ಮಾಜಿ ಶಾಸಕ ಚಿಕ್ಕಮಾದನಾಯಕ ನಿಧನ

ತಿ.ನರಸೀಪುರ : ಬನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದ ಕೆ.ಎಂ.ಚಿಕ್ಕಮಾದ ನಾಯಕ (92) ಅವರು ಶುಕ್ರವಾರ ಬೆಳಗ್ಗೆ ಮೈಸೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ತಾಲೂಕಿನ ತಲಕಾಡು ಹೋಬಳಿಯ ಕಾಳಿಹುಂಡಿ ಗ್ರಾಮದವರಾದ ಕೆ.ಎಂ.ಚಿಕ್ಕಮಾದ ನಾಯಕರು ನರಸೀಪುರ ಕ್ಷೇತ್ರ ಪುನರ್ವಿಂಗಡಣೆಗೆ ಮುನ್ನ ಬನ್ನೂರು ವಿಧಾನಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. ಎರಡು ದಶಕಗಳಿಂದ ಕುಟುಂಬ ಸಮೇತರಾಗಿ ಮೈಸೂರಿನ ಸಿದ್ದಾರ್ಥನಗರದಲ್ಲಿ ವಾಸವಾಗಿದ್ದರು.
ಶ್ರೀಯುತರು ಪತ್ನಿ ಜಿಪಂ ಮಾಜಿ ಸದಸ್ಯರಾದ ಗೌರಮ್ಮ, ಪುತ್ರ ಕೆ.ಸಿ.ಲೋಕೇಶ್ ಸೇರಿದಂತೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ಇವರ ಅಂತ್ಯಕ್ರಿಯೆ ಸ್ವಗ್ರಾಮ ಕಾಳಿಹುಂಡಿಯಲ್ಲಿ ಸಂಜೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
Next Story




