ಮುಸ್ಲಿಮರನ್ನು ಗುರಿಯಾಗಿಸಿಕೊಂಡ AI ವೀಡಿಯೊ ಪೋಸ್ಟ್ : ತೀವ್ರ ಆಕ್ಷೇಪದ ಬೆನ್ನಲ್ಲೆ ಮಾಧ್ಯಮ ವಿಭಾಗದ ಸಹ ಸಂಚಾಲಕನನ್ನು ವಜಾಗೊಳಿಸಿದ ಅಸ್ಸಾಂ ಬಿಜೆಪಿ

Photo| PTI
ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಸ್ಲಿಮರ ಫೋಟೊಗಳ ಮೇಲೆ ಗುಂಡು ಹಾರಿಸುತ್ತಿರುವ ಎಐ ವೀಡಿಯೊಗೆ ತೀವ್ರ ವಿರೋಧದ ಬೆನ್ನಲ್ಲೆ ಅಸ್ಸಾಂ ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗದ ಸಹ ಸಂಚಾಲಕನನ್ನು ವಜಾಗೊಳಿಸಿದೆ.
ಹಿರಿಯ ನಾಯಕರ ಗಮನಕ್ಕೆ ತರದೆ ಮತ್ತು ಅನುಮತಿ ಪಡೆಯದೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಅಪ್ ಲೋಡ್ ಮಾಡಲಾಗಿದೆ ಎಂದು ರಾನ್ ಬಿಕಾಶ್ ಗೌರವ್ ಎಂಬಾತನನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಿದೆ.
ಫೆಬ್ರವರಿ 7ರಂದು ಈ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿತ್ತು. ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲಿ ವೀಡಿಯೊವನ್ನು ಡಿಲಿಟ್ ಮಾಡಲಾಗಿತ್ತು.
AI ವೀಡಿಯೊದಲ್ಲಿ ಅಸ್ಸಾಂ ಮುಖ್ಯಮಂತ್ರಿ ಇಬ್ಬರು ಮುಸ್ಲಿಂ ಪುರುಷರ ಮೇಲೆ ರೈಫಲ್ ಅನ್ನು ಗುರಿಯಿಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪತ್ರಕರ್ತರು ಸಿಎಂ ಶರ್ಮಾ ಅವರನ್ನು ಪ್ರಶ್ನಿಸಿದಾಗ, ಅಂತಹ ಯಾವುದೇ ವೀಡಿಯೊದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಗುವಾಹಟಿಯ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕಾಂಗ್ರೆಸ್ ಹಿಮಂತ ಬಿಸ್ವಾ ಶರ್ಮಾ ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿತ್ತು.





