ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ನಲ್ಲಿ ಚರ್ಚೆಯೇ ಆಗಿಲ್ಲ : ಎಚ್.ಎಂ.ರೇವಣ್ಣ
"ಪ್ರತೀ ತಿಂಗಳು ಗೃಹಲಕ್ಷ್ಮೀ ಹಣ ಕೊಡಲು ಆಗಿಲ್ಲ"

ಮೈಸೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯೇ ನಡೆದಿಲ್ಲ ಎಂದು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ತಿಳಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಕೆಲವೊಂದಿಷ್ಟು ಗೊಂದಲಗಳು ಇತ್ತು. ಇವುಗಳನ್ನು ಈಗ ಹೈಕಮಾಂಡ್ ಬಗೆಹರಿಸಿದೆ. ಮುಖ್ಯಮಂತ್ರಿ ಕುರ್ಚಿಯ ವಿಚಾರದಲ್ಲಿ ನಾವು ಮಾಧ್ಯಮಗಳ ಮುಂದೆ ಮಾತನಾಡಬಾರದೆಂದು ಸೂಚನೆ ಇದೆ ಎಂದು ಅವರು ಹೇಳಿದರು.
ಪ್ರತಿ ತಿಂಗಳು ಕೊಡಲು ಆಗಿಲ್ಲ:
ಕೆಲವು ತೊಡಕುಗಳು ಇರುವ ಕಾರಣ ಪ್ರತೀ ತಿಂಗಳು ಗೃಹಲಕ್ಷ್ಮೀ ಹಣ ಕೊಡಲು ಆಗಿಲ್ಲ. ಹೀಗಾಗಿ ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮೀ ಹಣ ಕೊಡುತ್ತಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
Next Story





