ಲೇಖಕಿ ಗೀತಾ ಮೆಹ್ತಾ ಇನ್ನಿಲ್ಲ

ಗೀತಾ ಮೆಹ್ತಾ| Photo: twitter
ಹೊಸದಿಲ್ಲಿ : ಖ್ಯಾತ ಲೇಖಕಿ-ಚಲನಚಿತ್ರ ನಿರ್ಮಾಪಕಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಹೋದರಿ ಗೀತಾ ಮೆಹ್ತಾ ಅವರು ಶನಿವಾರ ನವದೆಹಲಿಯಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಬಿಜು ಪಟ್ನಾಯಕ್ ಅವರ ಪುತ್ರಿ ಗೀತಾ ಮೆಹ್ತಾ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
1943 ರಲ್ಲಿ ನವದೆಹಲಿಯಲ್ಲಿ ಬಿಜು ಮತ್ತು ಜ್ಞಾನ್ ಪಟ್ನಾಯಕ್ ದಂಪತಿಗೆ ಜನಿಸಿದ ಗೀತಾ ಮೆಹ್ತಾ ಅವರು ಭಾರತದಲ್ಲಿ ಮತ್ತು ಲಂಡನ್ ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಕರ್ಮ ಕೋಲಾ, ಸ್ನೇಕ್ ಅಂಡ್ ಲ್ಯಾಡರ್ಸ್, ಎ ರಿವರ್ ಸೂತ್ರ, ರಾಜ್ ಮತ್ತು ದಿ ಎಟರ್ನಲ್ ಗಣೇಶ ಎಂಬ ಮೂರು ಪುಸ್ತಕಗಳನ್ನು ಅವರು ಬರೆದಿದ್ದಾರೆ.
Next Story





