Mysuru | ದಾಸವಾಳ ಹೂವು ತಿಂದು ಮಗು ಸಾವು

ಮೈಸೂರು: ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಏಳು ತಿಂಗಳ ಗಂಡು ಮಗು ದಾಸವಾಳದ ಹೂವು ತಿಂದು ಮೃತಪಟ್ಟ ಘಟನೆ ನಡೆದಿದೆ.
ಗ್ರಾಮದ ಸುದರ್ಶನ್-ನವ್ಯ ದಂಪತಿಯ ಪುತ್ರ ಆರೂವರೆ ತಿಂಗಳ ಚಿನ್ಮಯ್ ಗೌಡ ಮೃತಪಟ್ಟ ಮಗು.
ಮೊನ್ನೆ ಮನೆಯ ಹೊಸಲಿಗೆ ಪೂಜೆ ಮಾಡಿ ದಾಸವಾಳದ ಹೂ ಇಡಲಾಗಿತ್ತು. ಅಣ್ಣನೊಂದಿಗೆ ಆಟವಾಡುತ್ತಿದ್ದ ಮಗು ಚಿನ್ಮಯ್ ದಾಸವಾಳದ ಹೂವಿನ ಹಸಿರು ತೊಟ್ಟಿನ ಭಾಗವನ್ನು ಕಿತ್ತು ತಿಂದಿದೆ. ಇದನ್ನು ಗಮನಿಸಿದ ಅಣ್ಣ, ಮಗುವಿನ ಬಾಯಿಂದ ತೊಟ್ಟನ್ನು ತೆಗೆಯಲು ಯತ್ನಿಸಿದ್ದಾರೆ. ಆದರೆ, ಹೂವಿನ ಭಾಗ ಮಗುವಿನ ಶ್ವಾಸಕೋಶಕ್ಕೆ ಸಿಕ್ಕಿಕೊಂಡು ಹುಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಇದರಿಂದ ಗಾಬರಿಗೊಂಡ ಪೋಷಕರು ಮಗುವನ್ನು ಹನಗೂಡಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರಾರ್ಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.
Next Story




