ನರೇಂದ್ರ ಮೋದಿ ಇಂಡಿಯಾದ ಪ್ರಧಾನಿಯಲ್ಲ 'ಭಾರತದ ಪ್ರಧಾನಿ' ಎಂದು ಉಲ್ಲೇಖಿಸುವ ಮತ್ತೊಂದು ದಾಖಲೆ ಬೆಳಕಿಗೆ

Photo: Twitter
ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಜಿ20 ನಾಯಕರಿಗೆ ಔತಣಕೂಟಕ್ಕೆ ನೀಡಿರುವ ಆಮಂತ್ರಣದಲ್ಲಿ ಸಾಂಪ್ರದಾಯಿಕ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಎಂಬ ಪದದ ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂಬ ಪದವನ್ನು ಬಳಸಿರುವುದು ವಿವಾದ ಹಾಗೂ ಊಹಾಪೋಹಗಳಿಗೆ ಕಾರಣವಾಗಿತ್ತು. ಇದೀಗ ನರೇಂದ್ರ ಮೋದಿ ಅವರು 'ಇಂಡಿಯಾ'ದ ಪ್ರಧಾನಿಯಲ್ಲ, 'ಭಾರತ'ದ ಪ್ರಧಾನಿ ಎಂದು ಉಲ್ಲೇಖಿಸುವ ಮತ್ತೊಂದು ದಾಖಲೆ ಬೆಳಕಿಗೆ ಬಂದಿದೆ.
20ನೇ ಆಸಿಯಾನ್-ಭಾರತ ಶೃಂಗಸಭೆ ಹಾಗೂ 18ನೇ ಪೂರ್ವ ಏಷ್ಯಾ ಶೃಂಗಸಭೆಗಾಗಿ ಬುಧವಾರ ಮತ್ತು ಗುರುವಾರದಂದು ಪ್ರಧಾನಿ ಇಂಡೋನೇಷ್ಯಾಕ್ಕೆ ಪ್ರಧಾನಮಂತ್ರಿ ಭೇಟಿ ನೀಡಿದ ಟಿಪ್ಪಣಿಯಲ್ಲಿ 'ಪ್ರೈಮ್ ಮಿನಿಸ್ಟರ್ ಆಫ್ ಭಾರತ್' ಎಂಬ ಪದವನ್ನು ಬಳಸಲಾಗಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಎಕ್ಸ್ ನಲ್ಲಿ ಈ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದಾರೆ ಇದಕ್ಕೆ ಕಾಂಗ್ರೆಸ್ ಪಕ್ಷದಿಂದ ತಕ್ಷಣವೇ ವಾಗ್ದಾಳಿಗೆ ತುತ್ತಾಗಿದ್ದಾರೆ. ಒಂದೇ ದಾಖಲೆಯಲ್ಲಿ 'ಆಸಿಯಾನ್-ಇಂಡಿಯಾ ಸಮ್ಮಿಟ್ ಹಾಗೂ 'ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ' ಎರಡನ್ನೂ ಬಳಸಲಾಗಿದೆ ಎಂದು ಕಾಂಗ್ರೆಸ್ ಬೆಟ್ಟು ಮಾಡಿದೆ.
"ಮೋದಿ ಸರಕಾರ ಎಷ್ಟೊಂದು ಗೊಂದಲದಲ್ಲಿದೆ ನೋಡಿ! 20 ನೇ ಆಸಿಯಾನ್-ಇಂಡಿಯಾ ಶೃಂಗಸಭೆಯಲ್ಲಿ 'ಪ್ರೈಮ್ ಮಿನಿಸ್ಟರ್ ಆಫ್ ಭಾರತ್. ಪ್ರತಿಪಕ್ಷಗಳು ಒಟ್ಟಾಗಿ ತಮ್ಮನ್ನು INDIA ಎಂದು ಕರೆದಿದ್ದಕ್ಕಾಗಿ ಈ ಎಲ್ಲಾ ನಾಟಕ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪೋಸ್ಟ್ ಮಾಡಿದ್ದಾರೆ.







