ಗೋವಾ ಆರೋಗ್ಯ ಸಚಿವರ ವಿರುದ್ಧ ತಿರುಗಿಬಿದ್ದ ವೈದ್ಯರು : ಬಹಿರಂಗ ಕ್ಷಮೆಯಾಚನೆಗೆ ಪಟ್ಟು

ವಿಶ್ವಜಿತ್ ರಾಣೆ | PTI
ಪಣಜಿ : ರಾಜ್ಯದ 600ಕ್ಕೂ ಹೆಚ್ಚು ವೈದ್ಯರು, ಕನ್ಸಲ್ಟೆಂಟ್ಗಳು ಮತ್ತು ಗೋವಾ ಮೆಡಿಕಲ್ ಕಾಲೇಜಿನ ಇಂಟರ್ನಿ ವೈದ್ಯರು ಕ್ಯಾಂಪಸ್ನಲ್ಲಿ ಮಿಂಚಿನ ಪ್ರತಿಭಟನೆ ನಡೆಸಿ, ಆರೋಗ್ಯ ಸಚಿವ ವಿಶ್ವಜೀತ್ ರಾಣೆಯವರ ಬಹಿರಂಗ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದಾರೆ. ಅಪಘಾತ ವಿಭಾಗದಲ್ಲಿ ರುದ್ರೇಶ್ ಕುಟ್ಟಿಕಾರ್ ಎಂಬ ವೈದ್ಯರನ್ನು ನಿಂದಿಸಿ ಬೆದರಿಕೆ ಹಾಕಿದ ಸ್ಥಳದಲ್ಲೇ ಸಚಿವರು 24 ಗಂಟೆಗಳ ಒಳಗಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು; ಇಲ್ಲವೇ ಮುಷ್ಕರ ಎದುರಿಸಬೇಕು ಎಂದು ಸವಾಲು ಹಾಕಿದ್ದಾರೆ.
ಶನಿವಾರ ತಾವು ಆಡಿದ "ಕಟು ಶಬ್ದಗಳಿಗಾಗಿ ಕುಟ್ಟಿಕರ್ ಅವರಿಂದ ಕ್ಷಮೆ ಯಾಚಿಸುತ್ತೇನೆ" ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ರಾಣೆ ಹೇಳಿದ ಬೆನ್ನಲ್ಲೇ ವೈದ್ಯರು ಈ ಗಡುವು ನೀಡಿದ್ದಾರೆ. ರಾಣೆಯವರು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆ ಯಾಚಿಸಿರುವುದನ್ನು ಕುಟ್ಟಿಕರ್ ಅಥವಾ ಗೋವಾ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (ಜಿಎಆರ್ಡಿ) ಒಪ್ಪಿಕೊಂಡಿಲ್ಲ. ಬದಲಾಗಿ ಘಟನೆ ನಡೆದ ಸ್ಥಳದಲ್ಲೇ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಮೊದಲ ವಿಡಿಯೋ ವೈರಲ್ ಆದ ರೀತಿಯಲ್ಲೇ ಕ್ಷಮೆಯಾಚನೆ ವಿಡಿಯೋವನ್ನೂ ವೈರಲ್ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ನಮ್ಮ ವೃತ್ತಿ ಘನತೆಗೆ ಮಸಿ ಬಳಿದಿರುವ ವಿಚಾರ ಬಂದರೆ ಸುಮ್ಮನೆ ಕೂರುವುದಿಲ್ಲ ಎಂದು ಜಿಎಆರ್ಡಿ ಸ್ಪಷ್ಟಪಡಿಸಿದೆ. ಜೊತೆಗೆ ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸಬೇಕು ಹಾಗೂ ರೋಗಿಗಳ ಆರೈಕೆ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ವೈದ್ಯರಿಗೆ ಇಂಥ ಅವಮಾನ ಮಾಡುವ ಅಥವಾ ಬೇಕಾಬಿಟ್ಟಿ ಘಟನೆಗಳು ಮರುಕಳಿಸಬಾರದು ಎಂದು ತಿಳಿಸಿApologise publicly in 24 hours or face strike: Goa doctors to health minister Vishwajit Raneದ್ದಾರೆ.
ಕುಟ್ಟಿಕರ್ ಅಮಾನತು ಆದೇಶವನ್ನು ತಕ್ಷಣ ಬೇಷರತ್ತಾಗಿ ಹಿಂದಕ್ಕೆ ಪಡೆಯಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ. ಆದರೆ ಇದುವರೆಗೆ ಅಮಾನತು ಆದೇಶ ಹೊರಡಿಸಿಲ್ಲ ಎಂದು ಡೀನ್ ಎಸ್.ಎಂ.ಬಂಡೇಕರ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಅವರ ವಿರುದ್ಧ ಯಾವುದೇ ಕ್ರಮಕ್ಕೆ ಶಿಫಾರಸ್ಸು ಮಾಡಿಲ್ಲ ಅಥವಾ ತನಿಖೆಗೂ ಆದೇಶ ನೀಡಿಲ್ಲ ಎಂದು ಹೇಳಿದ್ದಾರೆ.
ಐದು ಅಂಶಗಳ ಬೇಡಿಕೆ ಪಟ್ಟಿಯನ್ನು ಡೀನ್ ಅವರಿಗೆ ವೈದ್ಯರು ಸಲ್ಲಿಸಿದ್ದು, ಈ ವಿಚಾರದ ಬಗ್ಗೆ ಚರ್ಚಿಸಲು ಎಲ್ಲ ವಿಭಾಗ ಮಖ್ಯಸ್ಥರ ಸಭೆಯನ್ನು ಡೀನ್ ಕರೆದಿದ್ದಾರೆ.