ಅಮೆರಿಕ ಕಾರ್ಯಕ್ರಮಕ್ಕೆ ಮುನ್ನ ವಿಮಾನದಲ್ಲಿ ಅಮ್ಜದ್ ಅಲಿ ಖಾನ್ ಅವರ ಸಂಗೀತ ಉಪಕರಣಗಳು ನಾಪತ್ತೆ

ಅಮ್ಜದ್ ಅಲಿ ಖಾನ್ | Photo Credit : NDTV
ಹೊಸದಿಲ್ಲಿ: ಸರೋದ್ ಮಾಂತ್ರಿಕ ಅಮ್ಜದ್ ಅಲಿ ಖಾನ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಏಕೆಂದರೆ ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ಪ್ರಯಾಣಿಸಿದ ನಂತರ ಅವರ ತಂಡದ ಎಲ್ಲ ಸಂಗೀತ ಉಪಕರಣಗಳು ನಾಪತ್ತೆಯಾಗಿವೆ.
ಖಾನ್ ತನ್ನ ತಂಡದೊಂದಿಗೆ ಪ್ರಸ್ತುತ ಅಮೆರಿಕದಲ್ಲಿ ಸಂಗೀತ ಪ್ರವಾಸದಲ್ಲಿದ್ದು, ಸಂಗೀತ ಕಚೇರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಉಪಕರಣಗಳನ್ನು ಆದ್ಯತೆಯ ಮೇರೆಗೆ ಪತ್ತೆಹಚ್ಚುವಂತೆ ಏರ್ವೇಸ್ಗೆ ಮನವಿ ಮಾಡಿದ್ದಾರೆ.
ಖಾನ್ ಅವರ ಪುತ್ರರಾದ ಅಮಾನ್ ಅಲಿ ಬಂಗಾಶ್ ಮತ್ತು ಅಯಾನ್ ಅಲಿ ಬಂಗಾಶ್ ಅವರನ್ನು ಒಳಗೊಂಡಿರುವ ತಂಡಕ್ಕೆ ಆರು ಸಂಗೀತ ಉಪಕರಣಗಳು ಇನ್ನೂ ತಲುಪಿಲ್ಲ. ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ಖಾನ್ ಅವರು ಉಪಕರಣಗಳನ್ನು ಕಳೆದುಕೊಂಡಿರುವುದು ಇದು ಎರಡನೇ ಬಾರಿಯಾಗಿದೆ. 2014ರಲ್ಲಿ ಲಂಡನ್ನಿಂದ ದಿಲ್ಲಿಗೆ ಪ್ರಯಾಣಿಸಿದ್ದಾಗ ಅವರು ‘ಗಂಗಾ’ ಎಂದು ಕರೆಯುವ ಅವರ ಅತ್ಯಮೂಲ್ಯ ಸರೋದ್ ನಾಪತ್ತೆಯಾಗಿತ್ತು. 48 ಗಂಟೆಗಳ ಬಳಿಕ ಕೊನೆಗೂ ಅದನ್ನು ಪತ್ತೆಹಚ್ಚಲಾಗಿತ್ತು.
Next Story




