ಸುರಂಗ ಕುಸಿತ| ರಕ್ಷಣಾ ಕಾರ್ಯಾಚರಣೆ ಯಶಸ್ವಿ: 17 ದಿನಗಳ ಬಳಿಕ ಹೊರ ಜಗತ್ತು ನೋಡಿದ 41 ಕಾರ್ಮಿಕರು
Photo : PTI
ಉತ್ತರಕಾಶಿ: ಉತ್ತರಖಾಂಡ ಸುರಂಗ ಕುಸಿತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಕೊನೆಗೂ ಪೂರ್ಣಗೊಂಡಿದ್ದು, ಎಲ್ಲಾ 41 ಕಾರ್ಮಿಕರನ್ನು ಹೊರ ಕರೆತರಲಾಗಿದೆ.
ಸುರಂಗದೊಳಗೆ ಮತ್ತು ಹೊರಗಡೆ ವಾತಾವರಣದ ಏರುಪೇರು ಇರುವುದರಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ವರದಿಗಳು ಹೇಳಿವೆ.
ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಕಾರ್ಮಿಕರು ಬರೋಬ್ಬರಿ 17 ದಿನಗಳಿಂದ ಸುರಂಗದೊಳಗೆ ಸಿಲುಕಿದ್ದರು. ಅಗರ್ ಯಂತ್ರದಲ್ಲಿ ದೋಷ ಕಂಡ ಬಳಿಕ ಕೈಯ್ಯಲ್ಲಿ ಹಿಡಿಯುವ ಯಂತ್ರಗಳಿಂದಲೇ ಕೊರೆಯುವ ಕಾರ್ಯವನ್ನು ನಡೆಸಲಾಯಿತು.
41 ಕಾರ್ಮಿಕರನ್ನು ರಕ್ಷಿಸುವ ಭಾರತೀಯ ಸೇನಾ ಕಾರ್ಯಾಚರಣೆಗೆ ಉತ್ತರ ಪ್ರದೇಶದ ಝಾನ್ಸಿಯ ಆರು ಮಂದಿ 'ರ್ಯಾಟ್ ಹೋಲ್' ಗಣಿ ಕುಶಲಕಾರ್ಮಿಕರ ತಂಡ ಕೈಜೋಡಿಸಿತ್ತು.
ನ. 12ರಂದು ಸುರಂಗದ ಒಂದು ಭಾಗ ಕುಸಿದಿದ್ದರಿಂದ 41 ಕಾರ್ಮಿಕರು ಒಳಗಡೆ ಸಿಲುಕಿದ್ದರು.
Next Story