ಮಲಿವಾಲ್ ಮೇಲೆ ಹಲ್ಲೆ ಆರೋಪ | ಸಂಸದೆಯ ನಿವಾಸಕ್ಕೆ ಪೋಲಿಸ್ ತಂಡದ ಭೇಟಿ
![ಮಲಿವಾಲ್ ಮೇಲೆ ಹಲ್ಲೆ ಆರೋಪ | ಸಂಸದೆಯ ನಿವಾಸಕ್ಕೆ ಪೋಲಿಸ್ ತಂಡದ ಭೇಟಿ ಮಲಿವಾಲ್ ಮೇಲೆ ಹಲ್ಲೆ ಆರೋಪ | ಸಂಸದೆಯ ನಿವಾಸಕ್ಕೆ ಪೋಲಿಸ್ ತಂಡದ ಭೇಟಿ](https://www.varthabharati.in/h-upload/2024/05/16/1266966-13.webp)
PC : PTI
ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದಲ್ಲಿ ಆಪ್ ನ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೋಲಿಸರ ತಂಡವೊಂದು ಗುರುವಾರ ಅವರ ನಿವಾಸಕ್ಕೆ ಭೇಟಿ ನೀಡಿ ವಿವರಗಳನ್ನು ಪಡೆದುಕೊಂಡಿದೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್ ರ ಖಾಸಗಿ ಸಿಬ್ಬಂದಿಯೋರ್ವರು ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಮಲಿವಾಲ್ ಸೋಮವಾರ ಇಲ್ಲಿಯ ಸಿವಿಲ್ ಲೈನ್ಸ್ ಪೋಲಿಸ್ ಠಾಣೆಯಲ್ಲಿ ದೂರಿಕೊಂಡಿದ್ದರು.
ಮಲಿವಾಲ್ ಆರೋಪಗಳ ಕುರಿತು ರಾಷ್ಟ್ರೀಯ ಮಹಿಳಾ ಆಯೋಗವು ಶುಕ್ರವಾರ ಕೇಜ್ರಿವಾಲ್ರ ಸಹಾಯಕ ಬಿಭವ ಕುಮಾರ್ ಅವರ ವಿಚಾರಣೆಯನ್ನು ನಡೆಸಲಿದ್ದು,ಈ ಬಗ್ಗೆ ಅವರಿಗೆ ಸಮನ್ಸ್ ಹೊರಡಿಸಿದೆ.
ಮಲಿವಾಲ್ ಅವರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ ಎಂದು ಹಿರಿಯ ಆಪ್ ನಾಯಕ ಸಂಜಯ್ ಸಿಂಗ್ ಅವರು ಮಂಗಳವಾರ ಹೇಳಿದ್ದರು.
Next Story