ಮೈಮುಲ್ ಅಧ್ಯಕ್ಷ ಚಲುವರಾಜ್ ಮನೆ ಮೇಲೆ ಐಟಿ ದಾಳಿ : ದಾಖಲೆಗಳ ಪರಿಶೀಲನೆ

ಮೈಸೂರು : ಮೈಮುಲ್ ಅಧ್ಯಕ್ಷ ಚಲುವರಾಜ್ ಅವರ ಮನೆ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಮೈಸೂರಿನಲ್ಲಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಶುಕ್ರವಾರವು ಸಹ ದಾಳಿ ಮುಂದುವರೆಸಿದ್ದಾರೆ.
ಚಲುವರಾಜ್ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ರಚ್.ಸಿ.ಮಹದೇವಪ್ಪ ಮತ್ತು ಸಂಸದ ಸುನೀಲ್ ಬೋಸ್ ಅವರ ಆಪ್ತರಾಗಿದ್ದಾರೆ.
ರಾಮವಿಲಾಸ ರಸ್ತೆಯಲ್ಲಿರುವ ಕೆ.ಆರ್.ಸಿ.ಗ್ರೂಪ್ ಕಚೇರಿ ಮತ್ತು ಆಲನಹಳ್ಳಿಯಲ್ಲಿರುವ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Next Story





