ಮಾಜಿ ಸಂಸದ ಪ್ರತಾಪ್ ಸಿಂಹ ಒಬ್ಬ ಡೋಂಗಿ ಹಿಂದುತ್ವವಾದಿ : ಬಿಜೆಪಿ ಮುಖಂಡ ಮೈಕಾ ಪ್ರೇಮ್ ಕುಮಾರ್

ಮೈಸೂರು : ಮಾಜಿ ಸಂಸದ ಪ್ರತಾಪ್ ಸಿಂಹ ಒಬ್ಬ ಡೋಂಗಿ ಹಿಂದುತ್ವವಾದಿ, ಬಿಜೆಪಿ ಕೊಟ್ಟ ಅವಕಾಶಗಳನ್ನು ದುರುಪಯೋಗ ಪಡಿಸಿಕೊಂಡು ಪಕ್ಷಕ್ಕೆ ಕೆಟ್ಟ ಹೆಸರು ತಂದ ವ್ಯಕ್ತಿ. ಆದ್ದರಿಂದಲೇ ಆತನನ್ನು ರಾಷ್ಟ್ರ ರಾಜಕಾರಣದಿಂದ ಪಕ್ಷದ ಹೈಕಮಾಂಡ್ ಹೊರಹಾಕಿದೆ ಎಂದು ಬಿಜೆಪಿ ಮುಖಂಡ ಮೈಕಾ ಪ್ರೇಮ್ ಕುಮಾರ್ ಆರೋಪಿಸಿದ್ದಾರೆ.
ನಗರದ ಜಿಲ್ಲಾಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀನು ರಾಜ್ಯ ರಾಜಕಾರಣಕ್ಕೆ ಬರುವ ಮೊದಲು ನಿನ್ನ ವಿರುದ್ಧ ಯುವತಿಯೊಬ್ಬಳು ಜಿಲ್ಲಾಧಿಕಾರಿಗೆ ದೂರು ಏಕೆ ಕೊಟ್ಟಳು, ನೀನು ಕೋರ್ಟ್‌ನಲ್ಲಿ ನಿನ್ನ ಸುದ್ದಿಗಳ ಪ್ರಸಾರಕ್ಕೆ ತಡೆಯಾಜ್ಞೆ ತಂದಿದ್ದೇಕೆ? ಕತ್ತಲ ಜಗತ್ತು ಪುಸ್ತಕವನ್ನು ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದು ಏಕೆ? ಹೈಕಮಾಂಡ್ ನಿನಗೆ ಟಿಕಿಟ್ ತಪ್ಪಿಸಲು ಕಾರಣ ಏನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಕೊಟ್ಟು ರಾಜಕಾರಣ ಮಾಡು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಲ್. ನಾಗೇಂದ್ರ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೀರಿ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹರೀಶ್‌ಗೌಡ ಪರವಾಗಿ ನಿಮ್ಮ ಬೆಂಬಲಿಗರ ಮೂಲಕ ಸಹಾಯ ಮಾಡಿಸಿದ್ದೀರಿ ಎಂದು ಟೀಕಿಸಿದರು.





