ಅರ್ನಬ್ ಗೋಸ್ವಾಮಿಯ ಚಾನೆಲ್ ಗೆ ಕಾಂಗ್ರೆಸ್ ಶಾಸಕ ಶುಭಕೋರಿದ ಪೋಸ್ಟ್ ವೈರಲ್

PHOTO:X\ @HC_Balakrishna
ಬೆಂಗಳೂರು : ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಮಾಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಚ್ ಸಿ ಬಾಲಕೃಷ್ಣ ಅರ್ನಬ್ ಗೋಸ್ವಾಮಿಯ ರಿಪಬ್ಲಿಕ್ ಕನ್ನಡ ಚಾನೆಲ್ ಗೆ ಶುಭ ಹಾರೈಸಿ ʼxʼ ನಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ, ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಸೇರಿದಂತೆ 14 ಟಿ ವಿ ಆಂಕರ್ ಗಳನ್ನು ಬಹಿಷ್ಕರಿಸುತ್ತೇವೆ, ಅವರ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಹೇಳಿರುವ ಬೆನ್ನಿಗೆ, ಶಾಸಕರು ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಕಾಂಗ್ರೆಸ್ ಶಾಸಕರ ಈ ನಡೆಯನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.
“ರಾಷ್ಟ್ರಮಟ್ಟದಲ್ಲಿ ಜನಮನ ಗೆದ್ದು ತನ್ನದೇ ಆದ ಗಟ್ಟಿ ಧ್ವನಿಯಿಂದ ಜನಪ್ರೀಯತೆ ಹೊಂದಿರುವ ಅರ್ನಾಬ್ ಗೋಸ್ವಾಮಿ ನೇತೃತ್ವದ @republic ಸುದ್ದಿವಾಹಿನಿ ಇಂದಿನಿಂದ @KannadaRepublic ಮೂಲಕ ಕನ್ನಡ ಲೋಕಕ್ಕೆ ಪಾದಾರ್ಪಣೆ ಮಾಡಿದೆ. ರಿಪಬ್ಲಿಕ್ ಕನ್ನಡ ಸಮಾಜಮುಖಿ ಸುದ್ದಿವಾಹಿನಿಯಾಗಿ ಕಾರ್ಯನಿರ್ವಹಿಸಲಿ, ಕನ್ನಡಿಗರ ದನಿ ಗಟ್ಟಿಗೊಳಿಸಲಿ ಎಂದು ಶುಭ ಹಾರೈಸುವೆ.” ಎಂದು ಶಾಸಕ ಎಚ್ ಸಿ ಬಾಲಕೃಷ್ಣ ಪೋಸ್ಟ್ ಮಾಡಿದ್ದಾರೆ.







