ಉತ್ತರಾಖಂಡದಲ್ಲಿ ಆರು ಮಂದಿಯಿದ್ದ ಹೆಲಿಕಾಪ್ಟರ್ ನಾಪತ್ತೆ; ಪತನದ ಶಂಕೆ
ಜೋಶಿಮಠದ ಚಾಯಿ ಗ್ರಾಮದ ಬಳಿ ಅವಘಡದ ಅನುಮಾನ; ಪೈಲಟ್ ಸೇರಿ ಆರು ಮಂದಿಗಾಗಿ ಶೋಧ

Photo Credits: indiatoday.in
ಹೊಸದಿಲ್ಲಿ: ಬದರಿನಾಥದಿಂದ ಫಾಟಾಕ್ಕೆ ತೆರಳುತ್ತಿದ್ದ 'ಟ್ರಾನ್ಸ್ ಭಾರತ್ ಏವಿಯೇಷನ್' ಸಂಸ್ಥೆಯ ಹೆಲಿಕಾಪ್ಟರ್ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ನಾಪತ್ತೆಯಾಗಿದೆ. ಹೆಲಿಕಾಪ್ಟರ್ ಪತನಗೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೈಲಟ್ ಸೇರಿದಂತೆ ಅದರಲ್ಲಿದ್ದ ಆರು ಮಂದಿಯ ಸುಳಿವು ಸಿಕ್ಕಿಲ್ಲ. ಹೆಲಿಕಾಪ್ಟರ್ನ ಅವಶೇಷಗಳೂ ಪತ್ತೆಯಾಗಿಲ್ಲ.
ಜೋಶಿಮಠ ಪ್ರದೇಶದ 'ಹಾಥಿ ಪಹಾರ್' (ಆನೆಯ ಆಕಾರದ ಬೆಟ್ಟ) ಹಿಂಭಾಗದಲ್ಲಿರುವ ಚಾಯಿ ಗ್ರಾಮದ ಬಳಿ ಹೆಲಿಕಾಪ್ಟರ್ ಪತನಗೊಂಡಿರಬಹುದು ಎಂದು ಪ್ರಾಥಮಿಕ ಮಾಹಿತಿ ಆಧರಿಸಿ ಶಂಕಿಸಲಾಗಿದೆ. ನಾಪತ್ತೆಯಾದ ಹೆಲಿಕಾಪ್ಟರ್ ಹಾಗೂ ಅದರ ಅವಶೇಷಗಳ ಪತ್ತೆಗಾಗಿ ಇನ್ನೂ ಎರಡು ಹೆಲಿಕಾಪ್ಟರ್ಗಳನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಗಿದೆ.
Next Story




