ಉದ್ಯೋಗದ ನೆಪದಲ್ಲಿ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ | ‘ಪ್ರಬಲ ರಾಜಕಾರಣಿಗಳು ಶಾಮೀಲು’ ; ಆರ್ಜೆಡಿ ಆರೋಪ

ಸಾಂದರ್ಭಿಕ ಚಿತ್ರ
ಪಾಟ್ನಾ : ‘ಉದ್ಯೋಗ ನೀಡುವ ನೆಪದಲ್ಲಿ ವಂಚಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ’ ಎಂದು ಮಹಿಳೆಯರು ದೂರು ನೀಡಿರುವ ಆತಂಕಕಾರಿ ಘಟನೆ ಬಿಹಾರದ ಮುಜಾಫರ್ಪುರದಲ್ಲಿ ವರದಿಯಾಗಿದೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪ್ರಬಲ ರಾಜಕಾರಣಿಗಳು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದೆ.
ಉದ್ಯೋಗ ಹಗರಣವು ಇಡೀ ದೇಶವನ್ನು ತಲ್ಲಣಗೊಳಿಸಿದೆ. ಕೋಣೆಯೊಂದರಲ್ಲಿ ಯುವತಿಯೊಬ್ಬಳ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಹಗರಣದ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ಆರ್ ಜೆ ಡಿ ಸಂಸದ ಭಾಯಿ ವಿರೇಂದ್ರ, ಸಾಕಷ್ಟು ರಾಜಕಾರಣಿಗಳು ಬಿಹಾರದಲ್ಲಿ ಯುವತಿಯರನ್ನು ಪೂರೈಸುತ್ತಿದ್ದಾರೆ. ಈ ಹಗರಣವು ಅದರೊಂದಿಗೆ ಸಂಪರ್ಕ ಹೊಂದಿದೆ. ಇಂತಹ ವ್ಯಕ್ತಿಗಳನ್ನು ಮಟ್ಟಹಾಕುವವರೆಗೂ ಇಂತಹ ಕೃತ್ಯಗಳು ಮುಂದುವರಿಯಲಿವೆ ಎಂದು ಹೇಳಿದ್ದಾರೆ.
ಮಹಿಳೆಯೊಬ್ಬರು ಈ ಕುರಿತು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರಿಂದ ಈ ಹಗರಣ ಹೊರ ಬಂದಿದೆ. ಚಾಪ್ರಾದ ನಿವಾಸಿಯಾದ ಈ ಮಹಿಳೆಯು ಅಹಿಯಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಇದುವರೆಗೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು The Indian Express ವರದಿ ಮಾಡಿದೆ.
#WATCH | Bihar: Muzaffarpur SDPO Vinita Sinha says, "It has come to our knowledge that a company was running a fake call centre in which women were being cheated by alluring them. In this regard, an FIR has been registered on June 9. The litigant's statement has been recorded.… pic.twitter.com/LaeN039AbO
— ANI (@ANI) June 18, 2024
2022ರಲ್ಲಿ ಉದ್ಯೋಗ ನೀಡುವುದಾಗಿ ಜಾಹೀರಾತು ನೀಡಿದ್ದ ಸಂಸ್ಥೆಯೊಂದರ ಸಂಪರ್ಕಕ್ಕೆ ಬಂದಿದ್ದ ಸಂತ್ರಸ್ತ ಮಹಿಳೆಯು, ನಂತರ ಲೈಂಗಿಕ ದೌರ್ಜನ್ಯ ಮತ್ತು ದೈಹಿಕ ದೌರ್ಜನ್ಯಕ್ಕೆ ಗುರಿಯಾಗಿರುವುದು ಈ ವಿಡಿಯೊದಿಂದ ಬಹಿರಂಗವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಝಾಫ್ಫರ್ ಪುರ್ ಉಪ ವಿಭಾಗ ಪೊಲೀಸ್ ಅಧಿಕಾರಿ ವಿನಿತಾ ಸಿನ್ಹಾ, ಈ ಸಂಬಂಧ ವಂಚನೆಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.