ದಿಲ್ಲಿ: ಮೇಲ್ವಿಚಾರಕನಿಂದಲೇ ಅತ್ಯಾಚಾರಕ್ಕೀಡಾಗಿದ್ದ ಮಹಿಳಾ ಭದ್ರತಾ ಸಿಬ್ಬಂದಿ ಮೃತ್ಯು

ಘಾಜಿಯಾಬಾದ್: ತನ್ನ ಮೇಲ್ವಿಚಾರಕನಿಂದಲೇ ಅತ್ಯಾಚಾರಕ್ಕೀಡಾಗಿದ್ದ ಇಲ್ಲಿನ ಹೌಸಿಂಗ್ ಸೊಸೈಟಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಮಹಿಳಾ ಭದ್ರತಾ ಸಿಬ್ಬಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಜಯ್ (32 ವರ್ಷ) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ರವಿವಾರ ಕೃತ್ಯ ನಡೆದಿದೆ. ಸಂತ್ರಸ್ತೆಯನ್ನು ಆಕೆಯ ಸ್ಥಿತಿ ಹದಗೆಡಲು ಆರಂಭಿಸಿದ್ದರಿಂದ ಆಕೆಯ ಸಹೋದ್ಯೋಗಿಗಳು ದಿಲ್ಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಸೋಮವಾರ ಬೆಳಗ್ಗೆ ಸಂತ್ರಸ್ತೆ ಕೊನೆಯುಸಿರೆಳೆದಿದ್ದಾಳೆ
ಮಹಿಳೆ ಜಾರ್ಖಂಡ್ ರಾಜ್ಯದವಳಾಗಿದ್ದು ಹೌಸಿಂಗ್ ಸೊಸೈಟಿಯ ಸಮೀಪದಲ್ಲಿ ತನ್ನ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೊಸೈಟಿಯ ನೆಲಮಾಳಿಗೆಯಲ್ಲಿ ಮೂವರು ವ್ಯಕ್ತಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ನಂತರ ವಿಷ ಕುಡಿಸಿದ್ದಾರೆ ಎಂದು ಯುವತಿಯ ಕುಟುಂಬದವರು ಆರೋಪಿಸಿದ್ದಾರೆ, ಆರೋಗ್ಯ ಹದಗೆಟ್ಟ ಕಾರಣ ಆಕೆಯನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಡಿಸಿಪಿ (ಗ್ರಾಮೀಣ) ವಿವೇಕ್ ಚಂದ್ ಯಾದವ್ ಅವರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಹೇಳಿದ್ದರಿಂದ ಪೊಲೀಸರು ಅತ್ಯಾಚಾರದ ಸೆಕ್ಷನ್ (376 ಐಪಿಸಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ನೆಲಮಾಳಿಗೆಯೊಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಿಂದ ಪೊಲೀಸರು ದೃಶ್ಯಗಳನ್ನು ಪಡೆದುಕೊಂಡಿದ್ದಾರೆ, ಇದರಲ್ಲಿ ಯಾವುದೇ ಸಾಮೂಹಿಕ ಅತ್ಯಾಚಾರದ ಘಟನೆ ಕಂಡುಬಂದಿಲ್ಲ ಎಂದು ಅವರು ಹೇಳಿದರು







