2026ರ ತಮಿಳುನಾಡು ಚುನಾವಣೆ: ವಿಜಯ್ ಪಕ್ಷಕ್ಕೆ ‘ಸೀಟಿ’ ಚಿಹ್ನೆ

ನಟ ವಿಜಯ | Photo Credit :PTI
ಹೊಸದಿಲ್ಲಿ,ಜ.22: ತಮಿಳುನಾಡು ವಿಧಾನಸಭಾ ಚುನಾವಣೆಗಳಿಗೆ ಮುನ್ನ ಚುನಾವಣಾ ಆಯೋಗವು ಗುರುವಾರ ನಟ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮತ್ತು ನಟ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ (ಎಂಎನ್ಎಂ) ಪಕ್ಷಗಳಿಗೆ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಿದೆ.
‘ಸೀಟಿ’ ಟಿವಿಕೆಯ ಚುನಾವಣಾ ಚಿಹ್ನೆಯಾಗಿದ್ದರೆ,ಎಂಎನ್ಎಂ ‘ಬ್ಯಾಟರಿ ಟಾರ್ಚ್’ ಚಿಹ್ನೆಯನ್ನು ಪಡೆದಿದೆ.
Next Story





