Assam| ರಾಜಧಾನಿ ಎಕ್ಸ್ ಪ್ರೆಸ್ ರೈಲು ಢಿಕ್ಕಿ: 7 ಆನೆಗಳು ಮೃತ್ಯು

Photo|ndtv
ಗುವಾಹಟಿ: ಶನಿವಾರ ನಸುಕಿನಲ್ಲಿ ಅಸ್ಸಾಂನ ನಾಗಾಂವ್ ಬಳಿ ಸಾಯಿರಂಗ್(ಮಿಝೋರಾಂ)-ಹೊಸದಿಲ್ಲಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ ರೈಲು ಢಿಕ್ಕಿ ಹೊಡೆದು 7 ಆನೆಗಳು ಸ್ಥಳದಲ್ಲೇ ಮೃತಪಟ್ಟಿದೆ. ಈ ವೇಳೆ ರೈಲಿನ 5 ಭೋಗಿಗಳು ಹಳಿ ತಪ್ಪಿದೆ.
ಶನಿವಾರ ಮುಂಜಾನೆ 2.17ರ ವೇಳೆ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಐದು ಬೋಗಿಗಳು ಹಳಿ ತಪ್ಪಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಈಶಾನ್ಯ ಗಡಿನಾಡು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
“ಆನೆಗಳ ಹಿಂಡು ರೈಲ್ವೆ ಹಳಿ ದಾಟುತ್ತಿರುವುದನ್ನು ಗಮನಿಸಿದ ಲೋಕೊ ಪೈಲಟ್ ತುರ್ತು ಬ್ರೇಕ್ ಚಲಾಯಿಸಿದ್ದಾರೆ. ಈ ವೇಳೆ ಆನೆಗಳಿಗೆ ರೈಲು ಢಿಕ್ಕಿ ಹೊಡೆದಿವೆ” ಎಂದು ಈಶಾನ್ಯ ಗಡಿನಾಡು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳವು ಆನೆ ಕಾರಿಡಾರ್ ಆಗಿರಲಿಲ್ಲ ಎಂದೂ ಈ ಪ್ರಕಟನೆಯಲ್ಲಿ ಹೇಳಲಾಗಿದೆ. ಅಪಘಾತ ನಡೆದ ಸ್ಥಳ ಗುವಾಹಟಿಯಿಂದ 126 ಕಿಮೀ ದೂರವಿದೆ.
ಹಳಿಗಳ ಮೇಲೆ ಆನೆಗಳು ಮೃತಪಟ್ಟಿರುವುದು, ನಿರ್ದಿಷ್ಟವಾಗಿ ಚಳಿಗಾಲದಲ್ಲಿ ಮೃತಪಟ್ಟಿರುವುದು ಕಳವಳಕ್ಕೆ ಕಾರಣವಾಗಿದೆ.





