ಮೈಸೂರು ದಸರಾ ವೇಳೆ ಕಂಬಳ ಆಚರಣೆ ಬೇಡ : ಬಿ.ವೈ.ವಿಜಯೇಂದ್ರ

ಮೈಸೂರು : ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಮುಂದಾಗಿರುವ ರಾಜ್ಯ ಸರಕಾರದ ನಡೆಗೆ ರಾಜ್ಯ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮೈಸೂರು ದಸರಾ ವೇಳೆ ಕಂಬಳ ನಡೆಸುವುದು ಬೇಡ. ರಾಜ್ಯ ಸರಕಾರ ಮೈಸೂರಿನ ಜನರ ಭಾವನೆಗೆ ಬೆಲೆ ಕೊಡಬೇಕು ಎಂದಿದ್ದಾರೆ.
ಸರಕಾರ ಭಂಡತನ ಪ್ರದರ್ಶನ ಮಾಡಬಾರದು. ಕರಾವಳಿಯಲ್ಲೇ ಕಂಬಳಬನ್ನು ಸರಕಾರ ಅದ್ದೂರಿಯಾಗಿ ಮಾಡಲಿ. ಅಲ್ಲಿನ ಪರಂಪರೆಯನ್ನು ಮೈಸೂರಿನ ಪರಂಪರೆಗೆ ತುರುಕಬೇಡಿ. ಕಂಬಳಕ್ಕೂ ತನ್ನದೇ ಆದ ಶ್ರೀಮಂತಿಕೆ ಇದೆ, ಅದನ್ನು ಉಳಿಸಿ. ಕರಾವಳಿಯಲ್ಲಿ ಅದ್ದೂರಿಯಾಗಿ ಕಂಬಳ ಮಾಡಿ ನಮ್ಮ ಸಹಕಾರ ಇರುತ್ತೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
Next Story




