ಜಾರ್ಖಂಡ್ ಭೂಹಗರಣ | ಮಾಜಿ ಸಿಎಂ ಹೇಮಂತ್ ಸೊರೇನ್ ನ್ಯಾಯಾಂಗ ಬಂಧನ 14 ದಿನ ವಿಸ್ತರಣೆ

ಹೇಮಂತ್ ಸೊರೇನ್ | PC : PTI
ರಾಂಚಿ: ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನ್ಯಾಯಾಂಗ ಬಂಧನವನ್ನು ರಾಂಚಿಯ ವಿಶೇಷ ಪಿಎಂಎಲ್ಎ ನ್ಯಾಯಾಲಯ 14 ದಿನಗಳ ಕಾಲ ವಿಸ್ತರಿಸಿದೆ.
ಭೂಹಗರಣದ ಮೂಲಕ ಹಣ ಅಕ್ರಮ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸೋರೆನ್ ಅವರನ್ನು ರಾಂಚಿಯ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಸೊರೇನ್ ಹಾಗೂ ಇತರ 11 ಮಂದಿ ಆರೋಪಿಗಳನ್ನು ರಾಂಚಿಯ ವಿಶೇಷ ನ್ಯಾಯಾಲಯದ ಮುಂದೆ ಗುರುವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ನ್ಯಾಯಾಲಯ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿತು.
ಸೊರೇನ್ ಅವರಲ್ಲದೆ, ಅಮಾನತುಕೊಂಡ ಬಾರ್ಗೈ ವಲಯದ ಕಂದಾಯ ಸಬ್ ಇನ್ಸ್ಪೆಕ್ಟರ್ ಬಾನು ಪ್ರತಾಪ್, ಜೆಎಂಎಂ ನಾಯಕರಾದ ಅಂತು ತಿರ್ಕೆ, ಮುಹಮ್ಮದ್ ಸದ್ದಾಮ್, ಮುಹಮ್ಮದ್ ಅಫ್ಸರ್ ಅಲಿ, ವಿಪಿನ್ ಸಿಂಗ್, ಪ್ರಿಯರಂಜನ್ ಸಹಾಯ್, ಇರ್ಶದ್ ಅಖ್ತರ್, ಶೇಖರ್ ಕುಸ್ವಾಹ, ಮುಹಮ್ಮದ್ ಇರ್ಶಾದ್, ಕೊಲ್ಕತ್ತಾಸ್ ರಿಜಿಸ್ಟ್ರಾರ್ ಆಫ್ ಅಶ್ಯುರೆನ್ಸ್ನ ಇಬ್ಬರು ಉದ್ಯೋಗಿಗಳಾದ ತಪಸ್ ಘೋಶ್ ಹಾಗೂ ಸಂಜಿತ್ ಕುಮಾರ್ ಕೂಡ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾದರು.
ಎಲ್ಲಾ ಆರೋಪಿಗಳು ಜುಲೈ 11ರಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ.







