ಭಾರತದಲ್ಲಿ ಡೆಲಿವರಿ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿರುವ ಬಾಂಗ್ಲಾದೇಶಿಯರು, ರೋಹಿಂಗ್ಯಗಳು : ಕೇಂದ್ರ ಸಚಿವ ಗಿರಿರಾಜ್ ಸಿಂಗ್

Photo | PTI
ಹೈದರಾಬಾದ್: ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯರು ಭಾರತದಲ್ಲಿ ಆಹಾರ ವಿತರಣಾ ಕಂಪನಿಗಳು ಮತ್ತು ಆನ್ಲೈನ್ ಶಾಪಿಂಗ್ ವೇದಿಕೆಗಳಲ್ಲಿ ಡೆಲಿವರಿ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರನ್ನು ಪತ್ತೆಹಚ್ಚಬೇಕಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಎನ್ ಐಎಫ್ ಟಿ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಝೊಮ್ಯಾಟೊ, ಸ್ವಿಗ್ಗಿ ಅಥವಾ ಫ್ಲಿಪ್ ಕಾರ್ಟ್ ಸೇರಿದಂತೆ ಆನ್ಲೈನ್ ಶಾಪಿಂಗ್ ವೇದಿಕೆಗಳಲ್ಲಿ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯರು ಡೆಲಿವರಿ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪತ್ತೆಹಚ್ಚಿ ಪೊಲೀಸರಿಗೆ ಹಸ್ತಾಂತರಿಸಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.
ಸಂಭಲ್ ಮತ್ತು ಬಾಂಗ್ಲಾದೇಶದ ಘಟನೆಯನ್ನು ಹೋಲಿಕೆ ಮಾಡಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಗಿರಿರಾಜ್ ಸಿಂಗ್ ಇದೇ ವೇಳೆ ಸಮರ್ಥಿಸಿಕೊಂಡಿದ್ದಾರೆ. 500 ವರ್ಷಗಳ ಹಿಂದೆ ಅಯೋಧ್ಯೆ ಮತ್ತು ಸಂಭಾಲ್ ನಲ್ಲಿ ಮೊಘಲ್ ಚಕ್ರವರ್ತಿ ಬಾಬರ್ ನ ಕಮಾಂಡರ್ ಗಳು ಮಾಡಿದ್ದು ಮತ್ತು ಪ್ರಸ್ತುತ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಗಳು ಒಂದೇ ಸ್ವರೂಪದ್ದಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು.
ಭಾರತವು ವಿಭಜನೆಯಾಯಿತು, ಪಾಕಿಸ್ತಾನದಲ್ಲಿ ಹಿಂದೂಗಳನ್ನು ನಿರ್ನಾಮ ಮಾಡಲಾಯ್ತು. ಇಂದು ಬಾಂಗ್ಲಾದೇಶದಲ್ಲಿ ಅದೇ ನಡೆಯುತ್ತಿದೆ. ಜಿನ್ನಾ ಅವರ ಡಿಎನ್ಎ ಪಾಕಿಸ್ತಾನದಲ್ಲಿ ಇತ್ತು ಮತ್ತು ಜಿನ್ನಾ ಅವರ ಡಿಎನ್ಎ ಬಾಂಗ್ಲಾದೇಶದಲ್ಲಿದೆ. ಜಿನ್ನಾ ಅವರ ಡಿಎನ್ಎ ಸಂಭಾಲ್ ನಲ್ಲಿಯೂ ಇದೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
Union minister #GirirajSingh on Saturday claimed #Bangladeshi nationals and #Rohingyas were working as #delivery agents for #food delivery companies and online shopping platforms in #India and added that they should be identified.https://t.co/zVsqIad9Gw pic.twitter.com/rjn7ACiYcN
— Deccan Herald (@DeccanHerald) December 8, 2024