ಮೈಸೂರು ದಸರಾ | ಪ್ರೇಕ್ಷಕರ ಕಣ್ಮನ ಸೆಳೆದ ಶ್ವಾನಗಳ ಪ್ರದರ್ಶನ

ಮೈಸೂರು, ಸೆ.28: ದೇಶ, ವಿದೇಶದ ಶ್ವಾನಗಳು ತಮ್ಮ ತುಂಟಾಟ, ಬೆಡಗು ಬಿನ್ನಾಣದಲ್ಲಿ ಹೆಜ್ಜೆ ಹಾಕುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದವು.
ಶ್ವಾನಗಳ ಆಟ, ಬುದ್ದಿವಂತಿಕೆ, ಜಾಣ್ಮೆ, ಮುಗ್ಧತೆ, ತುಂಟಾಟ, ತಾಳ್ಮೆ ಹಾಗೂ ಅವುಗಳ ಪ್ರೀತಿಯನ್ನು ಪ್ರದರ್ಶನದಲ್ಲಿ ನೆರೆದಿದಂತಹ ಪ್ರೇಕ್ಷಕರು ಕಣ್ಣುಂಬಿಕೊಂಡರು. ಪ್ರಾಣಿಪ್ರಿಯರಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು, ಶ್ವಾನಗಳನ್ನು ಕಂಡು ಪ್ರಾಣಿ ಪ್ರಿಯರು ಖುಷಿ ಪಟ್ಟರು.
ಕೆಲವು ಶ್ವಾನಗಳು ಪಿಂಕ್ ಮತ್ತು ಪರ್ಪಲ್ ಕಲರ್ ಬಟ್ಟೆಯನ್ನು ಧರಿಸಿ ಪ್ರದರ್ಶನ ನೀಡುವುದರ ಮೂಲಕ ಹೆಚ್ಚು ಗಮನ ಸೆಳೆದವು. ಪ್ರದರ್ಶನದಲ್ಲಿ ನೆರೆದಿದ್ದಂತಹ ಮಕ್ಕಳು ಶ್ವಾನಗಳ ಕಂಡು ತುಂಬಾ ಸಂತೋಷ ಪಟ್ಟರು.
ರವಿವಾರ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಜೆ.ಕೆ.ಮೈದಾನದಲ್ಲಿ ನಡೆದ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಸಿಲುಕಿ, ಮುಧೋಳ ಹೌಂಡ್, ಸೈಬೀರಿಯನ್ ಹಸ್ಕಿ ಗ್ರೇಟ್ ಡೆನ್, ಪೂಡ್ಲಿ, ಡಾಗೂ ಅರ್ಜೆಂಟೀನಾ, ರಾಜ ಪುಲಿಯಂ, ಪಿಟ್ ಬುಲ್, ಕಾಕರ್ ಸ್ಪ್ಯಾನಿಯಲ್, ಬಾಕ್ಸರ್, ಪಗ್, ಕೊಕೊಪೋ, ಫ್ರೆಂಚ್ ಬುಲ್ ಡಾಗ್ ಓಲ್ಡ್ ಶೀಪ್ ಡಾಗ್, ಐರಿಷ್ ಸೆಟ್ಟರ್ ಬೀಗಲ್, ಡಚ್ ಶೆಪರ್ಡ್, ಜರ್ಮನ್ ಶೆಪರ್ಡ್, ಚೌ ಚೌ, ಗೋಲ್ಡನ್ ರಿಟ್ರಿವರ್, ಬಾರ್ಡರ್ ಕೋಲಿ, ಬರ್ಮೀಸ್ ಮೌಂಟೇನ್ ಡಾಗ್, ಲಾಸ್ ಅಪ್ಲೋ, ಸೇರಿಂದಂತೆ ಮತ್ತಿತರ ಶ್ವಾನಗಳು ಪ್ರದರ್ಶನ ನೀಡಿದವು.
ಮೈಸೂರಿನ ಡಾಗ್ ಸ್ಕ್ಯಾಡ್‌ನ ಪೊಲೀಸ್ ಶ್ವಾನಗಳು ಅತ್ಯುತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಪ್ರೇಕ್ಷಕರ ಗಮನ ಸೆಳೆದವು.
ಈ ಬಾರಿಯ ದಸರಾದಲ್ಲಿ ವಿಶೇಷತೆ: ಕಳೆದ ಬಾರಿ ದಸರಾದಲ್ಲಿ ಸುಮಾರು 45 ತಳಿಗಳ ಶ್ವಾನಗಳು ನೋಂದಣಿಯಾಗಿತ್ತು, ಆದರೆ ಈ ಬಾರಿಯ ದಸರಾದಲ್ಲಿ 650 ತಳಿಗಳು ಪ್ರದರ್ಶನದಲ್ಲಿ ನೋಂದಣಿಯಾಗಿವೆ. ಅದರಲ್ಲಿ 450 ತಳಿಗಳನ್ನು ಒಳಗೊಂಡಿದ್ದು, ವಿವಿಧ ತಳಿಯ ಶ್ವಾನಗಳು ಪ್ರದರ್ಶನ ನೀಡಿದವು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ಹಾಗೂ ತಳಿಗಳ ಶ್ವಾನಗಳನ್ನು ಶ್ವಾನ ವೈದ್ಯಾಧಿಕಾರಿಗಳು ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿರುವಂತಹ ತೀರ್ಪುಗಾರರಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ವಿತರಿಸಲಾಯಿತು.
ಪ್ರದರ್ಶನದಲ್ಲಿ ಭಾಗಿಯಾಗಿದಂತಹ ಪ್ರೇಕ್ಷಕರು, ವಿವಿಧ ಪ್ರಕಾರದ ಶ್ವಾನಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ ಪಡಿಸಿ ವಿವಿಧ ಪ್ರಕಾರದ ತಳಿಯ ಶ್ವಾನಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.







