ಹುಣಸೂರು | ರಸ್ತೆ ಅಪಘಾತ: ಇಬ್ಬರು ಮೃತ್ಯು

ಸಾಂದರ್ಭಿಕ ಚಿತ್ರ
ಹುಣಸೂರು : ಜಾಂಡೀರ್ ಗಾಡಿ ಹಾಗೂ ಬೈಕ್ ನಡುವೆ ಸಂಭವಿಸಿದ ಢಿಕ್ಕಿಯಿಂದ ಸ್ಥಳದಲ್ಲೆ ಇಬ್ಬರು ಮೃತಪಟ್ಟ ಘಟನೆ ಕಿರಂಗೂರು ಗೇಟ್ ಬಳಿ ವರದಿಯಾಗಿದೆ.
ತಾಲೂಕಿನ ಹನಗೋಡು ಹೋಬಳಿ ಕಿರಂಗೂರು ಗೇಟ್ ಬಳಿ ಸೋಮವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ನಡೆದಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ಮಾಸ್ತಿಗುಡಿಯ ಶಿವಪ್ಪ ಎಂಬವರ ಪುತ್ರ ಪ್ರತಾಪ್(24), ಬೀಮನ ಕಟ್ಟೆಯ ಪುನೀತ್ (25) ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಿರಂಗೂರು ಗ್ರಾಮದ ಕಡೆಯಿಂದ ಬರುತ್ತಿದ್ದ ಬೈಕಿಗೆ, ಹನಗೋಡು ಕಡೆಯಿಂದ ತಮಿಳುನಾಡಿನ ಜಾಂಡಿರ್ ಗಾಡಿ ಬೈಕಿಗೆ ಢಿಕ್ಕಿ ಹೊಡೆದಿದೆ.
ಅಪಘಾತ ನಡೆದ ಸ್ಥಳಕ್ಕೆ ಎಎಸ್ಪಿ ಮಲ್ಲಿಕ್ ಹಾಗೂ ಗ್ರಾಮಾಂತರ ಪೊಲೀಸ್ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story




