ಮೈಸೂರು ದಸರಾ: ಜಂಬೂ ಸವಾರಿ ಮೆರವಣಿಗೆಗೆ ಸಾಂಸ್ಕೃತಿಕ ಕಲಾ ತಂಡಗಳ ಮೆರುಗು

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಗೆ ಸಾಂಸ್ಕೃತಿಕ ಕಲಾತಂಡಗಳು ಮೆರುಗು ನೀಡಿವೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ನಂದಿ ಕಂಬಕ್ಕೆ ಪೂಜೆ ಸಲ್ಲಿಸಿದ ನಂತರ ಕಲಾತಂಡಗಳು ಬನ್ನಿ ಮಂಟಪದತ್ತ ಹೆಜ್ಜೆಹಾಕಿದವು.
ಕೊಂಬು ಕಹಳೆ, ವೀರಗಾಸೆ, ಡೊಳ್ಳು ಕುಣಿತದ ಜೊತೆಗೆ ನಿಶಾನೆ ಆನೆ ಗೋಪಿ ನೇತೃತ್ವದ ಮಹೇಂದ್ರ, ಲಕ್ಷ್ಮಿ, ಗಜೇಂದ್ರ, ಪ್ರಶಾಂತ, ಸುಗ್ರೀವ, ಭೀಮ, ಕಂಜನ್, ಏಕಲವ್ಯ ಆನೆಗಳು ಹೆಜ್ಜೆ ಹಾಕಿದವು.
ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಟ್ಯಾಬ್ಲೊ ಆಕರ್ಷಣೀಯವಾಗಿದೆ. ನಂದಿ ಧ್ವಜ ಕುಣಿತ, ಎಚ್.ಎ.ಎಲ್.ಮಾದಿಯ ಟ್ಯಾಬ್ಲೊ ಗಮನ ಸೆಳೆಯುತ್ತಿದೆ.
ನಿಶಾನೆ ಆನೆಗಳ ಕಂಡು ಪುಳಕಿತರಾದ ಸಾರ್ವಜನಿಕರು ಭೀಮ ಆನೆ ಕಂಡು ಜಯಘೋಷ ಮೊಳಗಿಸಿದರು.
ಮಳೆಯ ಸಿಂಚನ
ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಮ್ಮುಖದಲ್ಲಿ ನಡೆಯುತ್ತಿರುವ ಜಂಬೂ ಸವಾರಿ ಮೆರವಣಿಗೆ ವೇಳೆ ತುಂತು ಮಳೆ ಸುರಿಯಲಾರಂಭಿಸಿತು.
ಸಾರ್ವಜನಿಕರು ತಾವು ಕೂತಿದ್ದ ಕುರ್ಚಿಗಳನ್ನು ತಲೆಯ ಮೇಲೆ ಹೊತ್ತು ರಕ್ಷಣೆ ಪಡೆದರು
ಮೋಡ ಕವಿದ ವಾತಾವರಣವೂ ಜನರಲ್ಲಿ ಆತಂಕ ಉಂಟು ಮಾಡಿದೆ.







