ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಬದಲಿಸುವ ಪ್ರಶ್ನೆಯೇ ಇಲ್ಲ: ಎಚ್.ಸಿ.ಮಹದೇವಪ್ಪ

ಎಚ್.ಸಿ.ಮಹದೇವಪ್ಪ
ಮೈಸೂರು : ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಪ್ರಶ್ನೆಯೇ ಬಂದಿಲ್ಲ. ಪ್ರಶ್ನೆಯೇ ಇಲ್ಲದ ಮೇಲೆ ಬದಲಾವಣೆ ಎಲ್ಲಿಂದ ಹೇಳಿ? ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಪ್ರಶ್ನಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಶಾಸಕರು ಮುದ್ರೆ ಒತ್ತಿದ್ದಾರೆ. ಹೈಕಮಾಂಡ್ ಅದನ್ನು ನಿರ್ದೇಶಿಸಿದೆ. ಹೀಗಾಗಿ, ಸಿಎಂ ತಮ್ಮ ಸ್ಥಾನದಲ್ಲಿ ಗಟ್ಟಿಯಾಗಿಯೇ ಇದ್ದಾರೆ ಎಂದು ಎಂದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹೆಸರಿಗೆ ಕಳಂಕ ತರಲು ರಾಜಕೀಯ ಪಿತೂರಿಯ ಕೇಸ್ ಇದು. ಕ್ಲೀನ್ ಚಿಟ್ ಸಿಕ್ಕ ಕಾರಣ ಸಂತೋಷವಾಗಿದೆ. ರಾಜಕೀಯವಾಗಿ ಪ್ರತಿಪಕ್ಷಗಳು ಈ ದಾವೆಯನ್ನು ಬಳಸಿಕೊಂಡಿದ್ದವು. ಸಿದ್ದರಾಮಯ್ಯ ದೋಷಿನೇ ಆಗಿರಲಿಲ್ಲ. ಹೀಗಾಗಿ ನಿರ್ದೋಷಿ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
Next Story





