ಮೈಸೂರು | ಸರಗೂರು ತಾಲ್ಲೂಕಿನಲ್ಲಿ ಹುಲಿ ದಾಳಿಗೆ ಮತ್ತೋರ್ವ ಬಲಿ

ಮೈಸೂರು: ಹುಲಿ ದಾಳಿಗೆ ರೈತನೊರ್ವ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಹಳೆ ಹೆಗ್ಗೂಡಿನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು ರೈತ ದಂಡನಾಯಕ (58) ಎಂದು ಗುರುತಿಸಲಾಗಿದೆ.
ರೈತ ದಂಡನಾಯಕ ಶುಕ್ರವಾರ ಬೆಳಿಗ್ಗೆ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹುಲಿ ದಾಳಿ ನಡೆಸಿ ಕೊಂದು ಹಾಕಿದ್ದು, ಮೃತನ ಪತ್ನಿ ಬೆಳಿಗ್ಗೆ 9 ಗಂಟೆಗೆ ತನ್ನ ಗಂಡನಿಗೆ ಉಪಹಾರ ತೆಗೆದುಕೊಂಡು ಹೋದ ವೇಳೆ ಹುಲಿ ದಾಳಿ ಮಾಡಿರುವುದು ತಿಳಿದು ಬಂದಿದೆ.
ಸರಗೂರು ಭಾಗದಲ್ಲಿ ಕಳೆದ ಹದಿನೈದು ದಿನಗಳಿಂದ ಮೂವರು ರೈತರು ಹುಲಿ ದಾಳಿಗೆ ಮೃತಪಟ್ಟಿದ್ದಾರೆ. ಹುಲಿ ದಾಳಿ ಉಪಟಳಕ್ಕೆ ಈ ಭಾಗದ ಜನರು ಭಯಭೀತರಾಗಿದ್ದು, ಜೀವ ಕೈಯಲ್ಲಿಡಿದು ಬದುಕುವಂತಾಗಿದೆ.
ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Next Story





