ʼಗೃಹಲಕ್ಷ್ಮಿʼಗೆ 3 ವರ್ಷದ ಸಂಭ್ರಮ; ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಿದ ಮೈಸೂರು ಅರಮನೆ

ಮೈಸೂರು : ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ, ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾಗಿರುವ ʼಗೃಹಲಕ್ಷ್ಮಿʼ ಯೋಜನೆ ಜಾರಿಗೆ ಬಂದು ಇಂದು (ಆ.30) ಮೂರು ವರ್ಷಗಳನ್ನು ಪೂರೈಸಿದೆ.
ಈ ಸಂಭ್ರಮದ ಸವಿನೆನಪಿಗಾಗಿ "ಮೈಸೂರು ಅರಮನೆ" ಗುಲಾಬಿ ಬಣ್ಣದ (ಪಿಂಕ್ ಲೈಟ್) ಬೆಳಕಿನಲ್ಲಿ ಕಂಗೊಳಿಸಿ ಪ್ರವಾಸಿಗರ ಕಣ್ಮನ ಸೆಳೆಯಿತು.
ಇದುವರೆಗೂ ಸದರಿ ಯೋಜನೆ ಅಡಿ 1.20 ಕೋಟಿ ಫಲಾನುಭವಿಗಳ ಖಾತೆಗೆ 76,500ಕೋಟಿಗೂ ಹೆಚ್ಚು ಹಣ ಪಾವತಿಸಲಾಗಿದೆ.
Next Story




