ಜೆಡಿಯು ಪಕ್ಷಕ್ಕೆ ಸೇರ್ಪಡೆಯಾದ ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್

Screengrab:X/@ANI
ಪಾಟ್ನಾ: ಪಾಟ್ನಾದಲ್ಲಿರುವ ಜೆಡಿಯು ಮುಖ್ಯ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಸುದೀರ್ಘ ಕಾಲದಿಂದ ರಾಜಕೀಯದಿಂದ ದೂರ ಉಳಿದಿದ್ದ ನಿಶಾಂತ್ ಕುಮಾರ್, ತಮ್ಮ ತಂದೆ ನಿತೀಶ್ ಕುಮಾರ್ ಅವರು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬೆನ್ನಿಗೇ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ.
50 ವರ್ಷದ ನಿಶಾಂತ್ ಕುಮಾರ್ ರವಿವಾರ ಜೆಡಿಯು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಝಾರಿಂದ ಅಧಿಕೃತವಾಗಿ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು. ಈ ವೇಳೆ ಹಿರಿಯ ನಾಯಕರಾದ ಕೇಂದ್ರ ಸಚಿವ ಲಲನ್ ಸಿಂಗ್, ಬಿಹಾರದ ಉಪ ಮುಖ್ಯಮಂತ್ರಿಯಾದ ವಿಜಯ್ ಚೌಧರಿ ಉಪಸ್ಥಿತರಿದ್ದರು.
#WATCH | Patna, Bihar: Nishant Kumar, son of CM Nitish Kumar, joins the Janata Dal (United) party pic.twitter.com/9qKnRMTxCR
— ANI (@ANI) March 8, 2026
Next Story







