ದಿಲ್ಲಿ | ರೆಸ್ಟೋರೆಂಟ್ ನಲ್ಲಿ ಬೆಂಕಿ ಅವಘಡ: 10 ಮಂದಿ ಮೃತ್ಯು

Photo credit: indiatoday.in
ಹೊಸದಿಲ್ಲಿ: ಬುಧವಾರ ದಿಲ್ಲಿಯ ಐಷಾರಾಮಿ ಮಾಳವಿಯಾ ನಗರದ ರೆಸ್ಟೋರೆಂಟ್ ಒಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯ ಮಾಹಿತಿಯನ್ನು ಬೆಳಗ್ಗೆ 9 ಗಂಟೆಗೆ ದಿಲ್ಲಿ ಅಗ್ನಿಶಾಮಕ ದಳ ಸ್ವೀಕರಿಸಿದ್ದು, ಅದರ ಬೆನ್ನಿಗೇ ಸುಮಾರು 10 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಕಟ್ಟಡ ತಳಮಹಡಿಯಿಂದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದು, ಅವರನ್ನೆಲ್ಲ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದು ಇದುವರೆಗೆ ತಿಳಿದು ಬಂದಿಲ್ಲ.
दिल्ली के मालवीय नगर में भयंकर अग्निकांड
— Sudhanshu Vishwakarma (@sudhanshuvishwa) June 3, 2026
फ्लॉरिस स्टे होटल के लेमन ग्रीन रेस्टोरेंट में लगी भयंकर आग, अब तक 20 लोगों की मौत की खबर।
कई लोगों ने बिल्डिंग से कूदकर अपनी जान बचाने की कोशिश की,
दमकल विभाग की टीम मौके पर, अब तक 3 लोगों को सुरक्षित निकाला गया।#delhifire #MalviyaNagar pic.twitter.com/PQTvnBIzIR






