ಕಾಂಗ್ರೆಸ್ ಹಿರಿಯ ಮುಖಂಡ ಟಿ.ಎಸ್.ರವಿಶಂಕರ್ ನಿಧನ

ಮೈಸೂರು : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ಟಿ.ವಿ ಶ್ರೀನಿವಾಸ್ ರಾವ್ ಅವರ ಪುತ್ರ ಕಾಂಗ್ರೆಸ್ ಹಿರಿಯ ಮುಖಂಡ ಟಿ.ಎಸ್.ರವಿಶಂಕರ್ (64) ಅವರು ಹೃದಯಘಾತದಿಂದ ಸೋಮವಾರ ನಿಧನರಾಗಿದ್ದಾರೆ.
ಟಿ.ಎಸ್.ರವಿಶಂಕರ್ ಅವರು ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ನಗರಾಧ್ಯಕ್ಷರಾಗಿ, ಗ್ರಾಜಿಯೇಟ್ಸ್ ಕೋ ಆಪರೇಟಿವ್ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿ ಬಲಿಷ್ಠ ಅನುಭವಿ ರಾಜಕೀಯ ಹಿನ್ನೆಲೆ ಹೊಂದಿದ್ದರು.
ಟಿ. ಎಸ್. ರವಿಶಂಕರ್ ಅವರು ಪತ್ನಿ ಕಮಲಮ್ಮ , ಮಕ್ಕಳಾದ ನಿಖಿಲ್, ರಾಹುಲ್, ಸಹೋದರರಾದ ವೆಂಕಟೇಶ್, ಅನಿಲ್, ಸಹೋದರಿಯರಾದ ವಿಜಯಲಕ್ಷ್ಮಿ ಹಾಗೂ ಡಾ. ಸುಜಾತಾ ರಾವ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಜ.29 ರ ಬುಧವಾರದಂದು ಬೆಳಗ್ಗೆ 10 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲ್ಲಲಿರುವ ಸುಡುವ ರುದ್ರ ಭೂಮಿಯಲ್ಲಿ ಜರಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸುವೆ.
ಅಂತಿಮ ದರ್ಶನ ಪಡೆದ ಸಚಿವ ದಿನೇಶ್ ಗುಂಡೂರಾವ್ :
ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೃತ ಟಿ.ಎಸ್.ರವಿಶಂಕರ್ ಅವರ ಅಂತಿಮ ದರ್ಶನ ಪಡೆದರು. ನಗರದ ವಿದ್ಯಾರಣ್ಯಪುರಂನಲ್ಲಿರುವ ಅವರ ನಿವಾಸಕ್ಕೆ ತೆರಳಿ ಭಾರತ ಸೇವಾದಳದ ಕಾಂಗ್ರೆಸ್ ಧ್ವಜವಂದನೆ ಸಲ್ಲಿಸಿದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.
ಎಚ್.ಎ ವೆಂಕಟೇಶ್ ಸಂತಾಪ:ಟಿ. ಎಸ್. ರವಿಶಂಕರ್ ನಿಧನಕ್ಕೆ ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಸಂತಾಪ ಸೂಚಿಸಿದ್ದಾರೆ.







