ಮೈಸೂರು | ಅಂಕಪಟ್ಟಿಗಾಗಿ ರಸ್ತೆಯಲ್ಲಿ ಮಲಗಿ ವಿದ್ಯಾರ್ಥಿನಿ ಧರಣಿ

ಮೈಸೂರು : ಅಂಕಪಟ್ಟಿ ನೀಡುವಂತೆ ಒತ್ತಾಯಿಸಿದ ವಿದ್ಯಾರ್ಥಿನಿಯೊಬ್ಬರು ಮೈಸೂರು ವಿವಿ (ಕಾಫ್ರರ್ಟ್ ಭವನದ) ಆಡಳಿತ ಸೌಧದ ಎದುರಿನ ರಸ್ತೆಯಲ್ಲಿ ಮಲಗಿ ಧರಣಿ ನಡೆಸಿದ್ದಾರೆ. ಮಂಗಳವಾರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿ ಪ್ರಭಾ ಡಿ.ಸಿ. ಎಂಬವರು ಧರಣಿ ನಡೆಸಿದರು.
ಬಿ.ಇಡಿ ಪ್ರವೇಶಕ್ಕೆ ಎಸೆಸ್ಸೆಲ್ಸಿ ಮತ್ತು ಪದವಿ ಅಂಕಪಟ್ಟಿಗಳನ್ನು ನೀಡುವಂತೆ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ಆರ್ಥಿಕ ಸಮಸ್ಯೆ ಇರುವುದರಿಂದ ನಕಲಿ ಅಂಕ ಪಟ್ಟಿ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರವೇಶಾತಿ ಪಡೆದ ಬಳಿಕ ಮತ್ತೆ ಅಂಕ ಪಟ್ಟಿಗಳನ್ನು ಮರಳಿ ನೀಡುವುದಾಗಿ ಅವರು ಕೋರಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ವಿದ್ಯಾರ್ಥಿನಿಯು ಅಂಕ ಪಟ್ಟಿ ಕೊಡಬೇಕಾದರೆ ಲಂಚ ಕೊಡುವಂತೆ ಕೇಳುತ್ತಿರುವುದಾಗಿ ಅಪಾದಿಸಿದ್ದಾರೆ. ರಸ್ತೆಯಲ್ಲಿ ಮಲಗಿ ಧರಣಿ ನಡೆಸಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿತ್ತು.
Next Story





