ಸುಡಾ ಅಧ್ಯಕ್ಷ ಸ್ಥಾನಕ್ಕೆ ಶಾಸಕರ ಸಂಬಂಧಿಯ ಹೆಸರು ಶಿಫಾರಸು: ಭಿನ್ನಮತ ಸ್ಫೋಟ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿಗೆ ಹೊಸದಾಗಿ ರಚನೆಯಾದ ನಗರಾಭಿವೃದ್ಧಿ ಪ್ರಾಧಿಕಾರ (ಸುಡಾ) ಅಧ್ಯಕ್ಷ ಸ್ಥಾನಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರನ ಮಗ ಬಾಬುಗೌಡ ಬಾದರ್ಲಿ ಹೆಸರು ಶಿಫಾರಸು ಮಾಡಿದ್ದು, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರ ಬಣದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸಿಂಧನೂರು ತಾಲೂಕಿನಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ನಡುವೆ ಕೆಲವು ವರ್ಷಗಳಿಂದ ರಾಜಕೀಯ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅನೇಕ ವಿಷಯದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದ್ದು, ಈಗ ಸುಡಾ ಅಧ್ಯಕ್ಷ ಸ್ಥಾನಕ್ಕೆ ಹಂಪನಗೌಡ ಬಾದರ್ಲಿ ಅವರು ಬಾಬುಗೌಡ ಬಾದರ್ಲಿ ಅವರ ಹೆಸರು ಶಿಫಾರಸು ಮಾಡುತ್ತಿದ್ದಂತೆ ಭಿನ್ನಮತ ಮತ್ತೆ ಸ್ಫೋಟವಾಗಿದೆ.
ಸಿಂಧನೂರು ನಗರ ಯೋಜನಾ ಪ್ರಾಧಿಕಾರವನ್ನು ಮೇಲ್ದರ್ಜೆಗೇರಿ ಜ.10ರಂದು ನಗರಾಭಿವೃದ್ಧಿ ಪ್ರಾಧಿಕಾರ ರಚಿಸಿ ಆದೇಶ ಹೊರಡಿಸಿತ್ತು ಇದರಿಂದಾಗಿ ಸಿಂಧನೂರಿನ ಜನತೆಯ ಅನೇಕ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಮತ್ತೊಂದೆಡೆ ಈಗ ಶಾಸಕ ಹಂಪನಗೌಡ ಬಾದರ್ಲಿ ಅವರು ಬಾಬುಗೌಡ ಅವರಿಗೆ ಅಧ್ಯಕ್ಷ ಪಟ್ಟ ನೀಡಲು ಮುಂದಾಗಿದ್ದನ್ನು ವಿರೋಧಿ ಪಾಳಯದಲ್ಲಿ ನುಂಗಲಾರದ ತುತ್ತಾಗಿದ್ದು, ಶಾಸಕನ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಎಂಎಲ್‌ಸಿ ಬಸನಗೌಡ ಬಾದರ್ಲಿ ಅವರ ಬೆಂಬಲಿಗರಾದ ಸೋಮನಗೌಡ ಬಾದರ್ಲಿ ಅವರ ನೇತೃತ್ವದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಪಕ್ಷದಲ್ಲಿನ ಒಳಜಗಳವನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್, ಬಸನಗೌಡ ಬಾದರ್ಲಿ ಅವರನ್ನು ಸಮಾಧಾನಪಡಿಸಲು ಖುದ್ದು ರಣದೀಪ್ ಸಿಂಗ್ ಸುರ್ಜೇವಾಲಾ ಅವರೇ ಸಿಂಧನೂರಿಗೆ ಆಗಮಿಸಿದ್ದರು. ಮುಂದಿನ ದಿನಗಳ ಒಳ್ಳೆಯ ಸ್ಥಾನಮಾನ ನೀಡಲಾಗುಗುವುದು. ತಮ್ಮ ನಾಮಪತ್ರ ವಾಪಸ್ ಹಿಂತೆಗೆದುಕೊಳ್ಳುವುಂತೆ ಮನವೊಲಿಸಿದ್ದರು. ಇದಕ್ಕೆ ಬಸನಗೌಡ ಬಾದರ್ಲಿ ಅವರು ಒಪ್ಪಿ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡಿದ್ದರು. ಬಳಿಕ ಬಸನಗೌಡ ಬಾದರ್ಲಿ ಅವರಿಗೆ ಕೊಟ್ಟ ಮಾತಿನಂತೆ ವಿಧಾನ ಪರಿಷತ್ ಸದಸ್ಯ ಸ್ಥಾನ ಒಲಿದಿತ್ತು.
5 ಬಾರಿ ಶಾಸಕರಾಗಿರುವ ಹಂಪನಗೌಡ ಬಾದರ್ಲಿ ಹಾಗೂ ಅವರ ಗರಡಿಯಲ್ಲಿಯೇ ಬೆಳೆದ ಬಸನಗೌಡ ಬಾದರ್ಲಿಯ ನಡುವೆ ವೈಮನಸ್ಸು ಕಡಿಮೆಯಾಗುತ್ತಿಲ್ಲ .ಪ್ರಸ್ತುತ ಇಬ್ಬರೂ ಒಂದೇ ಪಕ್ಷದಲ್ಲಿದ್ದು ಅಧಿಕಾರದಲ್ಲಿ ಇದ್ದರೂ ಕೂಡ ಒಂದಿಲ್ಲೊಂದು ವಿಚಾರಕ್ಕೆ ಭಿನ್ನಾಭಿಪ್ರಾಯ ಕಡಿಮೆಯಾಗಿಲ್ಲ.
ಪಕ್ಷ ವಿರೋಧಿ ಚಟುವಟಿಕೆಯ ಆರೋಪ: ಎಂಎಲ್ ಎ, ಎಂಎಲ್ಸಿ ಇವರಿಬ್ಬರ ನಡುವಿನ ವೈಮನಸ್ಸು ಕಳೆದ ವಿಧಾನಸಭೆ ಚುನಾವಣೆಯ ಮೇಲೆಯೂ ಪ್ರಭಾವ ಬೀರಿತ್ತು.
ಕಳೆದ ವಿಧಾನಸಭೆಯ ಚುನಾವಣೆಯ ವೇಳೆ ಬಸನಗೌಡ ಬಾದರ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದ ಬಸನಗೌದ ಬಾದರ್ಲಿ ಡಿಕೆ ಶಿವಕುಮಾರ್ ಬೆಂಬಲಗರಾಗಿದ್ದು, ವಿಧಾನಸಭೆ ಚುನಾವಣೆ ಟಿಕೆಟ್ಗೆ ಪ್ರಬಲ ಪೈಪೋಟಿ ನಡೆಸಿದ್ದರು. ಆದರೆ ಸಿದ್ದರಾಮಯ್ಯ ಬಣದ ಹಂಪನಗೌಡ ಬಾದರ್ಲಿಗೆ ಟಿಕೆಟ್ ಸಿಕಿತ್ತು. ಇದರಿಂದ ಅಸಮಾಧಾನಗೊಂಡ ಬಸವಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಸನಗೌಡ ಅವರಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮೇಲೆ ಅಸಮಾಧಾನ ಇರಲಿಲ್ಲ. ಆದರೆ ತಮ್ಮ ತಾತನನ್ನು ಸೋಲಿಸಲೇಬೇಕೆಂದು ಬಸನಗೌಡ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದರು.
ಪಕ್ಷದಲ್ಲಿನ ಈ ಒಳಜಗಳವನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್ , ಬಸನಗೌಡ ಬಾದರ್ಲಿ ಅವರನ್ನು ಸಮಾಧಾನಪಡಿಸಲು ಖುದ್ದು ರಣದೀಪ್ ಸಿಂಗ್ ಸುರ್ಜೆವಾಲ ಅವರೇ ಸಿಂಧನೂರಿಗೆ ಆಗಮಿಸಿದ್ದರು. ಮುಂದಿನ ದಿನಗಳ ಒಳ್ಳೆಯ ಸ್ಥಾನಮಾನ ನೀಡಲಾಗುತ್ತೆ ತಮ್ಮ ನಾಮಪತ್ರ ವಾಪಸ್ ಹಿಂತೆಗೆದುಕೊಳ್ಳುವುಂತೆ ಮನವೊಲಿಸಿದ್ದರು. ಇದಕ್ಕೆ ಬಸನಗೌಡ ಬಾದರ್ಲಿ ಅವರು ಒಪ್ಪಿ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡಿದ್ದರು. ಬಳಿಕ ಬಸನಗೌಡ ಬಾದರ್ಲಿ ಅವರಿಗೆ ಕೊಟ್ಟ ಮಾತಿನಂತೆ ವಿಧಾನ ಪರಿಷತ್ ಸದಸ್ಯ ಸ್ಥಾನ ಒಲಿದಿತ್ತು.
5 ಬಾರಿ ಶಾಸಕರಾಗಿರುವ ಹಂಪನಗೌಡ ಬಾದರ್ಲಿ ಹಾಗೂ ಅವರ ಗರಡಿಯಲ್ಲಿಯೇ ಬೆಳೆದ ಬಸನಗೌಡ ಬಾದರ್ಲಿಯ ನಡುವೆ ವೈಮನಸ್ಸು ಕಡಿಮೆಯಾಗುತ್ತಿಲ್ಲ .ಪ್ರಸ್ತುತ ಇಬ್ಬರೂ ಒಂದೇ ಪಕ್ಷದಲ್ಲಿದ್ದು ಅಧಿಕಾರದಲ್ಲಿ ಇದ್ದರೂ ಕೂಡ ಒಂದಿಲ್ಲೊಂದು ವಿಚಾರಕ್ಕೆ ಭಿನ್ನಾಭಿಪ್ರಾಯ ಕಡಿಮೆಯಾಗಿಲ್ಲ.
ಬಸನಗೌಡ ಬಾದರ್ಲಿ ಅವರು ಎಂಎಲ್ ಎ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಹಂಪನಗೌಡ ಅವರಿಗೆ ನೀಡಿದ್ದ ಕಾರಣ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಹೀಗಾಗಿ ಅವರ ಮನ ಒಲಿಸಲು ಸುರ್ಜೆವಾಲಾ ಬಂದಿದ್ದರು.







