Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಮೈಸೂರು
  4. ಕನ್ನಡವನ್ನು ಉಳಿಸಿಕೊಳ್ಳಲು ಕಲೆಗಳಲ್ಲಿ...

ಕನ್ನಡವನ್ನು ಉಳಿಸಿಕೊಳ್ಳಲು ಕಲೆಗಳಲ್ಲಿ ಕನ್ನಡವನ್ನು ತುಂಬಿ ತುಳುಕಿಸಬೇಕು : ಹಂಸಲೇಖ

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ ಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ

ವಾರ್ತಾಭಾರತಿವಾರ್ತಾಭಾರತಿ30 Nov 2024 11:51 PM IST
share
Photo of Program

ಮೈಸೂರು: ಶಿಕ್ಷಣದಲ್ಲಿ ಕನ್ನಡ ಆತಂಕದ ಸ್ಥಿತಿಯನ್ನು ಎದುರು ನೋಡುತ್ತಿರುವಾಗ ಕನ್ನಡವನ್ನು ಉಳಿಸಿಕೊಳ್ಳಲು ಪರ್ಯಾಯ ಮಾರ್ಗವಾಗಿ ಕಲೆಗಳಲ್ಲಿ ಕನ್ನಡವನ್ನು ತುಂಬಿ ತುಳುಕಿಸಿ ಬೆಳಸಬೇಕಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ತಾಯಂದಿರಿಂದ ಕನ್ನಡ ಶಿಕ್ಷಣಕ್ಕೆ ಆತಂಕ ಎದುರಾಗಿದೆ. ತಮ್ಮ ಮಕ್ಕಳು ಎಲ್ಲೋ ಬಸ್ ಹತ್ತಿ ಇಂಗ್ಲಿಷ್ ಕಲಿತರೆ ಜಗತ್ತಿನಲ್ಲಿ ದೊಡ್ಡವರಾಗುತ್ತಾರೆ ಎಂಬ ನಂಬಿಕೆ. ಅವರ ಆಶಯ ಸಂವಿಧಾನದಿಂದ ಜಾರಿಗೆ ಬರುತ್ತದೆ. ಕನ್ನಡದ ಉಳಿವಿಗೆ ಪರ್ಯಾಯ ಮಾರ್ಗ ಹುಡುಕಬೇಕಿದೆ ಎಂದರು.

ಕರ್ನಾಟಕದಲ್ಲಿ ಕನ್ನಡೇತರರು ಹೆಚ್ಚಿದ್ದಾರೆ. ಅವರೆಲ್ಲರೂ ಕನ್ನಡವನ್ನು ಹಾಡಬೇಕು. ಆರಾಧಿಸಬೇಕು ಮತ್ತು ಕುಣಿಯುವಂತಾಗಬೇಕು. ಅದಕ್ಕೆ ಕಲೆಗಳಲ್ಲಿ ಕನ್ನಡವನ್ನು ತುಂಬಬೇಕು. ಇದು ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.

ಕರ್ನಾಟಕ ನಾಮಕರಣಗೊಂಡ ಕವಿವಾಣಿಯು ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂದಿತು. ಅದನ್ನು ಈಗ ಉಸಿರಾಯಿತು ಕರ್ನಾಟಕ ಬದುಕಾಗಲಿ ಕನ್ನಡ ಬದಲಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಪ್ರತಿಧ್ವನಿ ಮತ್ತು ಪ್ರತಿಭಟನೆಯ ಮಾಧ್ಯಮವಾದ ನಾಟಕ ನಿಂತ ನೀರಾಗಿದೆ. ಅದಕ್ಕೆ ಮರು ಚಾಲನೆ ನೀಡಲು ಸಂವಿಧಾನವನ್ನು ರಂಗಕ್ಕೆ ತರಬೇಕಿದೆ. ಆ ಮೂಲಕ ರಾಷ್ಟ್ರ ಬಯಸುತ್ತಿರುವ ಭಾತೃತ್ವದ ಭಾವನೆಯನ್ನು ಪ್ರತಿನಿಧಿಸುವಂತಾಗಬೇಕು ಎಂದರು.

ಶೀಲ, ಸುಶೀಲ, ಪಂಚಶೀಲ, ಸಪ್ತ ಶೀಲ ಮತ್ತು ಪ್ರಗತಿಶೀಲ ಭಾರತ ದೇಶಕ್ಕೆ ಬೇಕಾಗಿರುವುದು. ಬುದ್ಧ ಹೇಳಿದ ಪಂಚ ಶೀಲವನ್ನು ಕನ್ನಡೀಕರಿಸಿದವನು ಬಸವಣ್ಣ. ಕನ್ನಡ ಯಾವತ್ತೂ ಪ್ರಗತಿಶೀಲವಾಗಲೆಂದು ಹಾರೈಸುತ್ತೇನೆ ಎಂದು ತಿಳಿಸಿದರು.

ಜಾನಪದ ವಿವಿ ಸ್ಥಾಪನೆಯಾದಾಗ ಗೊ.ರು.ಚನ್ನಬಸಪ್ಪ ಅವರು ಹೊನ್ನ ಬಿತ್ತೆವು ಹೊಲಕ್ಕೆಲ್ಲ ಎಂದರು. ಮೈಸೂರು ಸಂಗೀತ ವಿಶ್ವವಿದ್ಯಾನಿಲಯ ಬೆಳಕ ಬಿತ್ತೆವು ಎಲ್ಲ ಕಲೆಗಳಿಗೆ ಎಂಬ ಆಶಯದಲ್ಲಿ ಕಾರ್ಯೋನ್ಮುಖವಾಗಿದೆ. ಯಾವಾಗ ಬಂದರೂ ನಿತ್ಯ ಕಲ್ಯಾಣ ವಾತಾವರಣ ಇರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಗೀತ ವಿವಿ ಸಂಶೋಧನ ವನ. ಚಟುವಟಿಕೆಗಳ ಶಾಸ್ತ್ರಗಳ ಪಾಠಶಾಲೆ, ಸಂಗೀತ -ಪ್ರದರ್ಶನ ಕಲೆಗಳ ಸಮೀಕರಣ ಮಾಡುವುದು ಬಹಳ ಕಷ್ಟ. ಪ್ರತಿ ಕಲೆಗೂ ಶಾಸ್ತ್ರ ನಿರ್ಮಾಣ ಕಾರ್ಯಕ್ಕೆ ಸಂಗೀತ ವಿವಿ ಅಡುಗೆ ಮನೆಯಂತಿದೆ. ಐದನಿ ಸಂಗೀತದ 18 ವರ್ಷಗಳ ವನವಾಸಕ್ಕೆ ಡಿ.ಲೀಟ್ ಪದವಿ ನೀಡಿ ಮುಕ್ತಿಗೊಳಿಸಿತು ಎಂದು ಹೇಳಿದರು.

ಸಾಹಿತಿ ಡಾ.ಕೆ.ಮರಳಸಿದ್ದಪ್ಪ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಉಸಿರಾಗಲಿ ಕನ್ನಡ ಘೋಷಣೆಯಾಗಿ ಉಳಿದಿದೆ. ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಪ್ರಾಶಸ್ತ್ಯ ಕೊಟ್ಟು ಆರೋಗ್ಯ ಕ್ಷೇತ್ರವನ್ನು ಸಬಲಗೊಳಿಸಿದಾಗ ಕನ್ನಡ ಉಸಿರಾಡುತ್ತದೆ ಎಂದರು.

ಪ್ರಾಚೀನ ಸಾಹಿತ್ಯದಲ್ಲಿ ತಮಿಳು ನಂತರದ ಸ್ಥಾನವನ್ನು ಕನ್ನಡ ಪಡೆದಿದೆ. ಭಾಷೆಯಾಗಿ ಕನ್ನಡ ತಮಿಳಿಗಿಂತ ಪ್ರಾಚೀನತೆ ಇದೆ. ಅದಕ್ಕಾಗಿ ನಾವೆಲ್ಲರೂ ಹೆಮ್ಮೆ ಪಡಬೇಕು. ನಮ್ಮ ಮಕ್ಕಳು ಹೆಮ್ಮೆ ಪಡಬೇಕು. ಇಂಗ್ಲಿಷ್ ಕಲಿತರೆ ಉದ್ಯೋಗ ಸಿಗುತ್ತದೆಂಬ ಭ್ರಮೆ ಬಿಡಬೇಕು. ಸರ್ಕಾರ ಕನ್ನಡ ಸರ್ಕಾರಿ ಶಾಲೆಗಳನ್ನು ಸುಧಾರಿಸುವ ಸದ್ಬುದ್ಧಿ ಕೊಡಲೆಂದು ಪ್ರಾರ್ಥಿಸುವುದಾಗಿ ಹೇಳಿದರು.

ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ವಾಂಸ ಪ್ರೊ.ಎಸ್.ಸಿ. ಶರ್ಮ ಮಾತನಾಡಿ, ನ್ಯಾಕ್ ಸಮಿತಿಯಲ್ಲಿ ಕೆಲಸ ಮಾಡುವಾಗ ಪ್ರದರ್ಶಕ ಕಲೆಗಳಿಗೆ ಮಾನದಂಡ ರೂಪಿಸುವುದು ಕಷ್ಟಕರ. ಏಕೆಂದರೆ ಈಗ ನುಡಿಸಿದ ಆಲಾಪನೆ, ಮತ್ತೆ ನುಡಿಸುವಾಗ ಬದಲಾಗುತ್ತದೆ. ಸಂಗೀತ ವಿವಿಯಲ್ಲಿ ಪ್ರದರ್ಶಕ ಕಲೆಗಳ ನಾವೀನ್ಯ ಸಂಶೋಧನೆಗೆ ವೇದಿಕೆಯಾಗಿದೆ ಎಂದು ಪ್ರಶಂಸಿಸಿದರು.

ಹಿಂದೂಸ್ತಾನಿ ಸಂಗೀತ ಗಾಯಕ ಡಾ.ನಾಗರಾಜ ರಾವ್ ಹವಾಲ್ದಾರ್, ಜಾನಪದ ಕಲಾಶ್ರೀ ಮುಖವೀಣೆ ಅಂಜನಪ್ಪ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮುಖ್ಯ ಭಾಷಣ ಮಾಡಿದರು. ಕುಲಪತಿ ಡಾ.ನಾಗೇಶ್ ವಿ.ಬೆಟ್ಟಕೋಟೆ ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ಅಧಿಕಾರಿ ರೇಖಾ ಕೆ.ಎಸ್, ಕುಲಸಚಿವ ಪ್ರೊ.ಜಿ.ವಿ. ವೆಂಕಟರಮಣ ಇದ್ದರು.

ಸಭಾ ಕಾರ್ಯಕ್ರಮದ ಬಳಿಕ ಜಾನಪದ ನೃತ್ಯ, ಡೊಳ್ಳು ಕುಣಿತ, ಕಂಸಾಳೆ ನೃತ್ಯ, ಪುಷ್ಪಾಂಜಲಿ ನೃತ್ಯ, ಹಿಂದೂಸ್ತಾನಿ ಸಂಗೀತ ಗಾಯನ, ಕನ್ನಡ ಶ್ರೀಮಂತಿಕೆಯ ಬಿಂಬಿಸುವ ನಾಟಕ, ಕರ್ನಾಟಕ ವಾದ್ಯ ಸಂಗೀತ, ಗೌಂಡೇಲಿ ನೃತ್ಯ, ಭಾವಗೀತೆ ನೃತ್ಯ, ಐದನಿ ಶಾಸ್ತ್ರದ ಕರ್ನಾಟಕ ಸಾಹಿತ್ಯ ಪರಂಪರೆ ಹಾಡುಗಾರಿಕೆ, ಹಿಂದೂಸ್ತಾನಿ ಸಂಗೀತ, ಡೋಲು ಮತ್ತು ನಾದಸ್ವರ ಪ್ರದರ್ಶನಗೊಂಡಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X