Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಮೈಸೂರು
  4. ಮೈಸೂರು: ವಿರೋಧದ ನಡುವೆಯೂ ಮಹಿಷ ದಸರಾಗೆ...

ಮೈಸೂರು: ವಿರೋಧದ ನಡುವೆಯೂ ಮಹಿಷ ದಸರಾಗೆ ವಿಧ್ಯುಕ್ತ ಚಾಲನೆ

ವಾರ್ತಾಭಾರತಿವಾರ್ತಾಭಾರತಿ29 Sept 2024 12:05 PM IST
share
ಮೈಸೂರು: ವಿರೋಧದ ನಡುವೆಯೂ ಮಹಿಷ ದಸರಾಗೆ ವಿಧ್ಯುಕ್ತ ಚಾಲನೆ

ಮೈಸೂರು : ಸಣ್ಣ ವಿರೋಧದ ನಡುವೆಯೂ ಮಹಿಷ ದಸರಾಗೆ ವಿದ್ಯುಕ್ತ ಚಾಲನೆ ನೀಡಲಾಗಿದೆ.

ನಗರದ ಪುರಭವನದ ಆವರಣದಲ್ಲಿ ರವಿವಾರ ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ‘ಮಹಿಷ ಮಂಡಲೋತ್ಸವ’ ಮಹಿಷ ದಸರಾ ಆಚರಣೆಯನ್ನು ಮಾಡಲಾಯಿತು. ಕಂಚಿನ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರಸಿದ್ಧ ಚಿಂತಕ ಯೋಗೇಶ್ ಮಾಸ್ಟರ್ ವಿಧ್ಯುಕ್ತ ಚಾಲನೆ ನೀಡಿದರು. ಈ ವೇಳೆ ಬುದ್ಧ, ಅಂಬೇಡ್ಕರ್ ಅವರ ಕಂಚಿನ ಮೂರ್ತಿಗಳಿಗೂ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ಬಳಿಕ ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಪ್ರಚೋದನೆ ನೀಡುವವರ ವಿರುದ್ಧ ಕಾನೂನು ಕ್ರಮ ವಹಿಸುವ ಬದಲು ಮಹಿಷ ಪ್ರತಿಮೆಗೆ ನಮಿಸಿ ಶಾಂತಿಯಿಂದ ಬದುಕುತ್ತೇವೆ ಎನ್ನುವವರ ವಿರುದ್ಧ ಸರಕಾರ ನಿಂತಿದೆ. ಬಾಬಾ ಸಾಹೇಬರ ಸಂವಿಧಾನ ಸತ್ತು ಹೋಗಿದೆ. ನಿಮ್ಮ ದಸರೆಗೆ ಯಾವುದೇ ತೊಂದರೆ ಕೊಟ್ಟಿಲ್ಲ. ನಮಗೆ ತೊಂದರೆ ಕೊಡುತ್ತೀರೇಕೆ? ಚಾಮುಂಡಿ ಬೆಟ್ಟವನ್ನು ಬೇರೆ ಯಾರಿಗಾದರೂ ಖಾತೆ ಮಾಡಿಕೊಟ್ಟಿದ್ದೀರಾ? ನಂದಿಧ್ವಜ ಪೂಜೆ ಹೇಗೆ ಮಾಡುತ್ತೀರಾ ನೋಡುತ್ತೇವೆ ಎಂದು ಗುಡುಗಿದರು.

ಮಹಿಷಾಸುರ ಅತ್ಯಂತ ಶೂರನಾದ ವ್ಯಕ್ತಿ. ಮಹಿಷನನ್ನು ಕಂಡರೆ ಎಲ್ಲರಿಗೂ ಭಯ ಇತ್ತು. ಅಂತಹ ಶೂರ ವ್ಯಕ್ತಿಯನ್ನು ನಾವು ಆರಾಧಿಸುತ್ತಿದ್ದೇವೆ. ಮಹಿಷಾಸುರನ ವಿರುದ್ಧ ಸುಳ್ಳಿನ ಇತಿಹಾಸವನ್ನು ಸೃಷ್ಟಿಸಲಾಗುತ್ತಿದ್ದು, ನಾವು ಜನತೆಗೆ ಸತ್ಯ ತಿಳಿಸಬೇಕು ಎಂದು ಹೇಳಿದರು.

ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ವಿಜಯದಶಮಿ ಮೆರವಣಿಗೆಯಂದು ಅಶೋಕಪುರಂ ಉದ್ಯಾನದಿಂದ ಅಶೋಕ ಚಕ್ರವರ್ತಿಯ ಪ್ರತಿಮೆ ಮೆರವಣಿಗೆ ಮಾಡುತ್ತೇವೆ. ನಮಗೂ ಅವಕಾಶ ಕೊಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ ಎಂದು ಜಿಲ್ಲಾಡಳಿತಕ್ಕೆ ಸವಾಲು ಹಾಕಿದರು.

ಸಮುದಾಯದ ಭಾವನೆಗಳಿಗೆ ಸಂವಿಧಾನಾನುಸಾರ ಸಮಾನ ಪ್ರಾಶಸ್ತ್ಯ ನೀಡುತ್ತಿಲ್ಲ. ನಮ್ಮ ಆಚರಣೆ ತಡೆದವರಿಗೆ ದಸರಾ ಹೇಗೆ ಉದ್ಘಾಟನೆ ಮಾಡುತ್ತೀರ ಎಂಬುದನ್ನು ತೋರಿಸುತ್ತೇವೆ. ರಾಜ್ಯದೆಲ್ಲೆಡೆ ರಸ್ತೆ, ರೈಲು, ಬಸ್ ತಡೆ ನಡೆಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಚಾಮರಾಜನಗರದ ಬೋದಿದತ್ತ ಬಂಜೇಜಿ, ಚಿಂತಕ ಯೋಗೇಶ್ ಮಾಸ್ಟರ್, ಅಂಕಣಕಾರ ಶಿವಸುಂದರ್, ಲೇಖಕ ಸಿದ್ಧಸ್ವಾಮಿ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಉಪಸ್ಥಿತರಿದ್ದರು. ಡಾ.ಕೃಷ್ಣಮೂರ್ತಿ ಚಮರಂ ಕಾರ್ಯಕ್ರಮ ನಿರ್ವಹಣೆ ಮಾಡಿದರು.

"ಮಹಿಷನನ್ನು ದೆವ್ವ ಅಂದವನಿಗೆ ಶಾಪ ತಟ್ಟಿ ಮೈಸೂರಿನಿಂದ ಹೊರ ಹೋಗಿದ್ದಾನೆ. ಮಹಿಷ ದಸರಾ ಆಚರಣೆ ಮಾಡುವವರಿಗೆ ಮಹಿಷನಂತಹ ಮಕ್ಕಳು ಹುಟ್ಟಲಿ ಎಂದು ಹಾರೈಸಿದ್ದಾರೆ. ಅವರ ಹಾರೈಕೆಯಂತೆ ನಮಗೆ ಮಹಿಷನಂತಹ ಮಕ್ಕಳೇ ಹುಟ್ಟಲಿ. ಆದರೆ, ಅವರು ಗಣಪತಿ, ಆಂಜನೇಯನನ್ನು ಪೂಜಿಸುತ್ತಾರೆ. ಒಂದು ವೇಳೆ ಗಣಪತಿ ಹಾಗೂ ಆಂಜನೇಯನಂತಹ ಮಕ್ಕಳು ಅವರಿಗೆ ಹುಟ್ಟಿದರೆ ಆ ಮಕ್ಕಳನ್ನು ಕರೆದುಕೊಂಡು ವಾಕಿಂಗ್ ಹೋಗಲು ಸಾಧ್ಯವೇ? ನಿಮಗೆ ಗಣೇಶ, ಆಂಜನೇಯನಂತಹ ಮಕ್ಕಳು ಹುಟ್ಟಲಿ"

ಜ್ಞಾನಪ್ರಕಾಶ್ ಸ್ವಾಮೀಜಿ, ಉರಿಲಿಂಗಿ ಪೆದ್ದಿ ಮಠ

"ಮಹಾರಾಷ್ಟ್ರದಲ್ಲಿ ಮಹಿಷನ ದೇವಸ್ಥಾನ ಇದೆ. ಮಹಿಷನ ಬಗ್ಗೆ ಮರೆಮಾಚಿರುವ ಇತಿಹಾಸ ಹೊರತರುವ ಕಾರ್ಯ ಆಗಬೇಕು. ಜನರನ್ನು ರಕ್ಷಣೆ ಮಾಡುತ್ತಿದ್ದವರನ್ನೇ ರಾಕ್ಷಸರು ಎಂದು ಬಿಂಬಿಸಲಾಗಿದೆ. ಒಂದು ವರ್ಗ ರಾಕ್ಷಸರ ಕುರಿತು ಕೆಟ್ಟದಾಗಿ ಬಿಂಬಿಸಿರುವುದನ್ನು ನಾವು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಚಂಡ-ಮುಂಡರನ್ನು ಕೊಂದವಳು ಚಾಮುಂಡಿ. ಆದರೆ, ಆಕೆ ಮಹಿಷ ಮರ್ದಿನಿ ಹೇಗೆ ಆದಳು ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕು"

ಯೋಗೇಶ್ ಮಾಸ್ಟರ್, ಚಿಂತಕ

"ನಮ್ಮ ಆಚರಣೆಗಳಿಗೆ ಯಾವುದೇ ಸರಕಾರ ಅಡ್ಡಿ ಪಡಿಸಬಾರದು. ಇದು ಮೂಲಭೂತ ಹಕ್ಕಿನ ಮೊಟಕಾಗಿದೆ. ನನ್ನ ದೇವರನ್ನು ಪೂಜಿಸಿದರೆ ನಿಮಗೆ ನೋವಾಗುತ್ತದೆ ಎಂದರೆ ನಾವು ಏನು ಮಾಡಲು ಸಾಧ್ಯ? ನಾವು ಮಹಿಷನನ್ನು ಪೂಜೆ ಮಾಡಿದರೆ ಬೇರೆಯವರ ಭಾವನೆಗೆ ಹೇಗೆ ಧಕ್ಕೆ ಉಂಟಾಗಲು ಸಾಧ್ಯ? ನಮ್ಮ ದೇವರನ್ನು ರಾಕ್ಷಸರು ಎಂದು ಬಿಂಬಿಸಿ ನಮ್ಮನ್ನು ಮತ್ತೆ ದಾಸ್ಯಕ್ಕೆ ದೂಡುವ ಪ್ರಯತ್ನ ನಡೆಯುತ್ತಿದೆ"

ಶಿವಸುಂದರ್, ಅಂಕಣಕಾರ

"ಮನುಸ್ಮತಿಯಲ್ಲಿ ಎಲ್ಲ ಶೂದ್ರರು ಬ್ರಾಹ್ಮಣರ ಗುಲಾಮರು, ವೇಶ್ಯೆಯರ ಮಕ್ಕಳು ಎಂಬ ಅರ್ಥವಿದೆ. ಇಂತಹ ಧರ್ಮ ವನ್ನು ನೀವು ಒಪ್ಪಿಕೊಳ್ಳುತ್ತೀರಾ? ದೇವಸ್ಥಾನ ಕಟ್ಟಿದವರು ಶೂದ್ರರು. ಆದರೆ, ದೇವಸ್ಥಾನ ಕಟ್ಟಿದ ನಂತರ ಅವರನ್ನು ಹೊರಗೆ ನಿಲ್ಲಿಸುತ್ತಾರೆ. ಇಂತಹ ಹಿಂದೂ ಧರ್ಮದ ಆಚರಣೆಗಳನ್ನು ನೀವು ಮಾಡಬೇಕಾ? ನಿಮಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗಬೇಡಿ"

ಪ್ರೊ.ಕೆ.ಎಸ್.ಭಗವಾನ್, ಸಾಹಿತಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X