ಇನ್ನೂ 1.5 ಲಕ್ಷ ಮಂದಿಗೆ ಉದ್ಯೋಗ ದೊರೆಯಲಿದೆ: ಪ್ರಧಾನಿ ಮೋದಿ
ಸೂರತ್ ನಲ್ಲಿ ನೂತನ ವಜ್ರ ವಿನಿಮಯ ಮಾರುಕಟ್ಟೆ ಉದ್ಘಾಟನೆ
Photo : twitter/narendramodi
ಸೂರತ್: "ಸೂರತ್ ನ ಮುಕುಟಕ್ಕೆ ಮತ್ತೊಂದು ವಜ್ರ ಸೇರ್ಪಡೆಯಾಗಿದೆ. ಇಂತಹ ಬೃಹತ್ ವಜ್ರದೆದುರು ವಿಶ್ವದ ಗಗನಚುಂಬಿ ಕಟ್ಟಡಗಳೆಲ್ಲ ಮಸುಕಾಗಿವೆ" ಎಂದು ಸೂರತ್ ವಜ್ರ ವಿನಿಮಯ ಮಾರುಕಟ್ಟೆಯನ್ನು ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ, "ಸೂರತ್ ವಜ್ರೋದ್ಯಮವು ಸುಮಾರು ಎಂಟು ಲಕ್ಷ ಜನರಿಗೆ ಉದ್ಯೋಗ ನೀಡಿದ್ದು, ಈ ವಜ್ರ ವಿನಿಮಯ ಮಾರುಕಟ್ಟೆಯಿಂದ ಇನ್ನೂ 1.5 ಲಕ್ಷ ಮಂದಿಗೆ ಉದ್ಯೋಗ ದೊರೆಯಲಿದೆ" ಎಂದು ಹೇಳಿದ್ದಾರೆ ಎಂದು indianexpress.com ವರದಿ ಮಾಡಿದೆ.
ಸೂರತ್ ನಲ್ಲಿಂದು ನೂತನ ಸೂರತ್ ವಜ್ರ ವಿನಿಮಯ ಮಾರುಕಟ್ಟೆಯನ್ನು ಉದ್ಘಾಟಿಸಿದ ಮಾತನಾಡಿದ ಪ್ರಧಾನಿ ಮೋದಿ, "ಸೂರತ್ ವಜ್ರ ವಿನಿಮಯ ಮಾರುಕಟ್ಟೆಯು ಭಾರತದ ವಿನ್ಯಾಸ, ವಿನ್ಯಾಸಕರು, ವಸ್ತುಗಳು ಹಾಗೂ ಭಾರತೀಯ ಪರಿಕಲ್ಪನೆಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಸೂರತ್ ವಜ್ರ ವಿನಿಮಯ ಮಾರುಕಟ್ಟೆಗಾಗಿ ನಾನು ಇಡೀ ವಜ್ರೋದ್ಯಮ, ಸೂರತ್ ಹಾಗೂ ದೇಶವನ್ನು ಅಭಿನಂದಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
66 ಚದರ ಅಡಿ ಪ್ರದೇಶದಲ್ಲಿ ನಿರ್ಮಾಣವಾಗಿರುವ DREAM (Diamond Research and Mercantile) ವಾಣಿಜ್ಯ ಸಂಕೀರ್ಣವನ್ನು ಗ್ರೀನ್ಫೀಲ್ಡ್ ಪ್ರಾಜೆಕ್ಟ್ ವಿನ್ಯಾಸಗೊಳಿಸಿದ್ದು, ಈ ಉಪನಗರವು 700 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಈ ವ್ಯಾಪಾರ ಮಾರುಕಟ್ಟೆಯು ಪರಸ್ಪರ ಸಂಪರ್ಕ ಹೊಂದಿರುವ 15 ಅಂತಸ್ತಿನ ಗೋಪುರಗಳನ್ನು ಹೊಂದಿದ್ದು, ಕಚೇರಿ ಕೋಣೆಗಳ ವಿಸ್ತಾರವು 300 ಚದರ ಅಡಿಯಿಂದ 7,500 ಚದರ ಅಡಿಯವರೆಗೂ ಇದೆ.
Today marks a special milestone with the inauguration of the Surat Diamond Bourse. This world-class hub is set to revolutionize the diamond industry, enhancing India's global presence in gem trade while boosting local economy and employment. pic.twitter.com/yITxZ8BioV
— Narendra Modi (@narendramodi) December 17, 2023