ಆರೆಸ್ಸೆಸ್‌ನವರ ಟಾರ್ಗೆಟ್‌ಗೆ ನಾವು ಹೆದರುವುದಿಲ್ಲ: ಬಿ.ಕೆ.ಹರಿಪ್ರಸಾದ್

ಮೈಸೂರು : ಪ್ರಶ್ನೆ ಕೇಳಿದವರ ಮೇಲೆಯೇ ಕಾನೂನಾತ್ಮಕ ಕ್ರಮಕ್ಕೆ ಒತ್ತಾಯಿಸುವ ಆರೆಸ್ಸೆಸ್ ನವರು ಮೊದಲು ಆರೆಸ್ಸೆಸ್ ರಿಜಿಸ್ಟರ್ ಮಾಡಿಸಲಿ. ಆರೆಸ್ಸೆಸ್ ನವರ ಟಾರ್ಗೆಟ್ ಗೆ ನಾವು ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಗೆ ಕೋರ್ಟ್ ಸಮಸ್ಸ್ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದ ಕಾನೂನಿಗೆ ನಾವು ಯಾವತ್ತೂ ತಲೆ ಬಾಗುತ್ತೇವೆ. ಗಾಂಧೀಜಿಯನ್ನೇ ಆರೆಸ್ಸೆಸ್ ಟಾರ್ಗೆಟ್ ಮಾಡಿತ್ತು. ಆರೆಸ್ಸೆಸ್ ಬ್ರಿಟಿಷರ ಪರ ಇತ್ತು. ಕಾನೂನಾತ್ಮಕವಾಗಿ ಪ್ರಶ್ನೆ ಮಾಡುವವರ ಮೇಲೆ ಆರೆಸ್ಸೆಸ್ ಯಾವಾಗಲೂ ಟಾರ್ಗೆಟ್ ಮಾಡುತ್ತದೆ. ಈ ಟಾರ್ಗೆಟ್ ಗೆ ನಾವ್ಯಾರೂ ಹೆದರುವುದಿಲ್ಲ ಎಂದರು.
ಬಿಡದಿ ಹೋರಾಟದ ವಿಚಾರ ಕುರಿತು ಮಾತನಾಡಿದ ಅವರು, ವಿಧಾನಸೌಧದಲ್ಲಿ ಸಿಎಂ ಚರ್ಚೆಗೆ ಕರೆದಿದ್ದಾರೆ. ವಿಧಾನಸೌಧಕಿಂತಲೂ ಚರ್ಚೆಗೆ ಇನ್ಯಾವ ಜಾಗ ಬೇಕು ಹೇಳಿ. ವಿಧಾನಸೌಧದಲ್ಲಿಯೇ ಬಿಡದಿ ಟೌನ್ ಶಿಫ್ ಸಾಧಕ-ಭಾದಕ ಚರ್ಚೆ ಆಗಬೇಕು. ಎಲ್ಲೆಲ್ಲೋ ಕುಳಿತು ಆ ವಿಚಾರ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.




