ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ರದ್ದಾದ ವಜ್ರಮುಷ್ಟಿ ಕಾಳಗ

ಸಾಂದರ್ಭಿಕ ಚಿತ್ರ
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಸಂಪ್ರದಾಯಗಳಲ್ಲಿ ಒಂದಾಗಿರುವ ‘ವಜ್ರಮುಷ್ಟಿ ಕಾಳಗ’ ಪೊಲೀಸರ ಅಡ್ಡಿಯಿಂದ ಈ ಬಾರಿ ರದ್ದಾಯಿತು.
ಮೈಸೂರು ಸಂಸ್ಥಾನ ಹಾಗೂ ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಜ್ರಮುಷ್ಠಿ ಕಾಳಗವನ್ನು ರದ್ದುಗೊಳಿಸಲಾಯಿತು. ಪರಂಪರಾಗತವಾಗಿ ಈ ಕಾಳಗ ನಡೆದುಕೊಂಡು ಬಂದಿದ್ದು, ಸಾಂಪ್ರದಾಯಿಕವಾಗಿ ಅರಮನೆಯಿಂದ ಯದುವೀರ್ ಒಡೆಯರ್ ವಿಜಯಯಾತ್ರೆ ಹೊರಡುವ ಮುನ್ನ ಅಂಬಾ ವಿಲಾಸ ಅರಮನೆ ಆವರಣದ ಕಲ್ಯಾಣ ತೊಟ್ಟಿಯಲ್ಲಿ ರೋಚಕ ವಜ್ರಮುಷ್ಟಿ ಕಾಳಗ ಸಂಪ್ರದಾಯದಂತೆ ನಡೆಯಬೇಕಿತ್ತು. ಆದರೆ, ಸಮನ್ವಯದ ಕೊರತೆಯಿಂದ ರದ್ದಾಗಿದೆ.
ಈ ನಡುವೆ ರಾಜಮನೆತನದ ಮನವೊಲಿಕೆಗೆ ಯತ್ನಿಸಲಾದರು ಸಫಲವಾಗಲಿಲ್ಲ ಎನ್ನಲಾಗಿದೆ. ವಜ್ರಮುಷ್ಠಿ ಕಾಳಗ ರದ್ದಾಗಲು ಪೊಲೀಸರ ಅಡಚಣೆ ಕಾರಣ. ಸಕಾಲಕ್ಕೆ ಅವಕಾಶ ಕಲ್ಪಿಸಿದ್ದರೆ ಸಿದ್ಧತೆ ಮಾಡಿಕೊಳ್ಳಬಹುದಿತ್ತು ಎಂದು ಪೈಲ್ವಾನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story




