ಮುಲ್ಕಿ: ಕಾರ್ನಾಡ್ ಹಿಮಾಯತುಲ್ ಇಸ್ಲಾಂ ಸಮಿತಿಯ 48ನೇ ವಾರ್ಷಿಕೋತ್ಸವ, ಸಾಧಕರಿಗೆ ಗೌರವ

ಮುಲ್ಕಿ: ಕಾರ್ನಾಡ್ ಹಿಮಾಯತುಲ್ ಇಸ್ಲಾಂ ಸಮಿತಿಯ 48ನೇ ವಾರ್ಷಿಕೋತ್ಸವದ ಸಮಾರೋಪ ಕಾರ್ಯಕ್ರಮ,ಬಡ ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗಾಗಿ ದನ ಸಹಾಯ, ಧಾರ್ಮಿಕ ಮತ ಪ್ರವಚನ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಕಾರ್ನಾಡ್ ದರ್ಗಾ ರಸ್ತೆಯ ಝಿಂದಾ ಮದರ್ ಷಾ ದರ್ಗಾ ವಠಾರದಲ್ಲಿ ಶನಿವಾರ ಸಂಜೆ ನಡೆಯಿತು
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಗೂ ಮುಲ್ಕಿ ಶಾಫಿ ಜುಮ್ಮಾ ಮಸೀದಿ ಖತೀಬ್ ಉಸ್ಮಾನುಲ್ ಫೈಝಿ ತೋಡಾರ್ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಸುಹೈಲ್ ಹೈದರ್ ಎಂ.ಕೆ. ವಹಿಸಿದ್ದರು. ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಸದಸ್ಯ ಖಾಝಿ ಬಂಬ್ರಾಣ ಬಿ.ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಿದರು.
ವೇದಿಕೆಯಲ್ಲಿ ಕಾರ್ನಾಡ್ ಮಸ್ಜಿದುನ್ನೂರು ಖತೀಬ್ ಇಸ್ಮಾಯಿಲ್ ದಾರಿಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ರಾಜ್ಯ ವಿಧಾನಪರಿಷತ್ ಶಾಸಕ ಐವನ್ ಡಿಸೋಜ, ಮಿಥುನ್ ರೈ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಮುಲ್ಕಿ ನ.ಪಂ ಸದಸ್ಯ ಪುತ್ತು ಬಾವ, ತಾಲೂಕು ಸಂವಿಧಾನ ಸಂರಕ್ಷಣಾ ಹೋರಾಟ ವೇದಿಕೆಯ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಕೇಂದ್ರ ಜುಮ್ಮಾ ಮಸೀದಿಯ ಕಾರ್ಯದರ್ಶಿಫಾರೂಕ್ ಹಾಜಿ, ಮುಲ್ಕಿ ನ. ಪಂ.ಮಾಜಿ ಉಪಾಧ್ಯಕ್ಷ ಅಬೂಬಕ್ಕರ್, ಉದ್ಯಮಿ ಜಮಾಲ್ ಕೊಳ್ನಾಡ್ ಸೌದಿ ಅರೇಬಿಯಾ, ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಲ್ ಫಾಝ್ , ಖಲೀಲ್ ದಾರಿಮಿ,ಅಬ್ದುಲ್ ರಝಾಕ್,ಕಾರ್ನಾಡ್ ಮದನಿ, ಹಿಮಾಯತುಲ್ ಇಸ್ಲಾಂ ಸಮಿತಿಯ ಅಧ್ಯಕ್ಷ ರಿಯಾಝ್ ಮೊಯಿದಿನ್, ಶರತ್ ಕಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಡ ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗಾಗಿ ಧನ ಸಹಾಯ ಹಾಗೂ ಸಾಧಕರ ನೆಲೆಯಲ್ಲಿ ಯುವ ಉದ್ಯಮಿ ಅಬ್ದುಲ್ ಲತೀಫ್ ಗುರುಪುರ ಅವರನ್ನು ಗೌರವಿಸಲಾಯಿತು. ಮುಹಮ್ಮದ್ ಗಝಾಲ್ ಕೊಳ್ನಾಡ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮೊದಲು ಕಾರ್ನಾಡ್ ಮಸೀದಿಯಿಂದ ದರ್ಗಾ ರಸ್ತೆಯಾಗಿ ಸಂದಲ್ ಮೆರವಣಿಗೆ ನಡೆಯಿತು.