ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ನೆಪದಲ್ಲಿ ಕೇಂದ್ರದಿಂದ ರೂ.1.68 ಲಕ್ಷ ಕೋಟಿ ರೂ.ಲೂಟಿ : ಎಂ.ಲಕ್ಷ್ಮಣ್ ಆರೋಪ

ಮೈಸೂರು : ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ನೆಪದಲ್ಲಿ ಕೇಂದ್ರ ಸರಕಾರ 15 ತಿಂಗಳುಗಳಲ್ಲಿ ಜನಸಾಮಾನ್ಯರು ಮತ್ತು ರೈತರಿಂದ ಸುಮಾರು 1.68 ಲಕ್ಷ ಕೋಟಿ ರೂ. ಲೂಟಿ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೆಟ್ರೋಲ್ನಲ್ಲಿ ಶೇ.30ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಒಂದು ಲೀಟರ್ ಪೆಟ್ರೋಲ್ನ ಬೆಲೆ 112 ರೂ. ಎಂದು ಪರಿಗಣಿಸಿದರೆ, ಶೇ.70ರಷ್ಟು ಪೆಟ್ರೋಲ್ಗೆ 78 ರೂ. ಹಾಗೂ 300 ಮಿಲಿಲೀಟರ್ ಎಥೆನಾಲ್ಗೆ 20 ರೂ. ವೆಚ್ಚವಾಗುತ್ತದೆ. ಒಟ್ಟು 98 ರೂ. ವೆಚ್ಚವಾಗುವ ಒಂದು ಲೀಟರ್ ಮಿಶ್ರಿತ ಇಂಧನವನ್ನು ಗ್ರಾಹಕರಿಗೆ 112 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಪ್ರತಿ ಲೀಟರ್ಗೆ 14ರಿಂದ 15 ರೂ.ನಷ್ಟು ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರಾದ ಬಿ.ಎಂ.ರಾಮು, ಗಿರೀಶ್, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.




