Rejinagar ಉಪಚುನಾವಣೆ | ಮತ ಚಲಾಯಿಸಿದ ಬೆನ್ನಲ್ಲೆ ಶಾಸಕ ಹುಮಾಯೂನ್ ಕಬೀರ್ ರನ್ನು ವಶಕ್ಕೆ ಪಡೆದ ಪೊಲೀಸರು

ಹುಮಾಯೂನ್ ಕಬೀರ್ | Photo Credit : ANI
ಕೊಲ್ಕತ್ತಾ: ರೇಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತ ಚಲಾಯಿಸಿದ ಬೆನ್ನಲ್ಲೆ ಆಮ್ ಜನತಾ ಉನ್ನಯನ್ ಪಾರ್ಟಿ(AJUP) ಮುಖ್ಯಸ್ಥ ಹಾಗೂ ಶಾಸಕ ಹುಮಾಯೂನ್ ಕಬೀರ್ ಅವರನ್ನು ರೇಜಿನಗರ ಪೊಲೀಸರು ಮಂಗಳವಾರ ವಶಕ್ಕೆ ಪಡೆದು, ಮುರ್ಷಿದಾಬಾದ್ನಲ್ಲಿರುವ ಅವರ ಪಕ್ಷದ ಕಚೇರಿಯಿಂದ ಕರೆದೊಯ್ದಿದ್ದಾರೆ.
ತನ್ನ ನಿವಾಸ ಹಾಗೂ ಮತಗಟ್ಟೆಯ ಬಳಿ ಪೊಲೀಸರನ್ನು ನಿಯೋಜಿಸಿರುವ ವಿಚಾರವಾಗಿ ಹುಮಾಯೂನ್ ಕಬೀರ್ ಅವರು ಈ ಮೊದಲು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕುಟುಂಬಸ್ಥರೊಂದಿಗೆ ಮತ ಚಲಾಯಿಸಿದ ಕೆಲವೇ ಹೊತ್ತಿನಲ್ಲಿ ಹುಮಾಯೂನ್ ಕಬೀರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿಯ 5 ವಿಧಾನಸಭಾ ಕ್ಷೇತ್ರಗಳು ಹಾಗೂ ಅಸ್ಸಾಂನ 1 ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಮಂಗಳವಾರ ಆರಂಭವಾಗಿದೆ. ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
Next Story




