ಮುಸಲಾಪುರ : ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳಿಗೆ ಊಟದ ತಟ್ಟೆ ವಿತರಣೆ

ಕನಕಗಿರಿ:187 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ ಶ್ರೀ ಕನಕಾಚಲ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ವತಿಯಿಂದ ತಾಲೂಕಿನ ಮುಸಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ 100 ಊಟದ ತಟ್ಟೆಗಳನ್ನು ವಿತರಿಸಲಾಯಿತು.
ಸಂಘದ ಅಧ್ಯಕ್ಷ ನಾಗರಾಜ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸೋಮನಾಥ ಕೆ, ಮಾಜಿ ಅಧ್ಯಕ್ಷ ಪ್ರೀತಮ್ ಕುಂಬಾರ, ಮಾಜಿ ಉಪಾಧ್ಯಕ್ಷ ಪಾಮಜಿ ಬೋಂದಾಡಿ, ಛಾಯಾಗ್ರಾಹಕ ಹರೀಶ್ ಕೋರಿ, ಗಂಗಾಧರ ಭೋವಿ, ಹಾಗೂ ಶಾಲೆಯ ಸಹಶಿಕ್ಷಕರು ಉಪಸ್ಥಿತರಿದ್ದರು.
Next Story




