ಆ್ಯಕ್ಸಿಯಮ್ 4 ಮಿಷನ್ | ಉಡ್ಡಯನ ದಿನಕ್ಕಾಗಿ ಎ.ಆರ್. ರಹಮಾನ್ ಹಾಡನ್ನು ಆರಿಸಿದ ಶುಭಾಂಶು

ಶುಭಾಂಶು ಶುಕ್ಲಾ | PTI
ಹೊಸದಿಲ್ಲಿ: ನಲ್ವತ್ತು ವರ್ಷಗಳಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಸೃಷ್ಟಿಸಿರುವ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಉಡ್ಡಯನ ದಿನಕ್ಕಾಗಿ ಆರಿಸಿಕೊಂಡಿರುವ ವಿಶೇಷ ಹಾಡು 2004ರ ಹಿಂದಿ ಚಿತ್ರ ‘ಸ್ವದೇಸ್’ನ ‘ಯೂಂ ಹಿ ಚಲಾ ಚಲ್’.
ಗ್ರಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಸಂಯೋಜಿಸಿರುವ ಹಾಡನ್ನು ಉದಿತ್ ನಾರಾಯಣ್, ಕೈಲಾಶ್ ಖೇರ್ ಮತ್ತು ಹರಿಹರನ್ ಹಾಡಿದ್ದಾರೆ. ಹಾಡನ್ನು ಬರೆದವರು ಕವಿ ಜಾವೇದ್ ಅಖ್ತರ್.
ಈ ಹಾಡನ್ನು ಒಳಗೊಂಡ ಚಿತ್ರವು ಭಾರತ ಮೂಲದ ‘ನಾಸಾ’ ವಿಜ್ಞಾನಿಯೊಬ್ಬ ತನ್ನ ಮೂಲವನ್ನು ಅರಸಿಕೊಂಡು ಭಾರತಕ್ಕೆ ಬರುವ ಕತೆಯನ್ನು ಒಳಗೊಂಡಿದೆ. ನಾಸಾ ವಿಜ್ಞಾನಿಯ ಪಾತ್ರವನ್ನು ಶಾರುಖ್ ಖಾನ್ ನಿರ್ವಹಿಸಿದ್ದಾರೆ. ಈ ಚಿತ್ರದ ಕತೆಯು ಶುಭಾಂಶು ಶುಕ್ಲಾರ ಜೀವನ ಕತೆಯನ್ನು ಹೋಲುತ್ತದೆ. ಶುಕ್ಲಾ ಈಗ ಆ್ಯಕ್ಸಿಯಮ್ 4 ಮಿಶನ್ನಲ್ಲಿ ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣಿಸುತ್ತಿದ್ದಾರೆ.
Next Story





