Assam : ಹಳಿ ತಪ್ಪಿದ ಕೊಲ್ಕತ್ತಾ-ಸೈರಾಂಗ್ ಎಕ್ಸ್ಪ್ರೆಸ್ ರೈಲು; ಪ್ರಯಾಣಿಕರು ಸುರಕ್ಷಿತ

ಅಸ್ಸಾಂ: ಕೊಲ್ಕತ್ತಾದಿಂದ ಮಿಜೋರಾಂನ ಸೈರಾಂಗ್ಗೆ ತೆರಳುತ್ತಿದ್ದ ಕೊಲ್ಕತ್ತಾ-ಸೈರಾಂಗ್ ಎಕ್ಸ್ಪ್ರೆಸ್ನ ಎಂಜಿನ್ ಸೇರಿ 5 ಬೋಗಿಗಳು ಹಳಿತಪ್ಪಿರುವ ಘಟನೆ ಕಾಮರೂಪ ಜಿಲ್ಲೆಯ ದಿಗಾರು ರೈಲು ನಿಲ್ದಾಣದಲ್ಲಿ ಬುಧವಾರ ಮುಂಜಾನೆ ಬೆಳಗ್ಗೆ 6:54 ಗಂಟೆ ಸುಮಾರಿಗೆ ನಡೆದಿರುವ ಬಗ್ಗೆ ವರದಿಯಾಗಿದೆ.
ಲೋಕೋ ಪೈಲಟ್ಗೆ ರೈಲಿನ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದೆ, ಹಳಿತಪ್ಪಿದೆ ಎಂದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಪ್ರಯಾಣಿಕರಿಗೆ ಮತ್ತೊಂದು ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story




