೆ. ಇದರಲ್ಲಿ ಲೋಕಸಭೆಯ ಸ್ವರೂಪ, ಈವರೆಗಿನ ಎಲ್ಲ ಚುನಾವಣೆಗಳ ವಿವರ, ಈವರೆಗಿನ ಸರಕಾರಗಳ ವಿವರ, ವಿವಿಧ ರಾಜ್ಯಗಳಲ್ಲಿರುವ ರಾಜಕೀಯ ಸ್ಥಿತಿಗತಿಗಳು, ಪಕ್ಷಗಳ ಬಲಾಬಲ, ಕರ್ನಾಟಕದ ಎಲ್ಲ 28 ಕ್ಷೇತ್ರಗಳ ಪರಿಚಯ ಇತ್ಯಾದಿ ಮಾಹಿತಿಗಳನ್ನು ಒಳಗೊಂಡ ಕಾರ್ಯಕ್ರಮಗಳ ಸರಣಿ ಪ್ರಸಾರವಾಗಲಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರವಾರು ಗ್ರೌಂಡ್ ರಿಪೋರ್ಟ್ ಗಳೂ ಪ್ರಸಾರವಾಗಲಿವೆ:
🛑 ವರ್ಷದುದ್ದಕ್ಕೂ ಬೆನ್ನುಬೆನ್ನಿಗೆ ವಿಶಿಷ್ಟ, ಸೃಜನಶೀಲ ಕಾರ್ಯಕ್ರಮಗಳನ್ನು ನಿರ್ಮಿಸುವ ಸಾಹಸದ ಪ್ರಕ್ರಿಯೆಯಲ್ಲಿ, ವಾರ್ತಾಭಾರತಿ ತಂಡದ ಉತ್ಸಾಹಕ್ಕೆ ಅದರ ತೀರಾ ಸೀಮಿತ ಸಂಪನ್ಮೂಲ ಹಾಗು ಸವಲತ್ತುಗಳು ಅಡೆತಡೆಯಾಗಲಿಲ್ಲ. ಎಲ್ಲ ಸವಾಲು, ಸಮಸ್ಯೆಗಳನ್ನು ಮೀರಿ ನಿಂತು, ಆಳುವವರ ತುತ್ತೂರಿಗಳ ನಡುವೆ ಕನ್ನಡಿಗರು ಹೆಮ್ಮೆಯಿಂದ ತಮ್ಮದೆಂದು ತೋರಿಸಬಹುದಾದ ಪರ್ಯಾಯ ಚಾನಲ್ ಒಂದನ್ನು ಈ ವರ್ಷ ವಾರ್ತಾಭಾರತಿಯ ತಂಡವು ಸ್ಥಾಪಿಸಿ ಬೆಳೆಸಿದೆ.
🛑 2024 ರಲ್ಲಿ ಹೊಸ ಚೈತನ್ಯದೊಂದಿಗೆ ಇನ್ನಷ್ಟು ಉತ್ತಮ, ಆಕರ್ಷಕ, ಜನಪರ ನಿಲುವಿನ ವಿನೂತನ ಕಾರ್ಯಕ್ರಮಗಳನ್ನು ನೀಡಲು ವಾರ್ತಾಭಾರತಿ ಚಾನಲ್ ನ ತಂಡ ಸಜ್ಜಾಗಿದೆ. ಲೋಕಸಭಾ ಚುನಾವಣೆಯ ವಿಶೇಷ ಕವರೇಜ್ ಆ ನಿಟ್ಟಿನಲ್ಲಿ ಮೊದಲ ದೊಡ್ಡ ಕೊಡುಗೆಯಾಗಲಿದೆ.
🛑 ರಾಜಕೀಯೇತರ ಸಾಮಾಜಿಕ, ಸಾಂಸ್ಕೃತಿಕ, ಜೀವನ ಶೈಲಿ, ಅರೋಗ್ಯ, ಕ್ರೀಡೆ, ಆಹಾರ, ಸಾಧನೆ ಇತ್ಯಾದಿ ಕ್ಷೇತ್ರಗಳ ವಿಶೇಷ ಕಾರ್ಯಕ್ರಮಗಳಿಗೇ ಮೀಸಲಾದ 'Vartha Bharati Stories' ಎಂಬ ಹೊಸ ಯೂಟ್ಯೂಬ್ ಚಾನಲ್ ಜನವರಿ ಒಂದರಿಂದ ಶುರುವಾಗಲಿದೆ. ಅದನ್ನೂ Subscribe ಮಾಡಿ(https://www.youtube.com/@VarthaBharatiStories) ಸಹಕರಿಸಿ, ಬೆಂಬಲಿಸಿ.
🛑 ಈ ಹಾದಿಯಲ್ಲಿ ನೀವು ನೀಡಿರುವ ನೈತಿಕ, ಆರ್ಥಿಕ ಬೆಂಬಲಕ್ಕಾಗಿ ನಾವು ಋಣಿಗಳು. ಮುಂದಿನ ದಿನಗಳಲ್ಲಿ ನಿಮ್ಮ ಸಹಕಾರ, ಬೆಂಬಲ, ಪ್ರೋತ್ಸಾಹ ಹತ್ತಾರು ಪಟ್ಟು ಹೆಚ್ಚಾಗಲಿ. ಸದ್ಯ ವಾರ್ತಾಭಾರತಿಯನ್ನು ಮೆಚ್ಚುವವರ ಹಾಗು ಅದಕ್ಕೆ ಹಣ ಪಾವತಿಸಿ ವಾರ್ಷಿಕ ಚಂದಾದಾರಗುವವರ ಸಂಖ್ಯೆಯ ನಡುವೆ ಬಹಳ ದೊಡ್ಡ ಅಂತರವಿದೆ. ಈ ಅಂತರ ಕಡಿಮೆಯಾಗಲಿ. ಆದಷ್ಟು ಹೆಚ್ಚು ವೀಕ್ಷಕರು ಹಣ ಪಾವತಿಸಿ (https://bit.ly/payvb) ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸುವಂತಾಗಲಿ.
🛑 ನಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಈವರೆಗೂ Subscribe ಬಟನ್ ಒತ್ತದವರು ಇಂದೇ ಅದನ್ನು ಒತ್ತಿ. ಅದು ನೀವು ಸುಲಭವಾಗಿ ಮಾಡಬಹುದಾದ ಉಚಿತ ಸೇವೆ. ನೀವು ಮೆಚ್ಚಿದ ಕಾರ್ಯಕ್ರಮಕ್ಕೆ ಲೈಕ್ ಒತ್ತಲು ಮರೆಯಲೇಬೇಡಿ. ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ. ಲಿಂಕನ್ನು ವಾಟ್ಸ್ ಆಪ್ ನಲ್ಲಿ ಬಂಧು, ಮಿತ್ರರ ಜೊತೆ ಶೇರ್ ಮಾಡಿ. ನೀವು ಲೈಕ್, ಕಮೆಂಟ್ ಹೆಚ್ಚು ಮಾಡಿದಷ್ಟೂ ನಮ್ಮ ವೀಡಿಯೊವನ್ನು ಯೂಟ್ಯೂಬ್ ಇನ್ನಷ್ಟು ಜನರಿಗೆ ತೋರಿಸುತ್ತದೆ. ಹಾಗಾಗಿ ಲೈಕ್, ಕಮೆಂಟ್, ಶೇರ್ - ಈ ಮೂರನ್ನು ಮರೆಯದಿರಿ.
ಅಬ್ದುಸ್ಸಲಾಮ್ ಪುತ್ತಿಗೆ
ಪ್ರಧಾನ ಸಂಪಾದಕ
ವಾರ್ತಾಭಾರತಿ ಬಳಗದ ಪರವಾಗಿ