35ರ ಮಹಿಳೆಯನ್ನು ವಿವಾಹವಾದ 75ರ ವ್ಯಕ್ತಿ ಮಧುಚಂದ್ರಕ್ಕೆ ಮುನ್ನವೇ ಮೃತ್ಯು!

PC: ndtv.com
ಲಕ್ನೋ: 35 ವರ್ಷದ ಮಹಿಳೆಯನ್ನು ವಿವಾಹವಾದ 75 ವರ್ಷ ವಯಸ್ಸಿನ ಸಂಗ್ರುರಾಮ್ ಎಂಬ ವ್ಯಕ್ತಿ ವಿವಾಹದ ಮರುದಿನವೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಜಾನ್ಪುರ ಜಿಲ್ಲೆಯ ಮುಚ್ಚುಮುಚ್ಚು ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಒಂದು ವರ್ಷದ ಹಿಂದಷ್ಟೇ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದ ಸಂಗ್ರುರಾಮ್ ಒಬ್ಬಂಟಿಯಾಗಿ ವಾಸವಿದ್ದರು. ಮಕ್ಕಳು ಇಲ್ಲದೇ ತಾವೇ ಸ್ವತಃ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಸಂಬಂಧಿಕರ ಸಲಹೆಯಂತೆ ಮರುವಿವಾಹಕ್ಕೆ ಒಪ್ಪಿಕೊಂಡ ಅವರು ಸೆಪ್ಟೆಂಬರ್ 29ರಂದು ಸೋಮವಾರ ಜಲಾಲ್ಪುರದ 35 ವರ್ಷ ವಯಸ್ಸಿನ ಮಂಬಾವತಿ ಎಂಬ ಮಹಿಳೆಯನ್ನು ವಿವಾಹವಾದರು. ಕೋರ್ಟ್ ನಲ್ಲಿ ನೋಂದಣಿ ಮಾಡಿಸಿದ ಬಳಿಕ ಸ್ಥಳೀಯ ದೇವಾಲಯದಲ್ಲಿ ವಿಧಿವಿಧಾನಗಳು ನಡೆದವು.
ವಿವಾಹದ ಬಳಿಕ ನನ್ನ ಹೊಣೆಗಾರಿಕೆಯ ಜತೆಗೆ ಮಕ್ಕಳ ಹೊಣೆಗಾರಿಕೆಯನ್ನೂ ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾಗಿ ಮಂಬಾವತಿ ಹೇಳಿದ್ದಾರೆ. ಇಬ್ಬರೂ ವಿವಾಹದ ದಿನ ರಾತ್ರಿ ಬಹಳಷ್ಟು ಮಾತನಾಡಿದ್ದಾಗಿ ಅವರು ವಿವರಿಸಿದ್ದಾರೆ. ಮುಂಜಾನೆ ವೇಳೆಗೆ ಸಂಗ್ರುರಾಮ್ ಆರೋಗ್ಯ ದಿಢೀರನೇ ಹದಗೆಟ್ಟಿತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದನ್ನು ವೈದ್ಯರು ಹೇಳಿದರು.
ಈ ದಿಢೀರ್ ಸಾವು ಗ್ರಾಮದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಲವರು ಇದನ್ನು ಸಹಜ ಸಾವು ಎಂದು ಹೇಳಿದ್ದರೆ, ಸಂದರ್ಭಗಳು ಅನುಮಾನಾಸ್ಪದವಾಗಿವೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.







